ಭಾರತದ ಮೊದಲ ಏರ್ ಕಂಡೀಷನ್ ರೈಲಿನ ಬಗ್ಗೆ ಗೊತ್ತೆ? ಇದರಲ್ಲಿ ಎಸಿ ಇರಲಿಲ್ಲ, ಮತ್ತೆ ಹೇಗೆ ಇದೆ ಏರ್ ಕಂಡೀಷನ್ ಬೋಗಿ?

907

ರೈಲ್ವೆ ಎಂದರೆ ಇಡೀ ಭಾರತವನ್ನು ಸಂದಿಸುವ ಮಾರ್ಗ. ಅತ್ಯಂತ ಕಡಿಮೆ ಖರ್ಚಿನಲ್ಲಿ ದೇಶ ಸುತ್ತುವ ಯೋಜನೆ ಇದ್ದಾರೆ ಅದಕ್ಕೆ ಸೂಕ್ತ ರೈಲ್ವೆ . ದೇಶದ ಉದ್ದಗಲಕ್ಕೂ ಸಂಚರಿಸುತ್ತದೆ. ಹಾಗೆಯೇ ಇದು ಅತಿ ಹೆಚ್ಚು ಉದ್ಯೋಗ ನೀಡುವ ಇಲಾಖೆ . ಭಾರತ ಅಲ್ಲದೇ ಇಡೀ ವಿಶ್ವದಲ್ಲೇ ಅತಿ ಹೆಚ್ಚು ನೌಕರರನ್ನು ಹೊಂದಿರುವ ವ್ಯವಸ್ಥೆಗಳಲ್ಲಿ bhaaratda ರೈಲ್ವೆ ಇಲಾಖೆ ಕೂಡ ಒಂದು . ಹಾಗಾದರೆ ಭಾರತದಲ್ಲಿ ಆರಂಭವಾದ ರೈಲಿನ ಬಗ್ಗೆ ಎಲ್ಲರಿಗೂ ಗೊತ್ತು ಆದರೆ ಭಾರತದಲ್ಲಿ ಆರಂಭವಾದ ಮೊದಲ ಎಸಿ ರೈಲಿನ ಬಗ್ಗೆ ಎಷ್ಟು ಜನರಿಗೆ ಗೊತ್ತು?

ಈ ರೈಲಿನಲ್ಲಿ ಎಸಿ ಇರಲಿಲ್ಲ ಆದರೂ ಇದು ಎಸಿ ರೈಲ್. ಅಚ್ಚರಿ ಎನಿಸಿದರೂ ಸತ್ಯ ಇದು. ಬನ್ನಿ ತಿಳಿಯೋಣ ಇದರ ಬಗೆಗಿನ ಹೆಚ್ಚಿನ ಮಾಹಿತಿ. 1853 ರಲ್ಲಿ ಭಾರತದ ಮೊದಲ ರೈಲಿನ ಸಂಚಾರ ಆರಂಭವಾಯಿತು.ಇದು ಭಾರತದ ಅಭಿವೃದ್ದಿಯ ದಿಕ್ಕನ್ನೇ ಬದಲಿಸಿದ ದಿನ ಎಂದರೂ ತಪ್ಪಾಗಲಿಕ್ಕಿಲ್ಲ. ಯಾಕೆಂದರೆ ರೈಲ್ವೆ ನಂಬಿಕೊಂಡು ಅದೆಷ್ಟೋ ಕಾರ್ಕಾನೆಗಳು ಈಗಲೂ ಕಾರ್ಯ ನಿರ್ವಹಿಸುತ್ತಿವೆ. 1934 ರಲ್ಲಿ ಭಾರತದ ಮೊದಲ ಎಸಿ ರೈಲು ಓಡಾಟ ಆರಂಭಿಸಿತು . ಆರಂಭದಲ್ಲಿ ರೈಲಿಗೆ ಯಾವುದೇ ರೀತಿಯ ಎಸಿ ಅಳವಡಿಸಿಲ್ಲ.

ಹೌದು ಅದರ ಬದಲಿಗೆ ರೈಲಿನ ಮೇಲೆ ಚೇಂಬರ್ ಮಾದರಿಯ ಬಾಕ್ಸ್ ಮಾಡಿ ಅದರ ಒಳಗೆ ಐಸ್ ತುಂಬಲಾಗುತ್ತಿತ್ತು. ಇದು ಇಡೀ ರೈಲು ಬೋಗಿಯನ್ನು ತಣ್ಣಗೆ ಮಾಡುತ್ತಿತ್ತು. ಒಳಗೆ ಕುಳಿತವರಿಗೆ ಇದು ಎಸಿ ಯಲ್ಲಿ ಕುಳಿತ ಅನುಭವ ನೀಡುತ್ತಿತ್ತು. ಹೌದು ಇದೆ ಭಾರತದ ಮೊದಲ ಎಸಿ ರೈಲು. ನೋಡಿ ಎಸಿ ಇಲ್ಲದ ಕಾಲದಲ್ಲಿ ಯಾವ ರೀತಿಯಲ್ಲಿ ಈ ಯೋಜನೆ ಮಾಡಿದ್ದರು. ಭಾರತೀಯರು ಮನಸು ಮಾಡಿದರೆ ಏನು ಮಾಡಬಲ್ಲರು ಎಂಬುವುದಕ್ಕೆ ನೈಜ ಉದಾಹರಣೆ ಇದು.

Leave A Reply

Your email address will not be published.