ಮೋದಿ ೩ ಕೃಷಿ ಕಾನೂನು ಹಿಂಪಡೆದಿದರ ಹಿಂದೆ ಇರಬಹುದು ಈ ಮೂರು ಕಾರಣಗಳು. ಯಾವ ಕಾರಣಗಳು? ಇಲ್ಲಿದೆ ಸಂಕ್ಷಿಪ್ತ ವಿವರಣೆ.

842

ದೆಹಲಿ ಗಡಿ ಭಾಗಗಳಲ್ಲಿ ಒಂದು ವರ್ಷದಿಂದ ರೈತರು ಎಂದು ಹೇಳಿಕೊಂಡು ಮೋದಿ ಸರಕಾರ ತಂದ ಕೃಷಿ ಮಸೂದೆ ಹಿಂಪಡೆಯಬೇಕೆಂಬ ಹೇಳಿಕೆಯೊಂದಿಗೆ ಶುರುವಾದ ಪ್ರತಿಭಟನೆ ಮೋದಿಯವರು ಆ ಮೂರು ಕೃಷಿ ಮಸೂದೆ ಹಿಂಪಡೆದರೂ ನಿಲ್ಲಲಿಲ್ಲ. ಮೊನ್ನೆ ಪ್ರಧಾನ ಮಂತ್ರಿ ಮೋದಿಜೀ ದೇಶವನ್ನುದ್ದೇಶಿಸಿ‌ ರೃತರಿಗೋಸ್ಕರ ಕಾನೂನು ತಂದೆವು ಆದರೆ ದೇಶಕ್ಕೋಸ್ಕರ ಅದನ್ನು ಹಿಂಪಡೆಯುತ್ತಿದ್ದೇವೆ ಎಂದು ಹೇಳಿ ಇಡೀ ದೇಶದ ಜನರಲ್ಲಿ ಕುತೂಹಲ ಮೂಡಿಸಿದರು. ಬಿಜೆಪಿಯಿಂದ ಹಿಡಿದು ವಿಪಕ್ಷಗಳು ಹಾಗು ಸಾಮನ್ಯ ಜನರೂ ಕೂಡಾ ಈ ಮಸೂದೆ ಹಿಂಪಡೆದಿದ್ದಕ್ಕೆ ಒಂದೊಂದು ಕಾರಣಗಳನ್ನು ಹೇಳುತ್ತಾ ಬರುತ್ತಿದ್ದಾರೆ. ಇಂದು ನಾವು ಇದರ ಹಿಂದೆ ಇರಬಹುದಾದಂತಹ ಮೂರು ಕಾರಣಗಳನ್ನು ಹೇಳುತ್ತೇವೆ ಪೂರ್ತಿ ಓದಿ.

೧. ಮುಂಬರುವ ಚುನಾವಣೆ – ಕೃಷಿ ಮಸೂದೆ ಹಿಂಪಡೆದುದರ ಕಾರಣ ಮೋದಿ ಸರಕಾರದಿಂದ ಅಧಿಕೃತವಾಗಿ ಯಾಕೆ ಅಂತ ತಿಳಿಸಲಿಲ್ಲ, ಆದರೆ ವಿಪಕ್ಷಗಳ ಪ್ರಕಾರ ಮುಂದಿನ ವರ್ಷ ಪಂಚ ರಾಜ್ಯಗಳ ಚುನಾವಣೆ ಬರಲಿದೆ ( ಉತ್ತರ ಪ್ರದೇಶ, ಗೋವಾ, ಪಂಜಾಬ್, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ) ಇದಕ್ಕಾಗಿ ಮೋದಿ ಸರಕಾರ ಈ ಕೃಷಿ ಕಾನೂನು ಹಿಂಪಡೆದಿದೆ ಎನ್ನುತ್ತಿದ್ದಾರೆ. ಮೋದಿಜೀಗೆ ಮುಂದಿನ ಚುನಾವಣೆಯ ಸಮೀಕ್ಷೆ ಸಿಕ್ಕಿರಬಹುದು ಗೆಲ್ಲುವುದಿಲ್ಲ ಅಂತ ಗೊತ್ತಾದ ಮೇಲೆ ಈ ಮಸೂದೆ ಹಿಂಪಡೆದಿರಬಹುದು ಎಂದು ಪ್ರಿಯಾಂಕಾ ವಾದ್ರ ತಿಳಿಸಿದ್ದಾರೆ.

೨. ಪಾಲಿಕೆ ಚುನಾವಣೆಯಲ್ಲಿನ ಸೋಲು – ಇತ್ತೀಚಿಗೆ ಪಂಜಾಬ್ ನಲ್ಲಿ ನಡೆದ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮುಖಭಂಗ ಅನುಭವಿಸಿದೆ. ಮಣ್ಣು ಮುಕ್ಕಿದ್ದ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಿತ್ತು. ಅದಲ್ಲದೇ ಉತ್ತರಾಖಂಡದಲ್ಲಿ ಉಪ ಚುನಾವಣೆ ಸೋಲು ಮೋದಿ ಸರಕಾರ ಈ ಕೃಷಿ ಮಸೂದೆ ವಾಪಸ್ಸಾತಿಗೆ ಕಾರಣ ಎಂದು ಕೂಡಾ ಹೇಳಲಾಗುತ್ತಿದೆ.

೩. ಚಳಿಗಾಲದ ಅಧಿವೇಶನ – ನವೆಂಬರ್ ೨೯ ರಿಂದ ಚಳಿಗಾಲದ ಅಧಿವೇಶನ ಶುರುವಾಗಲಿದ್ದು ಅದರ ಕಾರಣಕ್ಕೆ ಈ ಮೂರು ಕೃಷಿ ಮಸೂದೆ ಹಿಂಪಡೆಯಲು ಮೋದಿ ಸರಕಾರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಕಳೆದ ಅದೀವೇಶನದಲ್ಲಿ ವಿಪಕ್ಷಗಳು ಈ ಕೃಷಿ ಮಸೂದೆ ವಿರುದ್ದ ವಾದಗಳನ್ನು ಮಾಡಿ ಪೂರ್ತಿ ಅಧಿವೇಶನ ಯಾವುದೇ ಫಲವಿಲ್ಲದೇ ವಿಫಲವಾಗಿತ್ತು. ಈ ಮೂರು ಮಸೂದೆಯನ್ನು ಈ ಅಧಿವೇಶನದಲ್ಲಿ ವಾಪಸ್ಸು ತೆಗೆದುಕೊಳ್ಳುವ ಬಿಲ್ ಪಾಸ್ ಮೂಲಕ ಹಿಂಪಡೆಯಲಾಗುತ್ತದೆ ಅಥವಾ ಇನ್ನೊಂದು ordinance ತಂದು ಇದಕ್ಕೆ ಸಮಾನವಾದ ಇನ್ನೊಂದು ಮಸೂದೆ ಸಭೆಗಳಲ್ಲಿ ಮಾಡಬಹುದಾಗಿದೆ.

Leave A Reply

Your email address will not be published.