ತನ್ನ ಮನೆಯನ್ನೇ ಆಫೀಸ್ ಮಾಡಿ ಕೇವಲ ೩.೩೫ ಲಕ್ಷದಿಂದ ಪ್ರಾರಂಭಿಸಿದ ಉದ್ಯಮ ಇಂದು ೧೩೭ ಕೋಟಿ ಬೆಲೆ ಬಾಳುತ್ತಿದೆ. ಅಷ್ಟಕ್ಕೂ ಇವರ ಉದ್ಯಮ ಯಾವುದು ಗೊತ್ತೇ?

770

ಇಂದಿನ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಬ್ಬ ಏನಾದರು ಇಂದು ಸಾಧನೆ ಮಾಡಿ ತನ್ನ ಕಾಲ ಮೇಲೆ ನಿಂತುಕೊಳ್ಳಬೇಕೆಂಬ ಕನಸು ಕಾಣುತ್ತಿರುತ್ತಾನೆ. ಕೆಲವರು ಆ ಕನಸನ್ನು ನನಸು ಮಾಡಿಕೊಂಡರೆ ಇನ್ನುಳಿದವರು ಪ್ರಯತ್ನಿಸಿ ಸಫಲ ಕಾಣಲಿಲ್ಲ ಅಂತ ಅರ್ಧದಲ್ಲಿಯೇ ಬಿಟ್ಟು ಬಿಡುತ್ತಾರೆ. ಇಂತವರಿಗೆ ಇಂದಿನ ಈ ಯುವತಿಯ ಕಥೆ ಸ್ಪೂರ್ತಿಯಾಗಲಿದೆ. ಸಫಲತೆಗೆ ಐಡಿಯಾ ಮಾತ್ರವಲ್ಲ ಶ್ರಮ ಕೂಡ ಬೇಕಾಗುತ್ತದೆ ಎಂದು ಈ ಯುವತಿ ನಿರೂಪಿಸಿದ್ದಾಳೆ. ನಿಧಿ ಯಾದವ್ ಎನ್ನುವ ಮಹಿಳೆಯ ಯಶಸ್ಸಿನ ಕಥೆ ನಿಮಗೂ ತಿಳಿಯಲಿ.

ಹನ್ನೊಂದು ವರ್ಷಗಳ ಹಿಂದೆ ಹೈದೆರಾಬಾದ್ ನ ಡೆಲಾಯ್ಟ್ ಅಲ್ಲಿ ಕೆಲಸ ಮಾಡುತ್ತಿದ್ದ ೨೩ ವರ್ಷದ ಸಾಫ್ಟ್ವೇರ್ ಇಂಜಿನಿಯರ್ ನಿಧಿ ಯಾದವ್ ತನ್ನ ಕನಸನ್ನು ಬೆನ್ನಟ್ಟಲು ತಾನು ಮಾಡುತ್ತಿದ್ದ ಕೆಲಸ ತೊರೆದು ಇಟಲಿ ಯಾ ಫ್ಲೋರೆನ್ಸ್ ನ ಪೋಲಿಮಾಡ ಫ್ಯಾಷನ್ ಸ್ಕೂಲ್ ಅಲ್ಲಿ ಫ್ಯಾಷನ್ ಬಯಿಂಗ್ ಹಾಗು ಮೆರ್ಚಂಡಾಯಿಸಿಂಗ್ ಅಲ್ಲಿ ಒಂದು ವರ್ಷದ ಕೋರ್ಸಿಗೆ ಸೇರಿಕೊಂಡರು. ಅವರು ಇಂದು ಕೇವಲ ೩.೫ ಲಕ್ಷದ ಬಂಡವಾಳದೊಂದಿಗೆ ಗುರುಗ್ರಮದ ತನ್ನ 2BHK ಮನೆಯಲ್ಲಿ ಪ್ರಾರಂಭಿಸಿದ ಉದ್ಯಮ ಇಂದು ೧೩೭ ಕೋಟಿ ಬೆಲೆಬಾಳುವ ಉದ್ಯಮವಾಗಿ ಬದಲಾಗಿದೆ.

ನಿಧಿ ಯಾದವ್ ಕೇವಲ ೩.೫ ಲಕ್ಷ ಬಂಡವಾಳದೊಂದಿಗೆ ತನ್ನ 2BHK ಮನೆಯಲ್ಲಿ AKS ಉಡುಪುಗಳ ಉದ್ಯಮ ಪ್ರಾರಂಭಿಸಿದರು. ಮದುವೆಯಾಗಿ ಎರಡು ವರ್ಷ ಅಗಿದಷ್ಟೇ ನಿಧಿ ಯಾದವ್ ಗೆ ಹಾಗು ೭ ತಿಂಗಳ ಮಗು ಕೂಡ ಅವರಿಗೆ ಇತ್ತು. ಅದೇ ಸಮಯದಲ್ಲಿ ಕುರ್ತಾಗಳು ಅನಾರ್ಕಲಿಗಳು ಮ್ಯಾಕ್ಸಿ ಡ್ರೆಸ್ ಲೆಹೆಂಗಾ ಮತ್ತು ಸಾಂಪ್ರದಾಯಿಕ ಸೂಟುಗಳ ದಾಸ್ತಾನುಗಳೊಂದಿಗೆ ಆನ್ಲೈನ್ ಬ್ರಾಂಡ್ ಆಗಿ ತಮ್ಮ ಉದ್ಯಮವನ್ನು ಪ್ರಾರಂಭಿಸಿದರು. ಇದಕ್ಕೆ ಅವರ ಪತಿ ಕೂಡ ಸಹಕರಿಸಿದರು. ಬಟ್ಟೆಗಳ ಖರೀದಿಗೆ ಜೈಪುರಕ್ಕೆ ಪ್ರಯಾಣಿಸಿ ತನ್ನ ಹೆಂಡತಿಗೆ ಬೇಕಾದ ಉತ್ಪನ್ನಗಳನ್ನು ಒದಗಿಸಿದರು.

ನಿಧಿ ಯಾದವ್ ತಮ್ಮ ಉದ್ಯಮದ ಆರಂಭಿಕ ಹಂತದಲ್ಲಿ ತಮ್ಮ ಮನೆಯನ್ನೇ ದಾಸ್ತಾನು ಇರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದರು. ಅವರು ಮೊದಲ ಬಾರಿಗೆ ಪ್ರಾರಂಭಿಸಿದಾಗ ಅವರ ಬಳಿ ಇದ್ದ ಬಟ್ಟೆಗಳ ಸಂಖ್ಯೆ ೯೩೬ ಸೆಟ್ ಗಳದ್ದಾಗಿತ್ತು. ಇದೆ ರೀತಿ ಮನೆಯಲ್ಲಿಯೇ ದಾಸ್ತಾನು ಮಾಡಿ ಬೇರೆ ಕಡೆ ಡಸ್ಟಿನಿಗೆ ಕೊಡಬೇಕಾಗಿದ್ದ ಬಾಡಿಗೆಯನ್ನು ಉಳಿಸಿ ತನ್ನ ಉದ್ಯಮ ಮುಂದೆ ಕೊಂಡುಹೋಗಿದ್ದರೆ. ಅದೇ ರೀತಿ ಒಂದು ವರ್ಷ ತಾನೇ ಇಡೀ ಕೆಲಸ ಮಾಡಿದಲ್ಲದೆ ಯಾವುದೇ ಕೆಲಸಗರನ್ನು ಇಟುಕೊಂಡಿರಲಿಲ್ಲ.

ನಿಧಿ ಯಾದವ್ ತಮ್ಮ ಉತ್ಪನ್ನಗಳನ್ನು ಜಬಾಂಗ್, ಮಿಂತ್ರಾ ಹಾಗೇನೇ ಲಿಮೆರ್ವ್ಡ್ ನಂತಹ ಆನ್ಲೈನ್ ಶಾಪಿಂಗ್ ವೆಬ್ಸೈಟ್ಗಳಲ್ಲಿ ಬಟ್ಟೆಗಳ ಫೋಟೋ ಹಾಕುವ ಮೂಲಕ ಪ್ರಾರಂಭಿಸಿದರು. ಅತಿ ಶೀಘ್ರದಲ್ಲೇ ಮೂರೂ ಘಟಕಗಳನ್ನು ಕೂಡ ಮಾಡಿದರು. ಇವರಿಗೆ ಬೇಕಾದ ರೀತಿಯಲ್ಲಿ ಬಟ್ಟೆ ನಿರ್ಮಿಸುವಂತೆ ತಾನು ಖರೀದಿಸುತ್ತಿದವರ ಬಳಿ ಹೇಳಿಕೊಂಡು ತನ್ನ ಉದ್ಯಮದ ವೇಗ ಹೆಚ್ಚಿಸಿಕೊಂಡರು. ೨೦೧೪ ರಲ್ಲಿ ತಮ್ಮ ಈ ಉದ್ಯಮವನ್ನು ಖಾಸಗಿ ಲಿಮಿಟೆಡ್ ಕಂಪನಿ ಆಗಿ ಪರಿವರ್ತಿಸಿದರು. ೨೦೧೮ ರ ಹೊತ್ತಿಗೆ ಈ ಎರಡು ಜನ ಸೇರಿ ಮಾಡಿದ ಉದ್ಯಮ ಒಟ್ಟು ೧೧೦ ತಂಡದ ಸದಸ್ಯರಾಗಿ ಬದಲಾಯಿತು. ಇದರಲ್ಲಿ ಟೈಲರ್, ಉಡುಪು ವಿನ್ಯಾಸ ಮಾಡುವವರು ಕೂಡ ಸೇರಿದ್ದಾರೆ.

Leave A Reply

Your email address will not be published.