ನಿಮ್ಮ ಮನೆಯಲಿ ಹಣ, ಶಾಂತಿ ಎಲ್ಲ ಇರಬೇಕು ಎಂದರೆ ಅಪ್ಪಿ ತಪ್ಪಿಯೂ ಕೂಡ ಇವುಗಳನ್ನು ಒಳಗಡೆ ಬಿಟ್ಟುಕೊಳ್ಳಬೇಡಿ. ಯಾವೆಲ್ಲ ಪ್ರಾಣಿ, ಪಕ್ಷಿಗಳನ್ನು ಗೊತ್ತೇ?

253

ನಮಸ್ಕಾರ ಸ್ನೇಹಿತರೇ ಮನುಷ್ಯನನ್ನ ನಂಬುವುದಕ್ಕಿಂತ ಪ್ರಾಣಿ ನಂಬಿ ಅಂತ ಮಾತಿದೆ. ಹೌದು ಯಾಕಂದ್ರೆ ಮನುಷ್ಯ ಮನುಷ್ಯನಿಗೆ ದ್ರೋಹ ಮೋಸ ಮಾಡ್ತಾನೆ. ತಿಂದ ಮನೆಗೆ ಕನ್ನ ಹಾಕುವ ಕೆಲಸ ಮಾಡ್ತಾನೆ. ಆದರೆ ಮೂಕ ಪ್ರಾಣಿಗಳು ಮಾತ್ರ ತನಗೆ ಆಶ್ರಯ ನೀಡಿ ಒಂದೊತ್ತು ಊಟ ಹಾಕಿದರು ಕೂಡ ಅವು ಜೀವನ ಪರ್ಯಂತ ನೆನೆಯುತ್ತವೆ.ಆದರೆ ಈ ಕೃತಜ್ಞಾ ಭಾವ ಮನುಷ್ಯನಲ್ಲಿ ನೋಡುವುದು ತೀರಾ ವಿರಾಳಾತಿ ವಿರಳ.ಹಾಗಾಗಿಯೇ ಬಹುತೇಕರು ಇತ್ತೀಚೆಗೆ ತಮ್ಮ ಮನೆಯಲ್ಲಿ ಶ್ವಾನವನ್ನ ಸಾಕುತ್ತಿದ್ದಾರೆ. ಅದು ಅವರವರ ವೈಯಕ್ತಿಕ ಇಚ್ಚೆ ಅಭಿಪ್ರಾಯ.

ಆದರೆ ನಾವು ಮನೆಯಲ್ಲಿ ಕೆಲವು ಪ್ರಾಣಿಗಳನ್ನು ಸಾಕುವುದರಿಂದ ಯಾವೆಲ್ಲಾ ರೀತಿಯಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ ಎಂಬುದನ್ನು ತಿಳಿಯುವುದಾದರೆ. ಇತ್ತೀಚೆಗೆ ಖ್ಯಾತ ನಟಿಯೊಬ್ಬರ ಪತಿ ಪಾರಿವಾಳದ ಪಿಕ್ಕೆಗಳಿಂದ ಸಾವನ್ನಪಿದರು ಎಂಬ ಸುದ್ದಿ ಕೇಳಿ ಬಂದಿತ್ತು. ಹಾಗಾಗಿ ಮನೆಗೆ ಕೆಲವೊಂದು ಪ್ರಾಣಿಗಳು ಪಕ್ಷಿಗಳು ದಿಢೀರನೆ ಬಂದು ಬಿಟ್ಟರೆ ಅದು ಅಪಶಕುನ ಅದರಿಂದ ಕೆಟ್ಟ ಸಮಸ್ಯೆಗಳು ತಪ್ಪಿದ್ದಲ್ಲ ಎಂದು ಹಿರಿಯರಿಂದ ಹಾಗೂ ಕೆಲ ಶಾಸ್ತ್ರ ಗಳಿಂದ ನಾವು ಕೇಳುತ್ತಲೇ ಬಂದಿದ್ದೇವೆ.

ಆದರೆ ಯಾವ ಯಾವ ಪ್ರಾಣಿ ಪಕ್ಷಿಗಳಿಂದ ತೊಂದರೆ ಆಗುವ ಸಾಧ್ಯತೆ ಹೆಚ್ಚು ಎಂಬುದೆ ಬಹಳ ಜನರಲ್ಲಿ ಇರುವ ಗೊಂದಲ. ಭೂಮಿ ಮೇಲೆ ಇರುವ ಮಾನವ ಹಾಗೂ ಪ್ರಾಣಿಗಳ ಸ್ನೇಹ ಸಂಬಂಧ ಬಹಳ ಮುಖ್ಯವಾಗಿದೆ. ಆದರೂ ಕೆಲವು ಪ್ರಾಣಿ ಪಕ್ಷಿಗಳಿಂದ ಮನೆಗೆ ಆಗುವ ತೊಂದರೆಗಳು ಒಂದೆರಡಲ್ಲ. ಮನೆಗಳಲ್ಲಿ ಇದ್ದಕ್ಕಿದಂತೆ ನಾಯಿ ಬೆಕ್ಕು, ಪಾರಿವಾಳ , ಗೂಬೇ, ಬಾವಲಿಗಳು ಬರುವುದು ಕೆಲವೊಂದು ಬಾರಿ ನೋಡಿರಬಹುದು. ಇದರ ಜೊತೆ ಅನೇಕರು ನಾಯಿ ಬೆಕ್ಕು ಮುಂತಾದ ಪ್ರಾಣಿ ಪಕ್ಷಿಗಳನ್ನು ಮನೆಯ ಒಳಗೆ ಸಾಕುತ್ತಾರೆ.

ಆದರೆ ಜ್ಯೋತಿಷ್ಯ ಶಾಸ್ತ್ರ ಗಳ ಪ್ರಕಾರ ಮನೆಯ ಒಳಗೆ ಕೆಲ ಪ್ರಾಣಿಗಳ ದಿಢೀರ್ ಆಗಮನ ಅಷ್ಟು ಒಳ್ಳೆಯದಲ್ಲ. ಏಕೆಂದರೆ ಕೆಲ ಪ್ರಾಣಿಗಳ ಆಗಮನವು ಹಣದ ನಷ್ಟಕ್ಕೆ ಕಾರಣವಾಗುತ್ತವೆ. ಹಾಗೂ ಮನೆಯವರ ಆರೋಗ್ಯದಲ್ಲಿಯೂ ಏರುಪೇರು ಉಂಟಾಗುತ್ತದೆ. ಪ್ರಾಣಿ ಪಕ್ಷಿಗಳ ದಿಢೀರ್ ಆಗಮನವು ಭವಿಷ್ಯ ಕಾಲದಲ್ಲಿನ ಘಟನೆಗಳ ಬಗ್ಗೆ ಮಾಹಿತಿ ನೀಡುತ್ತವೆ ಎಂದು ಜ್ಯೋತಿಷ್ಯ ಶಾಶ್ಟ್ರದಲ್ಲಿ ಹೇಳಲಾಗುತ್ತದೆ.

ಮೊದಲನೆಯದಾಗಿ ಗೂಬೆ. ಗೂಬೆಯನ್ನು ಲಕ್ಷ್ಮಿ ದೇವಿಯ ವಾಹನವೆಂದು ಪರಿಗಣಿಸಿದರು ಸಹ ಮನೆ ಒಳಗೆ ಅದರ ಆಗಮನವನ್ನು ಅಶುಭ ಎಂದು ಪರಿಗಣಿಸಲಾಗಿದೆ. ದೀಪಾವಳಿ ಸಮಯದಲ್ಲಿ ಅಷ್ಟೇ ಗೂಬೆಯ ಆಗಮನ ಒಳ್ಳೆಯದು. ಅದಲ್ಲದೇ ಬೇರೆ ದಿನ ಗೂಬೆಯ ಆಗಮನದಿಂದ ಮನೆಯಲ್ಲಿ ನಕಾರಾತ್ಮಕ ಭಾವನೆಗಳು ಮೂಡುತ್ತವೆ. ಅದರಿಂದ ಗೂಬೆಯ ಆಗಮನವು ಮನೆಗೆ ಒಳ್ಳೆಯದಲ್ಲ ಎಂಬುದು ನಂಬಿಕೆ.

ಎರಡನೆಯದಾಗಿ ಪಾರಿವಾಳ. ಇದನ್ನು ಶಾಂತ ಪಕ್ಷಿ ಎಂದು ಪರಿಗಣಿಸಲಾಗಿದೆ. ಆದರೆ ಧಾರ್ಮಿಕ ನಂಬಿಕೆಗಳ ಪ್ರಕಾರ ಮನೆಗೆ ಪಾರಿವಾಳದ ಆಗಮನವು ಅತ್ಯಂತ ಅಶುಭಕರ ಸೂಚನೆಯಾಗಿದೆ. ಈ ಪಕ್ಷಿಯು ರಾಹು ಸಂಕೇತವಾಗಿದ್ದು, ಇದು ಇರುವ ಸ್ಥಳವು ನಿರ್ಜನವಾಗುತ್ತದೆ. ಇದರ ಆಗಮನದಿಂದ ಮನೆಯಲ್ಲಿನ ಜನರ ನಡುವೆ ಕಲಹ ಉಂಟಾಗಿ ಮನೆಯಲ್ಲಿ ಅಶಾಂತಿ ಉಂಟಾಗುತ್ತದೆ. ಮೂರನೆಯದು ಬೆಕ್ಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪಾರಿವಾಳದಂತೆ ಬೆಕ್ಕಿಗು ರಾಹುಗೂ ಸಂಬಂದವಿದೆ. ಈ ಬೆಕ್ಕುಗಳು ಮನೆಗೆ ದಿಢೀರನೆ ಬರುವುದು ಶಬ್ದ ಮಾಡುವುದು ಕೂಡ ಅಶುಭವಾಗಿದ್ದು ಮನೆಗೆ ಒಳ್ಳೆಯದಲ್ಲ. ಇದು ಕೂಡ ತನ್ನ ನಕರಾತ್ಮಕ ಶಕ್ತಿಯಿಂದ ಮನೆಯಲ್ಲಿ ಕಲಹ ಆತಂಕ ಉಂಟು ಮಾಡಿ ಮನೆಯ ಒಳ್ಳೆ ಸ್ಥಿತಿಯನ್ನು ಹಾಳು ಮಾಡುತ್ತದೆ.

ನಾಲ್ಕನೆಯದಾಗಿ ಬಾವಲಿ. ಮನೆಗಳಲ್ಲಿ ಬಾವಲಿಗಳ ಉಪಸ್ಥಿತಿಯು ಸಹ ಅಶುಭ ಎಂದು ಪರಿಗಣಿಸಲಾಗಿದೆ. ಇದನ್ನು ರಾತ್ರಿ ಹಕ್ಕಿ ಎಂತಲೂ ಕರೆಯಲಾಗುತ್ತದೆ. ಇದು ಹೆಚ್ಚಾಗಿ ಹಗಲಿನಲ್ಲಿ ಕಾಣ ಸಿಗುವುದಿಲ್ಲ. ಬಾವಲಿಗಳು ಮನೆಗೆ ಬರುವುದರಿಂದ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ವಾಸವಾಗುತ್ತವೆ. ಇದರಿಂದ ಮನೆಯಲ್ಲಿ ವಾಸ ಮಾಡುವ ಜನರ ಬದುಕಲ್ಲಿ ಹೆಚ್ಚು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೆಲಸದಲ್ಲಿ ಅಡಚಣೆ ಉಂಟಾಗುತ್ತದೆ. ಜೊತೆಗೆ ಅವುಗಳು ದೆವ್ವಗಳಂತೆ ತಲೆ ಕೆಳಗಾಗಿ ನೇತಾಡುವುದರಿಂದ ಕೆಟ್ಟ ಸುದ್ದಿಗಳ ಆಗಮನವನ್ನು ಸೂಚಿಸುತ್ತವೆ.

ಕೊನೆಯದಾಗಿ ನಾಯಿ ಇಂದಿನ ವಿಧ್ಯಾಮನದಲ್ಲಿ ನಾಯಿಯು ಮನುಷ್ಯನ ಒಂದು ಅಂತ್ಯಂತ ಸ್ನೇಹ ಜೀವಿಯಾಗಿದ್ದು. ನಂಬಿಕೆಯ ಮಾತಲ್ಲಿ ನಾಯಿಯನ್ನು ಹೋಲಿಸುವುದು ನಾವು ಕೇಳುತ್ತಲೆ ಇರುತ್ತೇವೆ. ಈ ಪ್ರಾಣಿಯಿಂದಲೂ ಕೆಲವೊಮ್ಮೆ ನಕರಾತ್ಮಕ ಶಕ್ತಿಗಳು ಆಕರ್ಷಣೆಗೊಂಡು ಮನೆಯಲ್ಲಿನ ಜನರ ಬದುಕಲ್ಲಿ ಕಷ್ಟ ದುಃಖ ಗಳು ಸಂಭವಿಸುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಜ್ಯೋತಿಷ್ಯದಲ್ಲಿ ರಾಹು, ಕೇತು ಶನಿ ಜೊತೆ ನಾಯಿಗೂ ಸಹ ಸಂಬಂಧವಿದೆ ಎಂದು ಹೇಳಲಾಗಿದೆ. ಮನೆಗೆ ನಾಯಿಯ ಆಗಮನ ಕೇತುವಿನ ಆಗಮನವಾಗಿದ್ದು, ಮನೆಯಲ್ಲಿನ ಜನರ ಆರೋಗ್ಯ, ಹಣಕಾಸಿನ ವ್ಯವಹಾರದಲ್ಲಿ ನಷ್ಟ ಉಂಟಾಗುತ್ತದೆ.ಹಾಗಾಗಿ ಮನೆಯಲ್ಲಿ ನಾವು ಎಲ್ಲಾ ರೀತಿಯ ಪ್ರಾಣಿ ಪಕ್ಷಿಗಳನ್ನು ಸಾಕುವುದಕ್ಕೂ ಮುನ್ನ ಎಚ್ಚರವಿರಲಿ.

Leave A Reply

Your email address will not be published.