ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತನ್ನ ರಿಟೈರ್ಮೆಂಟ್ ನ ಲಕ್ಷ ಲಕ್ಷ ರೂಪಾಯಿ ದಾನ ಮಾಡಿದ ಸರ್ಕಾರಿ ಶಾಲೆಯ ಶಿಕ್ಷಕ. ದಾನ ಮಾಡಿದ ಹಣವೆಷ್ಟು ಗೊತ್ತೇ?

417

“ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ” ಎನ್ನುವ ಮಾತು ನಾವು ಹಿಂದಿನಿಂದಲೂ ಕೇಳಿದ್ದೇವೆ. ಮನೆಯ ಮೊದಲ ಪಾಠಶಾಲೆ ತಾಯಿ ಮೊದಲ ಗುರು , ಹೌದು ಹೆತ್ತ ತಾಯಿ ನೀತಿ ಶಿಕ್ಷಣ ಹೇಳಿಕೊಟ್ಟರೆ, ತಂದೆ ಜೀವನದ ಮೌಲ್ಯವನ್ನು ಕಲಿಸುತ್ತಾರೆ. ಹಾಗೆ ಮತ್ತೆ ಬರುವುದೇ ಆಚಾರ್ಯ ಅಂದರೆ ಗುರುಗಳು , ಇವರೇ ನೋಡಿ ನಮ್ಮ ಜೀವನವನ್ನು ರೂಪಿಸುವುದು. ಬರೀ ಕಲ್ಲಿನ ಹಾಗೆ ಇದ್ದ ನಮ್ಮನ್ನು ಪರಿಪೂರ್ಣ ಮೂರ್ತಿ ಆಗುವುದು ಇದುವೇ ಗುರುಗಳು. ಇಂತಹ ಗುರುಗಳು ನಮಗೆ ಜೀವನದಲ್ಲಿ ಮಾದರಿ ಆಗಿರುವಂತೆ ಹೇಳಿಕೊಡುತ್ತಾರೆ. ಇದೀಗ ನಾವು ತಿಳಿಯಲು ಹೊರಟದ್ದು ಅಂತಹುದೇ ಮಾದರಿ ಶಿಕ್ಷಕರೊಬ್ಬರ ಕಥೆ.

ಇವರ ಹೆಸರು ವಿಜಯಕುಮಾರ್ ಮಧ್ಯ ಪ್ರದೇಶದ ಪನ್ನಾ ಎಂಬ ಗ್ರಾಮದ ಪ್ರೈಮರಿ ಶಾಲೆಯ ಟೀಚರ್ ಆಗಿದ್ದರು. ಬಡತನದಿಂದ ಬೆಳೆದು ಬಂದ ಇವರು , ತಮ್ಮ ವಿದಾಯ ಭಾಷಣದಲ್ಲಿ ಹೇಳುತ್ತಾರೆ, ” ಜೀವನದಲ್ಲಿ ತುಂಬಾ ಕಷ್ಟ ಪಟ್ಟಿದ್ದೇನೆ, ಈ ಶಿಕ್ಷಕ ವೃತ್ತಿಗೆ ಬರುವುದು ಅಷ್ಟು ಸುಲಭದ ಕೆಲಸ ಆಗಿರಲಿಲ್ಲ. ಎಲ್ಲಾ ಏಳು ಬೀಳುಗಳ ನಡುವೆ ಎದ್ದು ಬಂದಿದ್ದೆ. ಅಂದು ವಿಧ್ಯಾಭ್ಯಾಸ ಪೂರ್ತಿ ಮಾಡಲು ನಾನು ರಿಕ್ಷಾ ಓಡಿಸಿದ್ದೆ, ಮನೆ ಮನೆಗೆ ಹೋಗಿ ಹಾಳು ಹಾಕುತ್ತಿದ್ದೆ, ಹೀಗೆ ಪ್ರತಿ ದಿನ ದುಡಿದು ನಾನು ಶಾಲೆ ಪೂರೈಸಿದೆ ಎನ್ನುತ್ತಾರೆ”.

ಒಬ್ಬ ಬಡ ವಿಧ್ಯಾರ್ಥಿಯ ನೋವು ಮತ್ತೊಬ್ಬ ಅದೇ ಬಡತನದಿಂದ ಮೇಲೆ ಬಂದವನಿಗೆ ಮಾತ್ರ ಗೊತ್ತು . ನೋಡಲು ಅಯ್ಯೋ ಪಾಪ ಎನ್ನುವವರು ತುಂಬಾ ಜನ ಸಿಕ್ಕಿದರೂ ಅಲ್ಲಿನ ಅಸಲೀಯತ್ತು ಮತ್ತು ಆ ಮಟ್ಟದಲ್ಲಿ ಇರುವಾಗಿನ ಮನೋಭಾವ, ಪರಿಸ್ಥಿತಿ ಸಮಾಜ ಎದುರಿಸುವ ಶಕ್ತಿ ಇದೆಲ್ಲ ಆ ಹಂತ ದಾಟಿ ಬಂದವರಿಗೆ ಮಾತ್ರ ಗೊತ್ತು . ಹಾಗೆ ನಮ್ಮ ವಿಜಯಕುಮಾರ್ ಸರ್ ಕೂಡ ಆ ಹಂತದಲ್ಲಿ ಬಂದಿರುವುದರಿಂದ ಅವರಿಗೆ ಆ ನೋವು ಗೊತ್ತು.

ಅವರು ಹೇಳುತ್ತಾರೆ “ನಾನು ಹಿಂದಿನಿಂದಲೂ ಮಕ್ಕಳಿಗೆ ಸಹಾಯ ಮಾಡುತ್ತಾ ಬಂದಿದ್ದೇನೆ. ಅವರಿಗೆ ಸಹಕಾರ ಸಿಕ್ಕಿದೆ ಎಂದು ಗೊತ್ತಾದಾಗ ಅವರ ಮುಖದಲ್ಲಿ ಆಗುವ ಸಂತಸ ನನ್ನ ಜೀವನ ಸಾರ್ಥಕ ಪಡಿಸಿದೆ. ನಾನು ಈ ಶಾಲೆಯಲ್ಲಿ 39 ವರ್ಷ ಸೇವೆ ಸಲ್ಲಿಸಿದ್ದೇನೆ. ಈ ಸೇವಾ ಅವಧಿಯಲ್ಲಿ ನನ್ನ ಗ್ರಾ ಮತ್ತು ಪ್ರೊವಿಡೆಂಟ್ ಫಂಡ್ ಸೇರಿ 40 ಲಕ್ಷ ಆಗಿದೆ ನಾನು ಇದನ್ನು ಕೂಡ ಬದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ದಾನ ಮಾಡುತ್ತಿದ್ದೇನೆ ಎಂದು ಹೇಳಿದರು. ಬಡತನ ವಿಧ್ಯಾಭ್ಯಾಸ ನಿಲ್ಲಿಸಲು ಕಾರಣ ಆಗಬಾರದು. ಇದರ ಸದುಪಯೋಗ ಮಕ್ಕಳು ಪಡೆದು ಅವರು ಕೂಡ ಇದೆ ರೀತಿ ಸಮಾಜಕ್ಕೆ ಮಾದರಿ ಆಗಬೇಕು ಎಂದು ಹೇಳಿದರು”.

ಅದೇನೇ ಇರಲಿ ಇಂತಹ ದೊಡ್ಡ ಮನಸು ಬರುವುದು ಕೇವಲ ಬೆರಳೆಣಿಕೆ ಜನಗಳಿಗೆ ಮಾತ್ರ ಅಂತಹವರಲ್ಲಿ ಇವರೂ ಒಬ್ಬರು. ಇವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ನಾವೆಲ್ಲ ಹಾರೈಸೋಣ. ಇಂತಹ ಮಹಾನುಭಾವ ವ್ಯಕ್ತಿಗೆ ನಮ್ಮದೊಂದು ಸಲಾಂ.

Leave A Reply

Your email address will not be published.