ಬೈಡೆನ್ ಕೈಯಲ್ಲಿ ಸಾಧ್ಯವಾಗದ್ದು ಕೊರೋನಾ ಈ ಕೆಲಸ ಮಾಡಿ ಮುಗಿಸಿದೆ. ಅರಬ್ ದೇಶಗಳಿಗೆ ಪಾಠ ಕಲಿಸಿದ ಕೊರೋನಾ.

303

ಅರಬ್ ದೇಶಗಳು ತಮ್ಮಲ್ಲಿನ ಕಚ್ಚಾ ತೈಲಗಳಿಂದ ದಿನಕ್ಕೆ ಮಿಲಿಯನ್‌ಗಟ್ಟಲೆ ಹಣ ಮಾಡುತ್ತವೆ. ಇದರಿಂದ ಅರಬೇತರ ದೇಶಗಳಿಗೆ ತೈಲ ಬೆಲೆ ಏರಿಕೆಯಾದರೆ ದೊಡ್ಡ ತಲೆಬಿಸಿ ಶುರುವಾಗುತ್ತದೆ. ೨೦೧೪ ರ ಮೊದಲು ಪ್ರತಿ ಬ್ಯಾರೆಲ್ ಕಚ್ಛಾತೈಲ ಬೆಲೆ ೧೦೦$ ಮೇಲಿತ್ತು. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ‌ ಇದು ಗಲಾರದ ತುಪ್ಪ. ಅದಲ್ಲದೇ ವಿಪಕ್ಷಗಳಿಗೆ ಇದರ ಬೆಲೆಯೇರಿಕೆ ಒಂದು ಚರ್ಚಾ ವಿಷಯವೂ ಆಗಿದೆ.

೨೦೧೪ ರ ನಂತರ ಕ್ರಮೇಣ ಕಚ್ಚಾ ತೈಲ ಬೆಲೆ‌ ಅಂತರಾಷ್ಟ್ರೀಯ ಮಟ್ಟದಲ್ಲಿ ಕಡಿಮೆ ಆಗುತ್ತಾ ಹೋಯಿತು. ಆದರೆ ಭಾರತದಲ್ಲಿ ಬೆಲೆ ಜಾಸ್ತಿ ಆಗುತ್ತಾ ಹೋಯಿತು. ಇದರಿಂದ ಭಾರತದಲ್ಲಿ ಮೋದಿ ವಿರುದ್ದ ಬಹಳಷ್ಟು ಜನರು ಅಸಂತುಷ್ಟರಾಗಿದ್ದರು. ವಿಪಕ್ಷಗಳಿಗೆ ಇದೊಂದು ಮೋದಿ ದೂರಲು ಹಾಟ್ ಟಾಪಿಕ್ ಕೂಡಾ ಆಗಿತ್ತು. ಅಲ್ಲದೇ‌ ೨೦೨೦ ರ ಕೊರೋನಾ ಬಂದ ಸಮಯದಲ್ಲಿ ಈ ತೈಲ ಬೆಲೆ ಬಹಳ ಕಡಿಮೆ ಆಗಿತ್ತು. ಕೊರೋನಾ ನಿಂತ ನಂತರ ಇದರ ಬೆಲೆ ದಿಡೀರನೇ ಮೇಲೆ ಹೋಗಲು ಪ್ರಾರಂಭಿಸಿತು. ಇದರ ಬೆಲೆ ಸುಮಾರು ೮೫ ಡಾಲರ್ ಪ್ರತಿ ಬ್ಯಾರೆಲ್ ಗೆ ತಲುಪಿತು. ಭಾರತದಲ್ಲಂತೂ ಇದರ ಬೆಲೆ ೧೨೦-೧೩೦ ವರೆಗೂ ಹೆಚ್ಚಾಯಿತು.

ತದನಂತರ ಮೋದಿ ಸರಕಾರ ಹಾಗು ಬಿಜೆಪಿ ಶಾಸಿತ ರಾಜ್ಯ ಸರಕಾರಗಳು ತೈಲಗಳ ಮೇಲಿನ ತೆರಿಗೆ ಕಡಿಮೆ ಮಾಡಿ ದೇಶದ ಜನತೆಗೆ ದೀಪಾವಳಿ ಉಡುಗೊರೆ ನೀಡಿತು. ಆದರೆ ಕಾಂಗ್ರೆಸ್ ಆಡಳಿತ ನಡೆಸುವ ರಾಜ್ಯಗಳು ಬೆಲೆ ಕಡಿಮೆ ಮಾಡದೆ ಜನರನ್ನು ಸತಾಯಿಸಿತು. ಇದು ಭಾರತದಲ್ಲಿ ಅಲ್ಲದೇ ವಿದೇಶಗಳಲ್ಲಿ ಕೂಡಾ ತೈಲದ ಮೇಲಿನ ಬೆಲೆಯೇರಿಕೆ ಸರಕಾರಗಳನ್ನು ದೂರುವಂತೆ ಮಾಡಿತು. ದೊಡ್ಡಣ್ಣ ಎನಿಸಿಕೊಂಡ ಅಮೇರಿಕ ಎಲ್ಲಾ ದೇಶಗಳಿಗೆ ತಮ್ಮ ತಮ್ಮಲ್ಲಿ ಕೂಡಿಟ್ಟ ತೈಲ ರಿಸರ್ವ್ ಬಳಸುವಂತೆ ಆದೇಶ ನೀಡಿತು. ಬೈಡನ್ ಅವರ ಈ ನಡೆ ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕಡಿಮೆ ಮಾಡುತ್ತದೆ ಎಂದು ನಂಬಿತ್ತು. ಆದರೆ ಅರಬ್ ದೇಶಗಳು ಬೈಡನ್ ರ ಈ ನಡೆಗೆ ಕ್ಯಾರೇ ಅನ್ನದೆ ಮರುದಿನವೇ ಬೆಲೆ‌ ಹೆಚ್ಚು ಮಾಡಿತು.

ಆದರೆ ಇತ್ತೀಚಿಗೆ ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದಂತಹ ಹೊಸ ಕೊರೋನಾದ ಡೆಲ್ಟಾ ರೂಪಾಂತರಿ ತಳಿಗೆ ಈ ಅರಬ್ ದೇಶಗಳು ಹೆದರಿದೆ. ಅಲ್ಲದೇ ಈಗಾಗಲೇ ಯುರೋಪಿಯನ್ ದೇಶಗಳಲ್ಲಿ ಕೊರೋನಾ ಐದನೇ ಅಲೆ ಇದ್ದು ಕೆಲವು ಕಡೆ ಲಾಕ್ಡೌನ್ ಕೂಡಾ ಮಾಡಲಾಗಿದೆ. ಈ ಹೊಸ ರೂಪಾಂತರ ವೈರಸ್ ಇಂದಾಗಿ ಮತ್ತೆ ಪ್ರಪಂಚದಾದ್ಯಂತ ಲಾಕ್ಡೌನ್ ಹೆದರಿಕೆ ಶುರುವಾಗಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾ ತೈಲ ಬೆಲೆ ಸುಮಾರು‌ ೧೦% ಗೂ ಅಧಿಕವಾಗಿ ಕಡಿಮೆಯಾಗಿದೆ. ೭೯$ ಇದ್ದ ತೈಲ‌ ಇಂದು ೬೯$ ಪ್ರತಿ ಬ್ಯಾರೆಲ್ ಗೆ ಸಿಗುತ್ತಿದೆ. ದೊಡ್ಡಣ್ಣ ಬೆಲೆ ತಗ್ಗಿಸಲು ವಿಫಲವಾದರು ಆದರೆ ಕೊರೋನಾ ತೈಲ ಬೆಲೆ ಇಳಿಸುವುದರಲ್ಲಿ‌ ಸಫಲವಾಗಿದೆ.

Leave A Reply

Your email address will not be published.