ಜನವರಿ ಬರ್ತಾ ಇದೆ ಹೊಸ ಕೋರೋಣ ತಳಿ ಬಗ್ಗೆನೂ ಸುದ್ದಿ ಇದೆ. ಎಲ್ಲೆಲ್ಲ ಈವಾಗಲೇ ಹರಡಿದೆ ಈ ಹೊಸ ತಳಿ? ಇಲ್ಲಿದೆ ಮಾಹಿತಿ.

300

ಹೆಡ್ಲೈನ್ ನೋಡಿ ಆಶ್ಚರ್ಯ ಆಯ್ತಾ? ಹೌದು ಸ್ನೇಹಿತರೆ ನಮ್ಮ ದೇಶದಲ್ಲಿ ಜನವರಿ ಫೆಬ್ರುವರಿ ಮಾರ್ಚ್ ಬಂತೆಂದರೆ ಸಾಕು ಕೋರೋಣ ಒಂದನೇ ಅಲೆ ಎರಡನೇ ಅಲೆ ಅಂತ ಶುರು ಆಗುತ್ತದೆ, ಹೋದ ವರ್ಷ ಅದಕ್ಕಿಂತ ಹಿಂದಿನ ವರ್ಷ ಕೂಡ ಇದೆ ಮಾರ್ಚ್ ತಿಂಗಳ ಆಸುಪಾಸಿನಲ್ಲಿ ಕೋರೋಣ ದೇಶದಲ್ಲಿ ಹರಡಿತ್ತು ಹಾಗು ಲೊಕ್ಡೌನ್ ದೇಶಾದ್ಯಂತ ಇತ್ತು. ಈಗ ದೇಶದಲ್ಲಿ ಎರಡನೇ ಅಲೆ ತೀರಾ ಕಡಿಮೆ ಆಗಿದೆ ಆದರೆ ಇದೀಗ ಸೌತ್ ಆಫ್ರಿಕಾ ದಿಂದ ಹೊಸ ವೈರಸ್ ಬಗ್ಗೆ ಸುದ್ದಿ ಬರುತ್ತಿದೆ. ಏನಿದು ಹೊಸ ತಳಿ ಇದರ ಹೆಸರೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ದಕ್ಷಿಣ ಆಫ್ರಿಕಾದಲ್ಲಿ ಹೊಸ ವೈರಸ್ ಕಂಡುಬಂದಿದೆ, ಇದು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಎರಡನೇ ಅಲೆಗೆ ಸಾಕ್ಷಿ ಆದಂತಹ ಡೆಲ್ಟಾ ವೈರಸ್ ನ ರೂಪಾಂತರಿ ಆಗಿದೆ. ಇದು ೩೨ ಬರಿ ರೂಪಾಂತರಿ ಆದಂತಹ ಕೋರೋಣ ವೈರಸ್ ಆಗಿದ್ದು ಡೆಲ್ಟಾಗಿಂತಲೂ ಅತಿ ವೇಗದಲ್ಲಿ ಹರಡುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ಇದನ್ನು ೧.೧.೫೨೯ ಎಂದು ಕೂಡ ಕರೆಯಲಾಗುತ್ತದೆ. ಅದಲ್ಲದೆ ಇದು ಇಸ್ರೇಲ್ ಅಲ್ಲಿ ಮೊದಲ ಪ್ರಕರಣ ಪತ್ತೆಯಾಗಿದೆ. ಆಫ್ರಿಕನ್ ಪ್ರಜೆ ಒಬ್ಬರು ಇಸ್ರೇಲ್ ಗೆ ತೆರಳಿದ್ದರು, ಅವರ ಪರೀಕ್ಷೆ ನಡೆಸಿದಾಗ ಈ ಹೊಸ ತಳಿ ಬಗ್ಗೆ ತಿಳಿದಿದೆ. ಅದಲ್ಲದೆ ಇವರ ಜೊತೆ ಪ್ರಯಾಣ ನಡೆಸಿದ ಇನ್ನಿಬ್ಬರಿಗೂ ಈ ವೈರಸ್ ಹರಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇಸ್ರೇಲ್ ಇದಕ್ಕಿಂತ ಮೊದಲು ಆಫ್ರಿಕಾದ ೭ ದೇಶಗಳ ವಿಮಾನ ಬರುವುದನ್ನು ನಿಲ್ಲಿಸಿತ್ತು. ಅದಲ್ಲದೆ ಇಸ್ರೇಲ್ ಅಲ್ಲಿ ಪ್ರತಿಯೊಬ್ಬರಿಗೂ ಕೋರೋಣ ಲಸಿಕೆ ನೀಡಲಾಗಿದೆ ಆದರೂ ಈ ಹೊಸ ರೂಪಾಂತರಿ ಕೋರೋಣ ಪ್ರಕರಣ ಪತ್ತೆಯಾಗಿದ್ದು ಕಳವಳಕಾರಿ ಎಂದು ಅಲ್ಲಿನ ಪ್ರಧಾನಿ ಹೇಳಿದ್ದಾರೆ. ಇದಲ್ಲದೆ ಯುರೋಪಿಯನ್ ರಾಷ್ಟ್ರಗಳು ಕೂಡ ಆಫ್ರಿಕಾದ ವಿಮಾನಗಳ ಪ್ರವೇಶ ನಿಲ್ಲಿಸಿದೆ. ಅಲ್ಲದೆ ಇಲ್ಲೂ ಕೋರೋಣ ೫ ನೇ ಅಲೆ ಜೋರಾಗಿದೆ. ಯೂರೋಪ್ ನ ಹಲವು ದೇಶಗಳಲ್ಲಿ ಲೊಕ್ಡೌನ್ ಕೂಡ ನಡೆಯುತ್ತಿದೆ. ಭಾರತದಲ್ಲಿ ಇವಾಗ ಯಾವುದೇ ನಿರ್ಬಂಧ ಇಲ್ಲದಿದ್ದರೂ ಆಫ್ರಿಕಾದ ರೂಪಾಂತರಿ ಕೋರೋಣ ಭಾರತಕ್ಕೆ ಬರದಂತೆ ಕೇಂದ್ರ ಸರಕಾರ ಕೆಲಸ ಮಾಡುತ್ತಿದೆ.

Leave A Reply

Your email address will not be published.