ಒಂದು ಕಾಲದಲ್ಲಿ ಕಿಸೆಯಲ್ಲಿ ಕೇವಲ 12 ರೂಪಾಯಿ. ಇಂದು ಬರೋಬ್ಬರಿ ೫೦ ಕೋಟಿ ಹೆಲಿಕಾಪ್ಟಾರ್ ದಾನ ರೂಪದಲ್ಲಿ ಕೊಟ್ಟಿದ್ದಾರೆ. ಇವರು ಯಾರು, ಇವರ ಉದ್ಯಮವೇನು ಗೊತ್ತೇ?

814

ಜೀವನ ಎಂಬುವುದು ಹಾಗೆ ಮೇಲೆ ಕೆಳಗೆ ಸಾಗುತ್ತಲೇ ಇರುತ್ತದೆ. ಅದು ನಮ್ಮ ಸರಿಯಾದ ನಡೆಯ ಮೇಲೆ ಭದ್ರ ಬುನಾದಿ ಆಗಿ ನಿಲ್ಲುತ್ತದೆ. ಕಷ್ಟ ಬಂತೆಂದು ಸಾಯುವವರ ಮಧ್ಯೆ ಜೀವನದಲ್ಲಿ ಏನಾದರೂ ಮಾಡಿ ಬದುಕಿ ತೋರಿಸಬೇಕು ಎನ್ನುವವರ ಸಂಖ್ಯೆ ಬಾರಿ ಕಡಿಮೆ. ನಾವು ಇಂದು ತಿಳಿಯಲು ಹೊರಟ ಈ ವ್ಯಕ್ತಿ ಅಂತಹ ಕೆಲವೇ ಕೆಲವು ವ್ಯಕ್ತಿಗಳ ಸಾಲಿನಲ್ಲಿ ನಿಲ್ಲುತ್ತಾರೆ. ಬನ್ನಿ ತಿಳಿಯೋಣ ಇವರ ಬಗ್ಗೆ.

1977 ರಲ್ಲಿ ಈ ವ್ಯಕ್ತಿ ತನ್ನ 13ನೆ ವಯಸ್ಸಿಗೆ ವಿಧ್ಯಾಭ್ಯಾಸ ಮೊಟಕು ಗೊಳಿಸಿ ಊರು ಬಿಟ್ಟು ಓಡಿ ಬಂದಿದ್ದರು. ಎಲ್ಲರನ್ನೂ ಬಿಟ್ಟು ಏನೋ ಬಂದಿದ್ದರು ಆದರೆ ಜೇಬಿನಲ್ಲಿ ಇದ್ದಿದ್ದು ಬರಿ 12.5 ರೂಪಾಯಿ ಮಾತ್ರ . ಆದರೂ ಅವರು ಅದರ ಬಗ್ಗೆ ತಲೆ ಕೆಡಿಸಕೊಳ್ಳುವುದಿಲ್ಲ ಎಂದು ನಿರ್ಧರಿಸಿ ಸಣ್ಣ ಪುಟ್ಟ ಕೆಲಸದಿಂದ ತನ್ನ ಜೀವನ ಆರಂಭಿಸಿದರು . ಇಂದು ಇವರು ದೇಶದಲ್ಲಿ ಅತ್ಯಂತ ಪ್ರಸಿದ್ಧ ವಜ್ರ ವ್ಯಾಪಾರಿ. ಹೌದು ಅವರೇ ಸಾವೂಜಿ ಡೋಲಕಿಯ, ಸೂರತ್ ನ ಅತ್ಯಂತ ದೊಡ್ಡ ವಜ್ರ ವ್ಯಾಪಾರಿ. ಸೂರತ್ ಅಲ್ಲದೇ ಇಡೀ ವಿಶ್ವದಾದ್ಯಂತ ಇವರ ಬಗ್ಗೆ ಗೊತ್ತು. ಇವರ ಕಂಪನಿಯಲ್ಲಿ 6000ಕ್ಕಂತಲೂ ಹೆಚ್ಚು ಕೆಲಸ ಮಾಡುತ್ತಿದ್ದು, ಪ್ರತಿ ವರ್ಷ ಇವರು ತಮ್ಮ ಉದ್ಯೋಗಿಗಳಿಗೆ ಒಂದಿಲ್ಲ ಒಂದು ಬೆಲೆಬಾಳುವ ವಸ್ತು ಉಡುಗೊರೆ ರೂಪದಲ್ಲಿ ಕೊಟ್ಟು ಸುದ್ದಿಯಲ್ಲಿ ಇರುತ್ತಾರೆ. ಇವರು ಅದೆಷ್ಟೋ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಕೊಂಡಿದ್ದಾರೆ.

ತಮ್ಮೆಲ್ಲಾ ಸಾರ್ವಜನಿಕ ಸಮಾಜಮುಖಿ ಕೆಲಸದ ಕಾರಣಕ್ಕೆ ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಕೂಡ ದೊರಕಿತ್ತು ಅವರಿಗೆ. ಇದೆ ಕುಷಿಗೆ ಅವರ ಕುಟುಂಬದವರು ಸೇರಿ ಇವರಿಗೆ ಉಡುಗೊರೆ ರೂಪದಲ್ಲಿ 50 ಕೋಟಿ ಬೆಲೆ ಬಾಳುವ ಹೆಲಿಕಾಪ್ಟರ್ ಒಂದನ್ನು ಕೊಟ್ಟರು. ಆದರೂ ಅವರು ಅದನ್ನು ಸ್ವೀಕರಿಸದೆ ಮೆಡಿಕಲ್ ಎಮರ್ಜೆನ್ಸಿ ಗಾಗಿ ಅದನ್ನು ಉಪಯೋಗ ಮಾಡಲಿ ಎಂದು ದಾನ ರೂಪದಲ್ಲಿ ಕೊಟ್ಟಿದ್ದಾರೆ. ಇವರ ಈ ದೊಡ್ಡ ಮನಸ್ಸು ಅವರನ್ನು ಹಿಮಾಲಿಸುವ ಅವರ ಎಲ್ಲಾ ಕೆಲಸಗಾರರಿಗು ಬರಲಿ ಎಂದು ಆಶಿಸುವ. 95 ವರ್ಷ ಪ್ರಾಯದ ಇವರು ಇನ್ನೂ ಕೂಡ ತಮ್ಮ ಸಮಾಜಮುಖಿ ಕೆಲಸ ಮಾಡುತ್ತಲೇ ಇದ್ದಾರೆ. ಇದು ಹೀಗೆ ಮುಂದುವರೆಯಲಿ ಅವರಿಗೆ ಇನ್ನಷ್ಟು ಶಕ್ತಿ ಆಯಸ್ಸು ಕೊಡಲಿ ಎಂದು ಹಾರೈಸೋಣ.

Leave A Reply

Your email address will not be published.