ತನ್ನ ಇಡೀ ಜೀವಮಾನದಲ್ಲೇ ನೆಲದ ಮೇಲೆ ಕಾಲಿಡದ ಈ ವಿಶಿಷ್ಟ ಹಕ್ಕಿ ಯಾವುದು ಗೊತ್ತೇ? ಇದರ ಹಿಂದಿನ ಕಾರಣವೇನು?

205

ಭಾರತದಲ್ಲಿ ಅನೇಕ ಹಕ್ಕಿಗಳ ಪ್ರಭೇದಗಳಿವೆ. ಕೆಲವು ನೋಡಲು ಸುಂದರವಾಗಿದೆ. ಇನ್ನು ಕೆಲವು ಮಧುರವಾಗಿ ಹಾಡುತ್ತವೆ. ಇನ್ನು ವೇಗವಾಗಿ ಹಾರುವ ಪಕ್ಷಿಗಳಿದ್ದರೆ, ಇನ್ನು ಕೆಲವು ರೆಕ್ಕೆ ಇದ್ದರು ಕೂಡ ಹರದೇ ಇರುವ ಹಕ್ಕಿಗಳಿವೆ. ಇಂದು ನಾವು ನೆಲಕ್ಕೆ ಕಾಲಿಡದ ಹಕ್ಕಿ ಬಗ್ಗೆ ಹೇಳಲಿದ್ದೇವೆ. ಇದರ ಕಾರಣ ತಿಳಿದರೆ ನಿಮಗೂ ಆಶ್ಚರ್ಯ ಆಗಬಹುದು.

ಈ ಹಕ್ಕಿಯ ಮನಸ್ಥಿತಿ ಬಹಳ ವಿಬ್ಬಿನ್ನ ವಾಗಿದೆ. ಬಣ್ಣ ಬಣ್ಣದ ಗರಿಗಳು, ದುಂಡು ಮುಖ, ಹಾಗು ಕಣ್ಣುಗಳು ಈ ಹಕ್ಕಿಯ ಸುಂದರತೆಯನ್ನು ಹೆಚ್ಚಿಸುತ್ತದೆ. ಇಲ್ಲಿ ನಾವು ಹಳದಿ ಪದದ ಹಸಿರು ಹಕ್ಕಿಯ ಅಥವಾ ಹರಿಯಾಲಿ ಹಕ್ಕಿ ಬಗ್ಗೆ ಮಾತಾಡುತ್ತಿದೇವೆ. ಈ ಹಕ್ಕಿ ತನ್ನ ಜೀವಮಾನದಲ್ಲಿ ಇಂದಿಗೂ ತನ್ನ ಪದವನ್ನು ನೆಲದ ಮೇಲೆ ಇಡುವುದಿಲ್ಲ. ಏಕೆ? ಅದರ ಹಿಂದಿನ ಕಾರಣವೇನು?

ಈ ಹಕ್ಕಿ ಮುಖ್ಯವಾಗಿ ಭಾರತದಲ್ಲಿ ಕಂಡು ಬರುತ್ತದೆ. ಇದು ಮಹಾರಾಷ್ಟ್ರದ ರಾಜ್ಯ ಪಕ್ಷಿಯಾಗಿದೆ. ಇದನ್ನು ಮರಾಠಿ ಭಾಷೆಯಲ್ಲಿ ಹರೋಲಿ ಅಥವಾ ಹರಿಯಲ್ ಎಂದು ಕರೆಯುತ್ತಾರೆ. ಹಕ್ಕಿಯ ದೇಹದ ಬಣ್ಣವು ತಿಳಿ ಹಸಿರು, ಬೂದು ಅಥವಾ ಹಳದಿ ಬಣ್ಣದಾಗಿರುತ್ತದೆ. ಅದರ ಕಾಲುಗಳು ಗಾಢ ಹಳದಿ ಆಗಿರುತ್ತದೆ.

ಇದೆ ಕಾರಣಕ್ಕೆ ಇದರ ಹೆಸರನ್ನು ಹರಿಯಾಲಿ ಹಕ್ಕಿ ಎಂದು ಕರೆಯಲಾಗುತ್ತದೆ. ಇದು ಪೀಪಲ್ ಟ್ರೀ ಅಥವಾ ಆಲದ ಮರಗಳ ಮೇಲೆ ಹೆಚ್ಚಾಗಿ ಕಾಣ ಸಿಗುತ್ತದೆ. ಹಾಗೇನೇ ಈ ಮರಗಳ ಮೇಲೇನೆ ಹೆಚ್ಚಾಗಿ ಗೂಡು ಕಟ್ಟಲು ಕೂಡ ಆದ್ಯತೆ ನೀಡುತ್ತದೆ. ಈ ಪಕ್ಷಿಯ ಕಣ್ಣುಗಳು ಕಾಡು ನೀಲಿ ಬಣ್ಣವನ್ನು ಹೊಂದಿದೆ. ಆಹಾರಕ್ಕೆ ಚಿರೊಂಜಿ, ಜಾಮೂನ್ ಹಣ್ಣುಗಳನ್ನು ಹೆಚ್ಚಾಗಿ ಬಯಸುತ್ತದೆ. ಇದು ಕಾಣ ಸಿಗುವುದು ತುಂಬಾ ಅಪರೂಪ. ಇದು ಮನುಷ್ಯರ ಹತ್ತಿರ ಹೋಗಲು ಹಿಂದೇಟು ಹಾಕುವ ಕಾರಣ, ಮಾನವರ ಸದ್ದು ಕೇಳಿದ ಕೂಡಲೇ ಹಾರಿ ಹೋಗುತ್ತದೆ, ಇಲ್ಲವಾದರೆ ಅಡಗಿ ಕುಳಿತು ಕೊಳ್ಳುತ್ತದೆ.

ಇದು ತನ್ನ ಜೀವಮಾನವಿಡೀ ಸೋಮಾರಿ ಹಕ್ಕಿಯಾಗಿದೆ. ಇದೆ ಕಾರಣಕ್ಕೆ ಇದು ಮರದಿಂದ ಕೆಳಗೆ ಕಾಲು ಇಡುವುದಿಲ್ಲ. ಮರದಿಂದ ಮರಕ್ಕೆ ಹಾರಿ ಎತ್ತರದಲ್ಲಿಯೇ ತನ್ನ ಸುತ್ತ ಮುತ್ತಲಿನ ಪರಿಸರದ ಮೇಲೆ ಕಣ್ಣು ಇಡುತ್ತದೆ. ಆಹಾರಕ್ಕೂ ಕೂಡ ಮರದಲ್ಲಿಯೇ ಅಗತ್ಯತೆಯನ್ನು ಪೂರೈಸಿಕೊಳ್ಳುತ್ತದೆ. ಈ ಹಕ್ಕಿ ಶುದ್ಧ ಸಸ್ಯಾಹಾರಿ ಎಂದು ಪರಿಗಣಿಸಲಾಗಿದೆ. ಇದಕ್ಕೆ ಕಾರಣ ನೆಲದೆ ಮೇಲೆ ಬಂದು ಬೇರೆ ಹಕ್ಕಿಗಳ ರೀತಿ ಹುಳಗಳನ್ನು, ಕೀಟಗಳನ್ನು ತಿನ್ನಲು ಹೋಗುವುದಿಲ್ಲ. ಮಣ್ಣಿನಲ್ಲಿ ಬಂದು ಹೊರಳಾಡುವುದು ಇಲ್ಲ.

ಈ ಹರಿಯಲ್ ಪಕ್ಷಿ ಗಂಡು ಮತ್ತು ಹೆಣ್ಣು ಎರಡು ಒಂದೇ ರೀತಿ ಕಾಣುತ್ತದೆ. ಇದರ ಜೀವಿತಾವಧಿ 26 ವರ್ಷಗಳು. ಇದರ ಸರಾಸರಿ ದೇಹದ ಉದ್ದ 3 ಸೆಂಟಿ ಮೀಟರ್ ವರೆಗೆ ಇದೆ. ಇದರ ರೆಕ್ಕೆಗಳು ತುಂಬಾ ಮೃದು ಆಗಿರುವ ಕಾರಣ, ಕಾಡಲ್ಲಿ ಬೇಗ ಬೇಟೆಗೆ ಸಿಗುತ್ತದೆ. ಇದೆ ಕಾರಣಕ್ಕೆ ಇದು ಮನುಷ್ಯರಿಂದ ಸ್ವಲ್ಪ ಹೆಚ್ಚು ಅಂತರ ಕಾಯ್ದುಕೊಳ್ಳುತ್ತದೆ. ಇವುಗಳು ೫-೧೦ ಪಕ್ಷಿಗಳ ಗುಂಪಿನಲ್ಲಿ ಇರುತ್ತದೆ.

ಈ ಹಕ್ಕಿಗಳ ಧ್ವನಿ ತುಂಬಾ ಮೃದುವಾಗಿರುತ್ತದೆ. ಸೀಟಿ ರೀತಿ ಇದರ ಶಬ್ದ ಕೇಳಿಬರುತ್ತದೆ. ಭಾರತ ಹೊರತು ಪಡಿಸಿ ಈ ಹಕ್ಕಿ ನೇಪಾಳ, ಶ್ರೀಲಂಕಾ, ಪಾಕಿಸ್ತಾನ ಹಾಗು ಚೀನಾದಲ್ಲಿ ಕಂಡು ಬರುತ್ತದೆ. ಈ ಪಕ್ಷಿಯು ಹಸಿರು ಕಾಡುಗಳಲ್ಲಿ ಮಾತ್ರ ಜೀವಿಸುತ್ತದೆ. ಮರುಭೂಮಿ ರಾಜ್ಯವಾದ ರಾಜಸ್ತಾನದಲ್ಲಿ ಇವುಗಳು ಕಾಣ ಸಿಗುವುದು ಬಹಳ ಕಡಿಮೆ.

Leave A Reply

Your email address will not be published.