ಐಟಿ ಕೆಲಸ ಬಿಟ್ಟು ಕೃಷಿಯಲ್ಲಿ ಅದೃಷ್ಟ ಪರೀಕ್ಷೆ ನಡೆಸಿದರು. ಇಂದು ಸಂಪಾದಿಸುತ್ತಿದ್ದಾರೆ ತಿಂಗಳಿಗೆ 3 ಲಕ್ಷಕ್ಕೂ ಹೆಚ್ಚು ಆಧಾಯ?

1,550

ಆರ್. ನಂದ ಕಿಶೋರ್ ಎನ್ನುವವರು ಎಲ್ಲರಂತೆಯೇ ಸಾಮಾನ್ಯವಾಗಿ ಬೆಳ್ಳಿಗೆ ೯ ರಿಂದ ಸಂಜೆ ೫ ಗಂಟೆಯವರೆಗೆ ಐಟಿ ಕೆಲಸ ಮಾಡುತ್ತ ತಮ್ಮ ಜೀವನ ಸಾಗಿಸುತ್ತಿದ್ದರು. ಮಾರ್ಚ್ ೨೦೨೦ ರಲ್ಲಿ ಕೋರೋಣ ಸಂಕ್ರಮಣ ದೇಶದಾದ್ಯಂತ ಹರಡಲು ಪ್ರಾರಂಭವಾದಾಗ ಅನೇಕರು ತಮ್ಮ ಉದ್ಯೋಗ ಕಳೆದುಕೊಂಡರು. ಅದೇ ಸಂಕಷ್ಟದ ಸಮಯದಲ್ಲಿ ಹೈದೆರಾಬಾದಿನ ರಾಮಪುರ ಗ್ರಾಮದಲ್ಲಿ ವಾಸಿಸುತ್ತಿದ್ದ ರೈತನ ಮಗ ಕೂಡ ಒಂದು ನಿರ್ಧಾರ ತೆಗೆದುಕೊಂಡರು. ಕಿಶೋರ್ ತಮ್ಮ ತಿಂಗಳಿಗೆ ಸಿಗುತ್ತಿರುವ ೩೫ ಸಾವಿರ ಸಂಬಳದ ಕೆಲಸ ಬಿಟ್ಟು ಕೃಷಿ ಮಾಡುವ ನಿರ್ಧಾರಕ್ಕೆ ಬಂದರು. ಇದು ಅವರ ಬದುಕನ್ನೇ ಬದಲಿಸಿತು.

ಕಿಶೋರ್ ಅವರ ತಂದೆ ರೈತ. ಚಿಕಂದಿನಿಂದಲೂ ತಂದೆ ಕೃಷಿ ಮಾಡುತ್ತಿರುವುದನ್ನು ನೋಡುತ್ತಿದ್ದರು. ಆದರೆ ಕಿಶೋರ್ ಕೃಷಿ ಮಾಡುವ ಬಗ್ಗೆ ಯಾವತ್ತೂ ಯೋಚಿಸಿರಲಿಲ್ಲ. ಅದರ ಬಗ್ಗೆ ಆಸಕ್ತಿಯು ಇರಲಿಲ್ಲ. ಆದರೆ ಯಾವಾಗ ಕೋರೋಣ ಬಂತೋ ದೇಶ ಯಾವಾಗ ಲೊಕ್ಡೌನ್ ಆಯ್ತೋ ಅಂದೇ ಇವರಿಗೆ ಮನುಷ್ಯನಿಗೆ ಮುಖ್ಯವಾದದ್ದು ಆಹಾರ ಎನ್ನುವ ಅರಿವಾಯಿತು. ರೈತ ಕೃಷಿ ಮಾಡದೇ ಇದ್ದಾರೆ ಜನರಿಗೆ ತಿನ್ನಲು ಕೂಡ ಏನು ಇರುವುದಿಲ್ಲ ಎಂದು ಅವರ ಅಭಿಪ್ರಾಯ ವಾಯಿತು. ತಾಂತ್ರಿಕ ಜ್ಞಾನವನ್ನು ಹೊಂದಿರುವ ಕಿಶೋರ್ ಈ ಕೃಷಿಯನ್ನು ಲಾಭದಾಯಕ ವೃತ್ತಿಯಾಗಿ ಯಾಕೆ ಬದಲಾಯಿಸಬಾರದು ಎಂದು ಯೋಚಿಸಿದರು. ಇದು ಇವರಿಗೆ ಕೃಷಿಯಲ್ಲಿ ಪೂರ್ಣ ಸಮಯ ಕೆಲಸ ಮಾಡುವ ಉತ್ತೇಜನ ನೀಡಿತು.

ತನ್ನ ಕೆಲಸ ಬಿಟ್ಟು ಹಳ್ಳಿಗೆ ಮರಳಿದ ಕಿಶೋರ್ ಇಂದು ಒಂದು ಎಕರೆ ಜಮೀನಿನಲ್ಲಿ ಪಾಲಿ ಹೌಸ್ ಹಾಗು ಎರಡು ಎಕರೆ ಜಾಗದಲ್ಲಿ ವಿದೇಶಿ ತಳಿಯ ಸೌತೆಕಾಯಿ ಹಾಗು ಪಾಲಕ್ ಸೊಪ್ಪಿನ ಕೃಷಿ ಮಾಡುತ್ತಿದ್ದಾರೆ. ಅವರ ವಾರ್ಷಿಕ ಇಳುವರಿ ಒಟ್ಟಾರೆ ೩೦ ಟನ್ ಗಳಷ್ಟು ಇದೆ. ಐಟಿ ಉದ್ಯೋಗದಿಂದ ತಿಂಗಳಿಗೆ 35 ಸಾವಿರ ಸಂಪಾದಿಸುತ್ತಿದ್ದ ಕಿಶೋರ್ ಇಂದು ತಿಂಗಳಿಗೆ ೩.೫ ಲಕ್ಷದಷ್ಟು ಸಂಪಾಧನೆ ಮಾಡುತ್ತಿದ್ದಾರೆ. ಪಾಲಕ್ ಬೇಸಾಯ, ಸೌತೆಕಾಯಿ ಬೆಳೆಯಲು ೩ ತಿಂಗಳ ಅವಧಿ ತಗಲುತ್ತದೆ. ಈ ಸಮಯದಲ್ಲಿ ಕೆಲಸಗಾರರಿಗೆ ಕೊಡಲು ಒಟ್ಟು ೫ ಲಕ್ಷದವರೆಗೆ ಖರ್ಚಾದರೆ, ರಸಗೊಬ್ಬರ, ಕೀಟನಾಶಕ, ಪಾಲಿ ಹೌಸ್ ದುರಸ್ತಿಗೆ ಒಟ್ಟು ೧೦ ಲಕ್ಷದವರೆಗೆ ಖರ್ಚಾಗಿದೆ.

ಇದು ಬೆಳೆದ ನಂತರದ ಉಚಿತ ಸಮಯದಲ್ಲಿ ಇವರು ಕಾಪ್ಸಿಕಮ್, ಹಸಿರು ಮೆಣಸಿನಕಾಯಿ ಮತ್ತು ಬೆಂಡೆಕಾಯಿ ಗಳನ್ನೂ ಕೂಡ ಬೆಳೆಯುತ್ತಾರೆ. ಬಾಲ್ಯದಿಂದ ರೈತ ಕುಟುಂಬದಲ್ಲಿ ಹುಟ್ಟಿದರು ಕೂಡ ಐಟಿ ಉದ್ಯೋಗ ಬಿಟ್ಟು ಕೃಷಿ ಮಾಡುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಯಾವಾಗ ಬಿತ್ತನೆ ಮಾಡಬೇಕು, ಯಾವಾಗ ಕಟಾವ್ ಮಾಡಬೇಕು ಎನ್ನುವುದು ಗೊತ್ತಿರಲಿಲ್ಲ. ಇದಕ್ಕೆ ತನ್ನ ತಂದೆ ಹಾಗು ಗೆಳೆಯರು ಸಹಾಯ ಮಾಡಿದರು ಎಂದು ಕಿಶೋರ್ ಹೇಳಿಕೊಂಡಿದ್ದ್ದಾರೆ. ಹೊಸ ತಂತ್ರಜಾನದಿಂದ ಇವರಿಗೆ ಉತ್ತಮ ಫಸಲು ಬಂದಿದೆ ಅಂತ ಹೇಳುತ್ತಾರೆ ಕಿಶೋರ್.

ಇವರು ಹನಿ ಫಾರ್ಟಿಗೇಷನ್ ತಂತ್ರಜ್ಞಾನ ಬಳಸಿಕೊಳ್ಳುತ್ತಿದ್ದಾರೆ. ಇದರಲ್ಲಿ ರಸಗೊಬ್ಬರಗಳನ್ನು ನೀರಿನಲ್ಲಿ ಬೆರೆಸಿ ದಿಪ್ಪೆರ್ ಮೂಲಕ ಹನಿ ಹನಿಯಾಗಿ ಗಿಡಗಳಿಗೆ ತಲುಪುವಂತೆ ಮಾಡುತ್ತದೆ. ಸಸಿಗಳು ನೀರನ್ನು ನಿಧಾನವಾಗಿ ಹೀರಿಕೊಳ್ಳುತ್ತದೆ, ಅದೇ ರೀತಿ ರಸಗೊಬ್ಬರ ಕೂಡ ಸಸಿಗಳ ಬೇರುಗಳಿಗೆ ತಲುಪುತ್ತದೆ. ಇದು ಮಣ್ಣಿನ ಹೆಚ್ಚಿನ ಪೋಷಕಾಂಶಗಳನ್ನು ಧಾರಣೆ ಹಾಗು ಮಣ್ಣಿನ ತೇವ ಇರಿಸುವುದಕ್ಕೆ ಸಹಾಯ ಮಾಡುತ್ತದೆ. ಅದೇ ರೀತಿ ಕಡಿಮೆ ವೆಚ್ಚದಲ್ಲಿ ಹಾಗು ಹೆಚ್ಚು ಅಧಯ ನೀಡುವ ಕೃಷಿ ಮಾಡುವತ್ತ ಕೂಡ ಇವರ ಚಿತ್ತ ಇದೆ. ಅದೇ ಕಾರಣಕ್ಕೆ ಅವರ ಆಧಾಯ ಕಡಿಮೆ ಸಮಯದಲ್ಲೇ ದ್ವಿಗುಣಗೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.

Leave A Reply

Your email address will not be published.