ನಿಮ್ಮ ಮನೆಯಲ್ಲಿ ಸಿಗುವ ಬಿರಿಯಾನಿ ಎಲೆಗಳನ್ನು ಕೇವಲ ಹತ್ತು ನಿಮಿಷ ಸುಟ್ಟು ಬಿಡಿ, ಆಮೇಲೆ ಏನೆಲ್ಲಾ ಆಗುತ್ತದೆ ಗೊತ್ತೇ??

124

ನಮಸ್ಕಾರ ಸ್ನೇಹಿತರೆ, ಭಾರತೀಯರ ಅಡುಗೆಯಲ್ಲಿ ಮಸಾಲ ಪದಾರ್ಥಗಳಿಲ್ಲದೇ ಅಡುಗೆಗಳೇ ಇಲ್ಲ. ನಮ್ಮನ್ನ ಸಾಂಬಾರ ಪದಾರ್ಥಗಳಿಂದಲೇ ವಿದೇಶಿಯರೂ ಗುರುತಿಸುತ್ತಾರೆ. ಮನೆಯಲ್ಲಿ ಮಸಾಲೆ ಮದಾರ್ಥಗಳಿಂದ ಅಡುಗೆ ಮನೆಯೇ ಇಲ್ಲ. ಅದರಲ್ಲೂ ಚಕ್ಕೆ, ಲವಂಗ, ಏಲಕ್ಕಿ, ಮೊಗ್ಗು, ಪಲಾವ್ ಎಲೆ ಅಥವಾ ಬಿರಿಯಾನಿ ಎಲೆ ಇವುಗಳಿಲ್ಲದೇ ಇರಲು ಸಾಧ್ಯವೇ ಇಲ್ಲ. ಪಲಾವ್ ಅಥವಾ ಇತರ ರೈಸ್ ಬಾತ್ ಮಾಡುವಾಗ ಪಲಾವ್ ಎಲೆಗೆ ಪ್ರಮುಖ ಸ್ಥಾನ. ಅದರ ರುಚಿಯೇ ವಿಭಿನ್ನ. ಹಾಗಾಗಿ ಪಲಾವ್ ಎಲೆಯನ್ನು ಬಳಸಲಾಗುತ್ತದೆ. ಅಲ್ಲದೇ ಪಲಾವ್ ಎಲೆ ಎಷ್ಟು ಸುಗಂಧಭರಿತವಾಗಿರುತ್ತದೆ ಎಂದು ನಾವು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಅಂದಹಾಗೆ ಪಲಾವ್ ಎಲೆ ಅಥವಾ ಬಿರಿಯಾನಿ ಎಲೆ ಕೇವಲ ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಇತರ ಹತ್ತು ಹಲವು ಪ್ರಯೋಜನಗಳನ್ನ ಒಳಗೊಂಡಿದೆ.

ಮೊದಲನೆಯದಾಗಿ ಪಲಾವ್ ಎಲೆ ಅಂತ್ಯಂತ ಸುಗಂಧಭರಿತವಾದ ಎಲೆ. ಈ ಎಲೆಯನ್ನ ಒಣಗಿಸಿ ಎಷ್ಟು ಕಾಲವಾದರೂ ಕೆಡದಂತೆ ಸಂಗ್ರಹಿಸಿ ಇಡಬಹುದು. ಇದನ್ನ ಅಡುಗೆಯಲ್ಲಿ ಬಳಸುತ್ತಿದ್ದಂತೆ ಅದರ ಪರಿಮಳವೆಲ್ಲಾ ಮನೆಯ ತುಂಬೆಲ್ಲಾ ಪಸರಿಸುತ್ತದೆ. ಹಾಗಾಗಿ ಇದು ನಮ್ಮ ಬಾಯಿ ರುಚಿ ಮಾತ್ರವಲ್ಲ, ಮಾನಸಿಕ ನೆಮ್ಮದಿಯನ್ನೂ ಕೊಡಬಲ್ಲದು! ಹೌದು ಆಧುನಿಕ ಯುಗದಲ್ಲಿ, ಈ ಯಾಂತ್ರಿಕ ಬದುಕಿನ ನಡುವೆ ನಮಗೆ ಮಾನಸಿಕ ನೆಮ್ಮದಿ ಎಂಬುದೇ ಇಲ್ಲವಾಗಿದೆ. ಹಾಗಿರುವಾಗ ಸ್ವಲ್ಪ ಹೊತ್ತು ನೈಸರ್ಗಿಕ ಪರಿಮಳವನ್ನು ಕೊಡುವ ವಸ್ತುವನ್ನ ಮನೆಯಲ್ಲಿಟ್ಟು ಧ್ಯಾನಾಸಕ್ತರಾಗಿ ನೋಡಿ ಎಷ್ಟೊಂದು ಆರಾಮ ಎನ್ನಿಸುತ್ತದೆ ಎಂದು. ಪಲಾವ್ ಎಲೆಯನ್ನ ಸುಟ್ಟುರೆ ಹೊರಬರುವ ಸುಮಾಸನೆ ಮನಸ್ಸಿಗೆ ನೆಮ್ಮದಿಯನ್ನ ನೀಡುತ್ತದೆ. ವೈದ್ಯಶಾಸ್ತ್ರಗಳೂ ಕೂಡ ಸುವಾಸನೆ ಮನಸ್ಸಿಗೆ ಆಹ್ಲಾದವನ್ನು ಉಂಟುಮಾಡುತ್ತದೆ ಎಂದು ಹೇಳುತ್ತವೆ.

ಇನು ಪಲಾವ್ ಎಲೆ ಮನೆಯಲ್ಲಿದ್ದರೆ ಜಿರಳೆ ಕಾಟವಂತೂ ಇರೋದೇ ಇಲ್ಲ. ಹೇಗೆ ಅಂತೀರಾ? ಪಲಾವ್ ಅಥವಾ ಬಿರಿಯಾನಿ ಎಲೆ ನಿಮ್ಮ ಮನೆಯಲ್ಲಿದ್ದರೆ ಅದನ್ನ ತುಂಡು ತುಂಡುಗಳಾಗಿ ಕತ್ತರಿಸಿ ಮನೆಯ ಮೂಲೆಯಲ್ಲೇಲ್ಲಾ ಇಡಿ. ಆಗ ಮನೆಯ ಯಾವುದೇ ಮೂಲೆಯಲ್ಲಿ ಅಡಗಿರುವ ಜಿರಳೆಗಳೂ ಕೂಡ ಆಚೆ ಬರುತ್ತವೆ. ಅಷ್ಟೇ ಅಲ್ಲ, ಇನ್ಣೂ ಬೇರೆ ಕೀಟಗಳೂ ಕೂಡ ಮನೆಯಿಂದ ಆಚೆ ಹೋಗುತ್ತವೆ. ನೋಡಿದ್ರಲ್ಲಾ ಸ್ನೇಹಿತರೆ, ಅಡುಗೆ ಮನೆಯ ಹಲವು ಪದಾರ್ಥಗಳು ಕೇವಲ ಅಡುಗೆಗೆ ಮಾತ್ರವಲ್ಲ, ಇತರ ಪ್ರಯೋಜನಗಳನ್ನೂ ಹೊಂದಿದೆ.

Leave A Reply

Your email address will not be published.