ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೂಜಿಸುವ ಸಪ್ತ ದುರ್ಗೆಯರು ಯಾರ್ಯಾರು ? ಯಾವ ಜಾಗದಲ್ಲಿ ನೆಲೆಸಿದ್ದಾರೆ? ಬನ್ನಿ ತಿಳಿಯೋಣ.
ದಕ್ಷಿಣ ಕನ್ನಡ ಜಿಲ್ಲೆ ಎಂದಾಕ್ಷಣ ಮೊದಲಿಗೆ ನೆನಪಿಗೆ ಬರುವುದೇ ದೇವಸ್ಥಾನಗಳು. ಹೌದು ಅತೀ ಹೆಚ್ಚು ದೇವಸ್ಥಾನಗಳು ಇಲ್ಲಿವೆ ಎಂದರೂ ತಪ್ಪಾಗಲಾರದು. ದೈವಿಕ ಭಾವನೆಯಿಂದ ಇಂದಿಗೂ ಜನರು ನಿಷ್ಠೆಯಿಂದ ಪೂಜಿಸುತ್ತಾ ಬಂದಿದ್ದಾರೆ. ಅದೆಷ್ಟೋ ಪ್ರವಾಸಿಗರು ಇಲ್ಲಿವೆ ಬಂದು ದೇವರ ಆಶೀರ್ವಾದ ಪಡೆದು ಹೋಗುತ್ತಾರೆ. ಇಂತಹ ದೇವಾಲಯಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಪ್ತ ದುರ್ಗೆಯರ ದೇವಸ್ಥಾನಗಳು ಕೂಡ ಇವೆ. ಹೌದು ಬನ್ನಿ ಇದರ ಬಗೆಗೆ ಹೆಚ್ಚು ತಿಳಿಯೋಣ.
ಪುರಾಣದ ಕಥೆಗಳ ಪ್ರಕಾರ ಸಪ್ತ ದುರ್ಗೆಯರು ಸಹೋದರಿಯರು. ಬ್ರಹ್ಮನ ವರದಾನದಂತೆ ತಾರಿಕಾಸುರ ವಿಶೇಷ ಚಕ್ರವನ್ನು ವರದಾನವಾಗಿ ಪಡೆದು, ಮೂರು ಲೋಕವನ್ನು ಆಕ್ರಮಿಸಿ ಕೊನೆಗೆ ಈ ಲೋಕದ ಪಾಲಕ ಶ್ರೀ ಹರಿಯನ್ನು ಸುದರ್ಶನ ಚಕ್ರ ಉಪಯೋಗಿಸದೆ ಯುದ್ಧ ಭೂಮಿಯಿಂದ ಹಿಂದೆ ಸರಿಯುವಂತೆ ಮಾಡಿದ್ದ. ಇದೆ ಚಿಂತನೆಯಲ್ಲಿ ಕೂತು ಯೋಚಿಸುತ್ತಾ ಇದ್ದಾಗ ಕಣ್ಣಂಚಿನಲ್ಲಿ ಬಿದ್ದ ಕಣ್ಣಿನ ಹನಿಗಳಿಂದ ಜನನ ವಾದ ಶಕ್ತಿಯೇ ಈ ಸಪ್ತ ಮಾತ್ರಿಕೆ. ಲೋಕ ಕಲ್ಯಾಣಕ್ಕೆ ಎಂದೇ ಈ ಸಪ್ತ ಮಾತ್ರಿಕೆಯರ ಜನನ ಎಂದು ಸಾರಿ ಶ್ರೀ ಹರಿಯು ಸಪ್ತ ಸಹೋದರಿಯರಿಗೆ ಭಗವತಿ, ದುರ್ಗಾಪಮೇಶ್ವರೀ, ರಾಜರಾಜೇಶ್ವರಿ, ಅನ್ನ ಪೂರ್ಣೆಶ್ವರಿ ,ಭ್ರಮರಾಂಭಿಕೆ, ರಕ್ತೇಶ್ವರಿ , ಕಾತ್ಯಾಯಿನಿ ಎಂದು ನಾಮಕರಣ ಮಾಡಿ ಇಳೆಗೆ ಕಳುಹಿಸುತ್ತಾರೆ.
ಹೀಗೆ ಇಳೆಗೆ ಬಂದ ಸಪ್ತ ದುರ್ಗೆಯರು ತಮ್ಮ ತಮ್ಮ ಕಾರ್ಣಿಕ ಶಕ್ತಿಯನ್ನು ತೋರಿಸಿ ತುಳುನಾಡಿನ ಒಂದೊಂದು ಜಾಗದಲ್ಲಿ ನೆಲೆ ನಿಲ್ಲುತ್ತಾರೆ. ಹಾಗಾದರೆ ಯಾವುದು ಆ ಸ್ಥಳಗಳು ಎಂಬ ವಿಚಾರ ಮನಸಿನಲ್ಲಿದರೆ ಅದಕ್ಕೆ ಉತ್ತರ ಇಲ್ಲಿದೆ. 1.ಪೊಳಲಿಯಲ್ಲಿ ರಾಜರಾಜೇಶ್ವರಿ 2.ಸಸಿಹಿತ್ಲು ಭಗವತಿ 3. ಕಟೀಲು ಶ್ರೀ ದುರ್ಗಾಪರಮೇಶ್ವರಿ 4.ಬಪ್ಪನಾಡು ಶ್ರೀ ದುರ್ಗಾಪರೇಶ್ವರೀ 5.ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ 6.ಕುಂಜಾರುಗಿರಿ ಶ್ರೀ ದುರ್ಗಾಪರಮೇಶ್ವರಿ 7.ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ.
ಹೀಗೆ ಏಳು ಸ್ಥಾನಗಳಲ್ಲಿ 7 ಸಹೋದರಿಯರು ನೆಲೆನಿಂತು ಲೋಕ ಕಲ್ಯಾಣ ಮಾಡುತ್ತಿದ್ದಾರೆ. ಮೂಲ ಹೆಸರುಗಳು ಬೇರೆ ಇದ್ದರೂ ಕಾಲಾಂತರದಲ್ಲಿ ಜನರ ಆಡು ಭಾಷೆಯಲ್ಲಿ ಬಂದು ಎಲ್ಲವೂ ಮೇಲ್ಕಂಡ ಹೆಸರುಗಳಿಂದ ಪ್ರಸಿದ್ದಿ ಪಡೆದಿದೆ. ಅದೇನೇ ಇರಲಿ ನಂಬಿಕೆ ಮತ್ತು ಆ ನಂಬಿಕೆಯನ್ನು ಕಾಯುವ ಶಕ್ತಿ ಸದಾ ಧರ್ಮದ ಪರವಾಗಿ ಧರ್ಮ ರಕ್ಷಣೆ ಮಾಡುತ್ತಿರುತ್ತದೆ ಎಂದು ನಂಬಿಕೊಂಡು ಬಂದಿದೆ ಹಿಂದೂ ಧರ್ಮ. ಯಾರಾದರೂ ದಕ್ಷಿಣ ಕನ್ನಡ ಜಿಲ್ಲೆ ಪ್ರವಾಸ ಕೈಗೊಂಡಿದ್ದರೆ ಖಂಡಿತವಾಗಿ ಈ ಸ್ಥಳಗಳಿಗೆ ಭೇಟಿ ಕೊಟ್ಟು ಧನ್ಯಾರ್ಥರಾಗಿ.