ತನ್ನ ತಂದೆ ಬದುಕುಳಿವುದು ಕೇವಲ 6 ತಿಂಗಳು ಮಾತ್ರ ಎಂದು ಗೊತ್ತಾದಾಗ ಮಗ ಮಾಡಿದ ಕೆಲಸ ಏನು ಗೊತ್ತೇ?

439

ತಂದೆ ಮಕ್ಕಳ ಪ್ರೀತಿ ಎಂದರೆ ಹಾಗೆ ನೋಡಿ ಅದು ಕಳೆದ ಜನ್ಮದಲ್ಲಿ ಮಾಡಿದ ಪುಣ್ಯದ ಫಲ ಎಂದರೂ ತಪ್ಪಾಗಲಾರದು. ಯಾಕೆಂದರೆ ಅದೆಷ್ಟೋ ಜನರಿಗೆ ಇಂತಹ ಸೈಭಾಗ್ಯ ಸಿಗುವುದೇ ಇಲ್ಲ. ತಾಯಿ ಹೊತ್ತು ಹೆತ್ತು ಸಾಕಿದರೆ , ತಂದೆ ಜೀವನವನ್ನೇ ರೂಪಿಸುತ್ತಾರೆ. ಜೀವನದಲ್ಲಿ ಯಾರನ್ನು ಬೇಕಾದರೂ ಬಿಟ್ಟಿರಬಹುದು ಹೆತ್ತ ತಂದೆ ತಾಯಿಯರನ್ನು ಅಲ್ಲ. ಹಾಗಿರುವಾಗ ತನ್ನ ತಂದೆ ಬದುಕುವುದು ಇನ್ನು ಕೇವಲ 6 ತಿಂಗಳು ಮಾತ್ರ ಎಂದು ಗೊತ್ತಾದರೆ ಹೇಗಿರಬೇಡ? ನಾವು ಇಂದು ನೋಡಲು ಹೊರಟ ವಿಷಯ ಇದೆ ನೋಡಿ . ಬನ್ನಿ ಏನಿದು ಪ್ರಕರಣ ತಿಳಿಯೋಣ.

ತಂದೆಯೊಬ್ಬರನ್ನು ಮಗ ಮತ್ತು ಮನೆಯವರು ಅನಾರೋಗ್ಯ ಎಂಬ ಕಾರಣಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆಗ ಅವರಿಗೆ ಲಿವರ್ ನಲ್ಲಿ ಸಮಸ್ಯೆ ಇರುವುದು ಕಂಡಬರುತ್ತದೆ. ಚಿಕಿತ್ಸೆ ನಡೆಸುತ್ತಾ ಇದ್ದರು, ಆದರೆ ಒಂದು ದಿನ ಬಂತು ಆಗ ಡಾಕ್ಟರ್ ಹೇಳಿದರು ” ನಿಮ್ಮ ತಂದೆಯವರಿಗೆ ಯಾರಾದರೂ ಲಿವರ್ ದಾನ ಮಾಡಿದರೆ ಅವರನ್ನು ಬದುಕಿಸಬಹುದು, ಇಲ್ಲವಾದರೆ ಅವರು ಕೇವಲ 6 ತಿಂಗಳು ಬದುಕಬಹುದು ಎನ್ನುತ್ತಾರೆ.” ಮನೆಯವರಿಗೆ ಸಿಡಿಲು ಬಡಿದಂತೆ ಆಯಿತು, ತಂದೆ ಮಗನಲ್ಲಿ ನನಗೆ ಸಾಯಲು ಇಷ್ಟ ಇಲ್ಲ ನೀನು ಗ್ರಾಜುವೇಟ್ ಆಗುವುದು ನೋಡಬೇಕು ಎನ್ನುತ್ತಾರೆ. ಎಲ್ಲಾ ಕಡೆ ಪ್ರಯತ್ನಿಸಿದರು ಎಲ್ಲೂ ಕೂಡ ದಾನಿಗಳು ಸಿಗುವುದಿಲ್ಲ. ಕೊನೆಗೆ ಮಗನೇ ನಿರ್ಧಾರ ಮಾಡುತ್ತಾನೆ ತನ್ನ ತಂದೆಗೆ ತಾನೆ ತನ್ನ 65% ಲಿವರ್ ಭಾಗವನ್ನು ಕೊಟ್ಟು ಕಸಿ ಶಸ್ತ್ರ ಚಿಕಿತ್ಸೆ ಮಾಡಿಸುತ್ತೇನೆ ಎಂದು. ಇದಕ್ಕಾಗಿ ಜೀವನ ಪರ್ಯಂತ ದುಡಿದು ಒಟ್ಟು ಮಾಡಿದ್ದ 20 ಲಕ್ಷ ಹಣವನ್ನು ಆಪರೇಷನ್ ವೆಚ್ಚಕ್ಕೆ ಕಟ್ಟುತ್ತಾರೆ.

ತಾಯಿ ಅಳುತ್ತಾ ತಾನು ತನ್ನ ಇಬ್ಬರು ಜೀವವನ್ನು ಒತ್ತೆ ಇಟ್ಟಿದ್ದೇನೆ ಎಂದು. ಯಾಕಂದರೆ ಇಂತಹ ಕೇಸ್ ನಲ್ಲಿ ಸರ್ಜರಿ ಸಮಯದಲ್ಲಿ ಇಬ್ಬರೂ ಪ್ರಾಣ ಕಳೆದುಕೊಳ್ಳುವ ಸಂಭವ ಕೂಡ ಇದೆ. ಆಪರೇಷನ್ ಮುಂಚೆ ತಂದೆ ಮಗನಲ್ಲಿ ಈ ಸರ್ಜರಿ ಮುಗಿದು ಮನೆಗೆ ಹೋದ ನಂತರ ನಾನು ನಿನ್ನನ್ನು ಲೂಡೋ ಆಟದಲ್ಲಿ ಸೋಲಿಸುತ್ತೇನೆ ಎಂದು. ತಂದೆಯ ಧನಾತ್ಮಕ ಯೋಚನೆಗೆ ಮಗ ತುಸು ನಕ್ಕು ಹೋಗುತ್ತಾನೆ. ಆಪರೇಷನ್ ಮುಗಿದು ಮಗ ಕಣ್ಣು ಬಿಟ್ಟಾಗ ಡಾಕ್ಟರ್ ನೀವು ನಿಮ್ಮ ತಂದೆಯನ್ನು ಉಳಿಸಿದ್ದಿರಿ ಎಂದಾಗ ಆದ ಸಂತಸ ಇನ್ನು ಎಂದೂ ನನ್ನ ಜೀವನದಲ್ಲಿ ಬರುವುದಿಲ್ಲ ಎನ್ನುತ್ತಾರೆ ಮಗ. ಅದೇನೇ ಆಗಲಿ ಈ ಘಟನೆ ನಡೆದದ್ದು ವಿಶ್ವ ಅಪ್ಪಂದಿರ ದಿನದಂದು. ಅಪ್ಪನಿಗೆ ಇಂತಹ ದೊಡ್ಡ ಗಿಫ್ಟ್ ಕೊಟ್ಟ ಮಗ ಎಲ್ಲರಿಗೂ ಮಾದರಿ.

Leave A Reply

Your email address will not be published.