ಟೆಲಿಕಾಂ ದಿಗ್ಗಜ ಮುಕೇಶ್ ಅಂಬಾನಿ ತಮ್ಮ ಮೊಬೈಲ್ ಅಲ್ಲಿ ಬಳಸೋ ಸಿಮ್ ಯಾವುದು ಗೊತ್ತೇ?
ಜಿಯೋ ಎಂದರೆ ಯಾರಿಗೆ ತಾನೆ ಗೊತ್ತಿಲ್ಲ , ಟೆಲಿಕಾಂ ಕ್ಷೇತ್ರದಲ್ಲಿ ಒಮ್ಮೆಗೇ ದೂಳೆಬ್ಬಿಸಿದ ಕಂಪನಿ ಇದು. ದಿಗ್ಗಜ ಕಂಪನಿಯಾದ ಮುಖೇಶ್ ಅಂಬಾನಿ ಅವರ ಒಡೆತನದ ಕಂಪನಿ reliance ಜಿಯೋ. ಜಿಯೋ ಬರುವುದಕ್ಕಿಂತ ಮುಂಚೆ ಎಲ್ಲರ ರಕ್ತ ಹಿರುತ್ತಿದ್ದವು ಈ ಟೆಲಿಕಾಂ ಕಂಪನಿಗಳು. ಜಿಯೋ ಯಾವಾಗ ಬಂದಿತೋ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಆಗಿ ಹೋಯಿತು. ಹಾಗೆಯೇ ಎಲ್ಲಾ ಕಂಪನಿಗಳ ಬಂಡವಾಳ ಬಯಲಾಯಿತು. ಹೀಗೆ ಗ್ರಾಹಕರನ್ನು ಬಳಸಿಕೊಳ್ಳುತ್ತಿದ್ದರು ಎಂಬ ಅರಿವು ಎಲ್ಲಾ ಜನರಿಗೂ ಬರಲು ಶುರುವಾಯಿತು. ಹಾಗಾದರೆ ಈ ಕ್ರಾಂತಿಯನ್ನು ಹುಟ್ಟು ಹಾಕಿದ ಮನುಷ್ಯ ಯಾವ ಸಿಮ್ ಬಳಸುತ್ತಿದ್ದಾರೆ ಗೊತ್ತೇ ನಿಮಗೆ.
ಎಲ್ಲರೂ ಜಿಯೋ ಸಿಮ್ ಮಾರುಕಟ್ಟೆಗೆ ಬಂದಾಗ ಲೈನ್ ನಿಂತು ತೆಗೆದು ಕೊಂಡದ್ದು ಈಗಲೂ ಹಾಗೇ ಇದೆ. ಎಲ್ಲರೂ ತಮ್ಮ ಕಂಪನಿಯನ್ನು ಬದಲಿಸಿಕೊಂಡರು. ಇದು ಇತರ ಟೆಲಿಕಾಂ ಕಂಪನಿಗಳಿಗೆ ಎದ್ದು ನೋಡದಂತೆ ಹೊಡೆತ ಕೊಟ್ಟಿತ್ತು. ಹಾಗಾದರೆ ಹೀಗೆಲ್ಲ ಮಾಡಿದ ವ್ಯಕ್ತಿ ಯಾವ ಸಿಮ್ ಬಳಸುತ್ತಿದ್ದಾರೆ ಎಂಬ ಮಾಹಿತಿ ನಿಮಗಿದೆಯೇ ? ಇಲ್ಲ ಎಂದಾದರೆ ಇಲ್ಲಿದೆ ಉತ್ತರ. ಮುಖೇಶ್ ಅಂಬಾನಿ ಹೇಳುವ ಪ್ರಕಾರ ಅವರ ಬಳಿ ಎರಡು ಮೊಬೈಲ್ ಇದ್ದು ಎರಡರಲ್ಲೂ ತಮ್ಮದೇ ಕಂಪನಿಯ ಸಿಮ್ ಅನ್ನು ಬಳಸುತ್ತಿದ್ದಾರೆ.
ಮತ್ತು ಜಿಯೋ ಮಾರುಕಟ್ಟೆಗೆ ಪ್ರವೇಶಿಸುವ ಮುನ್ನ ಅವರು ವೋಡಾಫೋನ್ ಸಿಮ್ ಅನ್ನು ಬಳಸುತ್ತಿದ್ದರು ಎಂದು ಅವರು ಇಂಟರ್ವ್ಯೂ ಒಂದರಲ್ಲಿ ಹೇಳಿದ್ದಾರೆ. ಏನೇ ಇರಲಿ ಅಸಂಖ್ಯಾತ ಭಾರತೀಯರ ಮೇಲೆ ಒಂದು ಕರೆ ಹಾಗು ಇಂಟರ್ನೆಟ್ ಸೇವೆ ದುಬಾರಿ ಮಾಡಿದ ಈ ಏರ್ಟೆಲ್ ಹಾಗು ಐಡಿಯಾ ವೊಡಾಫೋನ್ ಗಳಂತಹ ಟೆಲಿಕಾಂ ಕಂಪನಿಗಳಿಗೆ ಸೆಡ್ಡು ಹೊಡೆದು ಭಾರತೀಯರಿಗೆ ಕಡಿಮೆ ಬೆಲೆಗೆ ಸಿಮ್ ಕೊಟ್ಟ ಅಂಬಾನಿಗೆ ವಂದನೆಗಳು.