ಯಾದವ ವಂಶ ನಾಶಕ್ಕೆ ನಿಜವಾದ ಕಾರನ ಏನು ಗೊತ್ತಾ? ಶ್ರೀ ಕೃಷ್ಣನಿಗೂ ಗಾಂಧಾರಿಯ ಶಾಪ ತಾಗಿತ್ತಾ?

169

ನಮಸ್ಕಾರ ಸ್ನೇಹಿತರೆ, ಮಹಾಭಾರತ ಎನ್ನುವುದು ಹಿಂದುಗಳಿಗೆ ಅತ್ಯಂತ ಪ್ರಮುಖವಾದ ಒಂದು ಮಹಾ ಪುರಾಣ. ದ್ವಾಪರಯುಗದಿಂದ ಕಲಿಯುಗದವರೆಗೂ ಮಾನವ ಕಲಿಯಬಹುದಾದ ಜೀವನ ಪಾಠಗಳನ್ನು ಮಹಾಭಾತರದಿಂದ ಕಲಿಯಬಹುದು. ಕುರುಕ್ಷೇತ್ರ ಯುದ್ದದಲ್ಲಿ ನಡೆದ ಪ್ರತಿಯೊಂದು ಘಟನೆಗಳೂ ಒಂದೊಂದು ಧರ್ಮದ ಪಾಠವನ್ನ ಮಾಡುತ್ತವೆ. ಅಷ್ಟೇ ಅಲ್ಲ ಸ್ನೇಹಿತರೆ, ಮಹಾಭಾರತದಲ್ಲಿ ಬರುವ ಪಾತ್ರಗಳಲ್ಲಿ ಗಾಂಧಾರಿಯ ಪಾತ್ರವೂ ಕೂಡ ಬಹುಮುಖ್ಯವಾದುದು. ಈಗೆ ಒಬ್ಬ ಮಹಾ ತಪಸ್ವಿ ಅಂತನೇ ಹೇಳಬಹುದು. ಯಾಕಂದ್ರೆ ಗಂಡನಂತೆ ಜೀವನಪರ್ಯಂತ ಕುರುಡು ಜೀವನವನ್ನ ಸಾಗಿಸಿದವಳು ಆಕೆ. ಗಾಂಧಾರಿ ನೂರಾಒಂದು ಮಕ್ಕಳಿಗೆ ಅಂದರೆ ಕೌರವರಿಗೆ ಜನ್ಮಕೊಟ್ಟವಳು.

ಕೌರವರು ಆರಂಭದಿಂದಲೂ ಅಧರ್ಮದ ಹಾದಿಯನ್ನೇ ತುಳಿದವರು. ಆದರೆ ಗಾಂಧಾರಿ ಮಕ್ಕಳ ತಪ್ಪನ್ನ ಆಗಾಗ ತಿದ್ದಲು ಪ್ರಯತ್ನಿಸುತ್ತಲೇ ಇದ್ದಳು. ಆದ್ರೆ ಅವಳ ಮಾತನ್ನ ಯಾರೂ ಕೇಳಲೇ ಇಲ್ಲ. ಹಾಗಾಗಿ ಅಂತ್ಯವನ್ನೂ ಅವರು ಕಾಣುವಂತಾಯ್ತು. ಆದರೆ ಮಕ್ಕಳ ತಪ್ಪಿನಿಂದ ಅವರ ಅಂತ್ಯವಾಯಿತಾದರೂ, ಮಕ್ಕಳನ್ನು ಕಳೆದುಕೊಂಡಾಗ ತಾಯಿ ಹೃದಯ ಮಿಡಿಯುವುದಿಲ್ಲವೇ. ಮಕ್ಕಳು ಎಷ್ಟೇ ಕೆಟ್ಟವರಾಗಿದದ್ರೂ, ತಾಯಿಗೆ ಮಕ್ಕಳೇ ಅಲ್ಲವೇ.? ಕುರುಕ್ಷೇತ್ರದ ಕೊನೆಯ ದಿನ, ಆ ಯುದ್ಧ ಭೂಮಿಗೆ ಗಾಂಧಾರಿ ಬರುತ್ತಾಳೆ. ಸತ್ತು ಬಿದ್ದ ತನ್ನ ಮಕ್ಕಳನ್ನು ನೋಡುತ್ತಾಳೆ. ರಕ್ತದ ಮಡುವಿನಲ್ಲಿ ಬಿದ್ದ ಮಕ್ಕಳನ್ನು ನೋಡಿ ಆಕ್ರಂದಿಸುತ್ತಾಳೆ. ಪಾಂಡವರ ರಕ್ತಸಿಕ್ತ ಕೈಗಳನ್ನು ನೋಡಿ ಮರಗುತ್ತಾಳೆ. ಆಗ ಪಾಂಡವರ ಬಳಿ ತನ್ನ ಮಕ್ಕಳ ಈ ಸ್ಥಿತಿಗೆ ತಂದಿದ್ದಕ್ಕಾಗಿ ಪ್ರಶ್ನಿಸುತ್ತಾಳೆ.

ಆಗ ಪಾಂಡವರು ತಮ್ಮ ತಮ್ಮ ಕಾರ್ಯಗಳಿಗೆ ಸಮರ್ಥನೆಯನ್ನ ನೀಡುತ್ತಾರೆ. ಅಗ ಅವರೂ ಕೂಡ ತಮ್ಮ ಮಕ್ಕಳೇ ಅಲ್ಲವಾ ಅಂತ ಅವರನ್ನ ಕ್ಷಮಿಸಿ ಬಿಡುತ್ತಾಳೆ. ಕೊನೆಯಲ್ಲಿ ಗಾಂಧಾರಿ ಶ್ರೀ ಕೃಷ್ಣನ ಎದುರಿನಲ್ಲಿ ಬಂದುನಿಲ್ಲುತ್ತಾಳೆ. ಆಕೆಗೆ ಶ್ರೀ ಕೃಷ್ಣನ ಮೇಲೆ ಎಲ್ಲಿಲ್ಲದ ಕೋಪ ಬರುತ್ತದೆ. ಇದಕ್ಕೆ ಲ್ಲಾ ನೀನೇ ಕಾರಣ ಎಂದು ದೂರುತ್ತಾಳೆ. ಇದು ಹೀಗೆ ಆಗುತ್ತದೆ ಎಂದು ನಿನಗೆ ಗೊತ್ತಿದ್ದರೂ ನೀನು ತಪ್ಪಿಸುವ ಪ್ರಯತ್ನವನ್ನೂ ಮಾಡಿಲ್ಲ. ಇದರ ಹಿಂದೆ ನಿನ್ನ ಬೇರೆಯದೇ ಉದ್ದೇಶ ಇತ್ತು ಎನ್ನಿಸುತ್ತದೆ. ಹಾಗಾಗಿ ನಾನು ಇದೋ ನಿನಗೆ ಶಾಪ ನೀಡುತ್ತಿದ್ದೇನೆ.

ನಾನು ನನ್ನ ಮಕ್ಕಳನ್ನು ಕಳೆದುಕೊಂಡು ಪಡುತ್ತಿರುವ ನೋವು ಯಾತನೆ ನಿನ್ನ ವಂಶಕ್ಕೂ ಬರಲಿ. ಯಾದವ ವಂಶ ಹೊಡೆದಾಡಿಕೊಂಡು ನಾಶವಾಗಲಿ, ನಿನಗೆ ಸಾವಾಗಲಿ ಎಂದು ಶಾಪವಿತ್ತು ಬಿಡುತ್ತಾಳೆ. ಆದರೆ ಶ್ರೀ ಕೃಷ್ಣನು ನಗುತ್ತಾ, ತಾಯಿ ನಿನ್ನ ಶಾಪವನ್ನು ನಾನು ಸ್ವೀಕರಿಸುತ್ತೇನೆ. ವಿಧಿಯ ಲಿಖಿತವೇ ನಿನ್ನ ಈ ಶಾಪ. ನಿನ್ನ ಆಸೆಯಂತೆಯೇ ಆಗಲಿ. ಇದೇ ದ್ವಾಪರಯುಗದ ಅಂತ್ಯವಾಗಲಿ ಎಂದು ಹೇಳುತ್ತಾನೆ. ಇದೇ ಸ್ನೇಹಿತರೆ, ಗಾಂಧಾರಿಯ ಕೋಪ, ಶಾಪ ಹೇಗೆ ಯಾದವ ವಂಶವನ್ನ ನಾಶಪಡಿಸಿತು ಎಂಬುದರ ಹಿಂದಿನ ಕಥೆ.

Leave A Reply

Your email address will not be published.