ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ಮೋದಿ: ಮತ್ತೊಮ್ಮೆ ಖಾದ್ಯ ತೈಲಗಳ ಬೆಲೆಯಲ್ಲಿ ಬಾರಿ ಇಳಿಕೆ. ಈ ಬಾರಿ ಎಷ್ಟು ಗೊತ್ತೇ??
ನಮಸ್ಕಾರ ಸ್ನೇಹಿತರೇ ಸದ್ಯದ ಮಟ್ಟಿಗೆ ಬಹುತೇಕ ಎಲ್ಲಾ ಆಹಾರ ಪದಾರ್ಥಗಳು ಸೇರಿದಂತೆ ಕೆಲವೊಂದು ವಸ್ತುಗಳ ಬೆಲೆ ಎನ್ನುವುದು ಗಗನಮುಖಿಯಾಗಿದೆ. ಇದರ ನಡುವೆ ಅಡುಗೆ ತೈಲದ ಬೆಲೆಯನ್ನು ಕಡಿಮೆಗೊಳಿಸುವ ಕುರಿತಂತೆ ಆಹಾರ ಕಾರ್ಯದರ್ಶಿಗಳ ಸಭೆಯಲ್ಲಿ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂಬುದಾಗಿ ತಿಳಿದು ಬಂದಿದೆ.
ಅಡುಗೆ ತೈಲಗಳ ಉತ್ಪಾದಕ ಹಾಗೂ ವ್ಯಾಪಾರ ಸಂಸ್ಥೆಗಳ ಸಭೆಯನ್ನು ಇತ್ತೀಚೆಗೆ ಕರೆಯಲಾಗಿತ್ತು ಇದರಲ್ಲಿ ಆಹಾರ ಸಚಿವಾಲಯ ಖಾದ್ಯ ತೈಲಗಳ ಬೆಲೆಯನ್ನು ಎರಡು ವಾರಗಳಲ್ಲಿ ಹತ್ತು ರೂಪಾಯಿಗೆ ಕಡಿತಗೊಳಿಸಬೇಕು ಎನ್ನುವ ಆದೇಶವನ್ನು ನೀಡಿದೆ ಎಂಬುದಾಗಿ ತಿಳಿದು ಬಂದಿದೆ. ಮೇ ತಿಂಗಳ ನಂತರ ನಡೆದ ಮೂರನೇ ಸಭೆ ಇದಾಗಿದ್ದು, ಅದರಲ್ಲೂ ವಿಶೇಷವಾಗಿ ಇಂಡೋನೇಷ್ಯಾ ಸಾಗಣೆಯ ಮೇಲಿನ ಎಲ್ಲಾ ನಿರ್ಬಂಧಗಳನ್ನು ತೆಗೆದು ಹಾಕಿರುವ ಕಾರಣದಿಂದಾಗಿ ಜಾಗತಿಕವಾಗಿ ತಾಳೆ ಎಣ್ಣೆಯ ಬೆಲೆ ಕಡಿಮೆಯಾಗಿದ್ದು, ಸೂರ್ಯಕಾಂತಿ ಹಾಗೂ ಸೋಯಾ ಎಣ್ಣೆಗಳ ಮೇಲಿನ ಬೆಲೆ ಕೂಡ ಕಡಿಮೆಯಾಗುವ ಸಂಭವ ಹೆಚ್ಚಾಗಿದೆ.
ಈ ಸಂದರ್ಭದಲ್ಲಿ ಆಹಾರ ಸಚಿವಾಲಯ ಉದ್ಯಮವು ಗ್ರಾಹಕರಿಗೆ ಲಾಭಾಂಶವನ್ನು ವರ್ಗಾಯಿಸಬೇಕಾಗುತ್ತದೆ ಎಂಬುದಾಗಿ ಎಫ್ ಇ ಗೆ ಹೇಳಿಕೆ ನೀಡಿದ್ದು ಬೆಲೆಯಲ್ಲಿ ಇನ್ನಷ್ಟು ಇಳಿಕೆ ಕಂಡು ಬರುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ಹೇಳಿದ್ದಾರೆ. ಇನ್ನು ಕಳೆದ ತಿಂಗಳಷ್ಟೇ ಆಹಾರ ಹಾಗೂ ವಿತರಣಾ ಇಲಾಖೆ ಖಾದ್ಯ ತೈಲಗಳನ್ನು ಉತ್ಪಾದಿಸುವ ಹಾಗೂ ವ್ಯಾಪಾರ ಮಾಡುವ ಸಂಘ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಪ್ರತಿ ಲೀಟರ್ ಗೆ ಕನಿಷ್ಠ ರೂ 15 ಆದರೂ ಕಡಿಮೆ ಮಾಡಬೇಕು ಎಂಬುದಾಗಿ ಸೂಚನೆ ನೀಡಿವೆ ಎಂಬುದಾಗಿ ತಿಳಿದು ಬಂದಿದ್ದು ಮುಂದಿನ ದಿನಗಳಲ್ಲಿ ಖಾದ್ಯ ತೈಲಗಳ ಬೆಲೆ ಇನ್ನಷ್ಟು ಕಡಿಮೆಯಾದರೂ ಕೂಡ ಆಶ್ಚರ್ಯ ಪಡಬೇಕಾಗಿಲ್ಲ ಎಂಬುದು ಈ ಮೂಲಕ ನಾವು ತಿಳಿದುಕೊಳ್ಳಬಹುದು. ಖಾದ್ಯ ತೈಲಗಳ ಬೆಲೆ ಇಳಿಕೆಯ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.