ಕಾನೂನು ಪ್ರಕಾರ ಮನೆಯಲ್ಲಿ ಎಷ್ಟು ನಗದು ಹಾಗು ಚಿನ್ನ ಇಟ್ಟುಕೊಳ್ಳಬಹುದು? ಇದಕ್ಕಿಂತ ಹೆಚ್ಚಿನದು ಇದ್ದಾರೆ ಲೆಕ್ಕ ಪಕ್ಕ ಇಟ್ಟುಕೊಳ್ಳಿ.

335

ದೇಶದಲ್ಲಿ ನೀವು ಕೇಳಿರಬಹುದಾದ ಸಾಮಾನ್ಯ ಮಾತುಗಳು ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ, ನಗದು ಜಪ್ತಿ, ಚಿನ್ನ ಜಪ್ತಿ ಎನ್ನುವ ನ್ಯೂಸ್ ಗಳು. ಅದೇ ರೀತಿ ಸಿಕ್ಕಿಬಿದ್ದ ವ್ಯಕ್ತಿಗಳ ಸಂಬಂದಿಕರು ಹಾಗು ಗೆಳೆಯರನ್ನು ಕೂಡ ವಿಚಾರಣೆ ಮಾಡುವುದು ನಾವು ಕೇಳಿದ್ದೇವೆ. ಹೀಗಿದ್ದಾಗ ಮನೆಯಲ್ಲಿ ಒಬ್ಬ ವ್ಯಕ್ತಿ ಎಷ್ಟು ನಗದು ಹಣ ಹಾಗು ಬಂಗಾರ ಇಟ್ಟುಕೊಳ್ಳಬಹುದು ಎನ್ನುವ ಪ್ರಶ್ನೆ ನಿಮಗೆ ಮೂಡಿರಬಹುದು. ಇದಕ್ಕೆ ಯಾವುದಾದರು ಸೀಮಿತ ಇದೆಯೇ?

income tax ನಿಯಮಗಳಿಗನುಗುಣವಾಗಿ ನೀವು ಭಾರತೀಯ ನಾಗರಿಕನಾಗಿದ್ದು, ನಿಮ್ಮ ಬಳಿ ನಗದು ಇದ್ದರೆ, ಯಾವುದೇ ಸೀಮಿತ ಇಲ್ಲ. ಆದರೆ ಅದು ಕಾನೂನು ಬದ್ಧವಾಗಿರಬೇಕು ಹಾಗೇನೇ, ಆ ಹಣಕ್ಕೆ ನಿಮ್ಮ ಬಳಿ ಸೂಕ್ತ ದಾಖಲೆ ಇರಬೇಕು. ಇದೆಲ್ಲ ಇದ್ದರೆ, ನಿಮಗೆ ಯಾವ ತನಿಖಾಧಿಕಾರಿಗಳಿಂದಲೂ ಹೆದರಬೇಕಾಗಿಲ್ಲ. ಹಾಗೇನೇ ಇನ್ನು ಬಂಗಾರದ ವಿಷಯಕ್ಕೆ ಬಂದರೆ ಇದಕ್ಕೂ ಕೂಡ ಯಾವುದೇ ಮಿತಿ ಇಲ್ಲ. ಆದರೆ ಚಿನ್ನ ಕ್ಕೆ ಎಲ್ಲ ತರಹದ bill ಗಳು ಹಾಗು ದಾಖಲೆಗಳು ಇರಬೇಕಾಗುತ್ತದೆ.

ಒಂದು ವೇಳೆ ನಿಮ್ಮ ಬಳಿ ಸಿಕ್ಕಿದ ಹಣದ ಮೂಲ ಹೇಳದೆ ಹೋದರೆ, ನಿಮ್ಮ ಮೇಲೆ 137 ಪ್ರತಿಷದಷ್ಟು ದಂಡ ವಿಧಿಸಲಾಗುತ್ತದೆ. ಇದು ಅಲ್ಲದೆ ವರ್ಷಕ್ಕೆ 20 ಲಕ್ಷಕ್ಕಿಂತಲೂ ಅಧಿಕ ನಗದು ವ್ಯವಹಾರ ಮಾಡಿದರೆ ನಿಮ್ಮ ಮೇಲೆ ಜುರ್ಮನೇ ಕೂಡ ಬೀಳಬಹುದು. ಇದು ಮಾತ್ರ ಅಲ್ಲದೆ 50000 ಕಿಂತ ಹೆಚ್ಚು ನಗದು ಬ್ಯಾಂಕ್ ಅಲ್ಲಿ ಡೆಪಾಸಿಟ್ ಮಾಡಿದರೆ ಪಾನ್ ಕಾರ್ಡ್ ನೀಡಲೇ ಬೇಕಾಗುತ್ತದೆ. ವರ್ಷಕ್ಕೆ 20 ಲಕ್ಷಕ್ಕಿಂತ ಅಧಿಕ ಬ್ಯಾಂಕ್ ಅಲ್ಲಿ ಡೆಪಾಸಿಟ್ ಮಾಡುವುದಾದರೆ ನೀವು ಆಧಾರ್ ನಂಬರ್ ಕೂಡ ನೀಡಬೇಕಾಗುತ್ತದೆ. ಪಾನ್ ಆಧಾರ್ ಮಾಹಿತಿ ನೀಡದೆ ಹೋದರೆ 20 ರೂಪಾಯಿಗಳ ವರೆಗೆ ದಂಡ ಕೂಡ ಕಟ್ಟಬೇಕಾಗುತ್ತದೆ.

Leave A Reply

Your email address will not be published.