ಬೃಹತ್ ಡೀಸೆಲ್ ಗ್ರಾಹಕರಿಗೆ. ಶಾಕ್ 25 ರೂ ಹೆಚ್ಚಳ. ಆದರೆ ಗ್ರಾಹಕರಿಗೆ ಇದು ಅಷ್ಟರ ಮಟ್ಟಿಗೆ ಹೊರೆಯಾಗಲ್ಲ‌ ಏಕೆ ಗೊತ್ತೆ.

548

ಡೀಸೆಲ್ ಬೆಲೆ ೨೫ ರೂಪಾಯಿ ಹೆಚ್ಚಳವಾಗಿದೆ. ಇದು ಸಾಮನ್ಯ ಗ್ರಾಹಕರಿಗೆ ಅಲ್ಲ ಬದಲಿಗೆ ಸಗಟು ವ್ಯಾಪಾರಿಗಳಿಗೆ ಬೆಲೆ ಹೆಚ್ಚಳದ ಶಾಕ್ ತಗುಲಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ೪೦% ಹೆಚ್ಚಳವಾದ ಹಿನ್ನಲೆಯಲ್ಲಿ ಈ ನಿರ್ದಾರ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ. ಇದರಿಂದ ಮಾಲ್ ಗಳು ಹಾಗು ಸಗಟು ವ್ಯಾಪಾರಸ್ಥರು ಭಾರಿ ಹಿನ್ನಡೆ ಅನುಭವಿಸಿದ್ದಾರೆ. ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ತೈಲ ಬೆಲೆ ಜಾಸ್ತಿ ಆದರೆ ಸಾಮಾನ್ಯ ಗ್ರಾಹಕರಿಗೆ ಕೂಡಾ ತೈಲ ಬಿಸಿ ತಟ್ಟಲಿದೆ.

ಪೆಟ್ರೋಲ್ ಬಂಕ್ ನ ಮೂಲಕ ಮಾರಾಟವಾಗುವ ಚಿಲ್ಲರೆ ವ್ಯಾಪಾರಸ್ಥರು ಅಂದರೆ ಸಾಮಾನ್ಯ ಜನರು ಖರೀದಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಬಸ್ ಗಳ ಮಾಲಕರು ಅಥವಾ ಮಾಲ್ ಗಳು ಡೀಸೆಲ್ ಬಹಳ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತವೆ. ಅಂತಹ ಗ್ರಾಹಕರಿಗೆ ಪ್ರತಿ ಡೀಸೆಲ್ ಬೆಲೆಯಲ್ಲಿ ೨೫ ರೂಪಾಯಿ ಹೆಚ್ಚಳವಾಗಿದೆ. ಈ ಸಗಟು ವ್ಯಾಪಾರಸ್ಥರು ಸಾಮಾನ್ಯವಾಗಿ ಪೆಟ್ರೋಲ್ ಪಂಪ್ ಅಲ್ಲದೇ ಕಂಪೆನಿ ಮುಖಾಂತರವೇ ಖರೀದಿ ಮಾಡುತ್ತಾರೆ. ನೈರಾ‌ಎನರ್ಜಿ ಜಿಯೋ ಬಿಪಿ ನಂತಹ ಕಂಪೆನಿಗಳಿಂದ.

ನವೆಂಬರ್ ಇಂದ ಯಾವುದೇ ರೀತಿಯಲ್ಲಿ ಪೆಟ್ರೋಲ್ ಹಾಗು ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗಲಿಲ್ಲ. ಇದಕ್ಕೆ ಕಾರಣ ಪಂಚ ರಾಜ್ಯಗಳ ಚುನಾವಣೆ ಎಂದರೂ ತಪ್ಪಾಗಲಾರದು. ಆದರೆ ಇದೀಗ ಅಂತರಾಷ್ಟ್ರೀಯ ವಿದ್ಯಾಮಾನಗಳಿಂದಾಗಿ ಹಾಗು ತೈಲ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗಿದ್ದರಿಂದ ಇಜ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ. ಈಗಲೂ ಕೂಡಾ ನಮ್ಮ ನಿಮ್ಮಂತಹ ಸಾಮಾನ್ಯ ಗ್ರಾಹಕರಿಗೆ ಯಾವುದೇ ಬೆಲೆಯಲ್ಲಿ ಏರಿಕೆ ಮಾಡಲಾಗಿಲ್ಲ. ಇದು ನಿಟ್ಟುಸಿರು ಬಿಡುವಂತಾಗಿದೆ.

Leave A Reply

Your email address will not be published.