ಭಾರತದ ಹಾಗು ನ್ಯೂಜಿಲ್ಯಾಂಡ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಸೋಲಿಗೆ ಕಾರಣ ತಿಳಿಸಿದ ರಾಹುಲ್ ದ್ರಾವಿಡ್. ಏನಿದು ಕಾರಣ?

284

ಭಾರತೀಯ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರು ಆಯ್ಕೆ ಆಗಿದ್ದಾರೆ. ಮೊದಲ ಸರಣಿಯಲ್ಲಿಯೇ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ನ್ಯೂಜಿಲ್ಯಾಂಡ್ ನ ವಿರುದ್ಧ ಅದಾಲದ ೩ ಪಂದ್ಯಗಳ ಟಿ-೨೦ ಸರಣಿಯನ್ನು ಕ್ವೀನ್ಸ್ವೀಫ್ ಮಾಡುವ ಮೂಲಕ ಸರಣಿ ತನ್ನದಾಗಿಸಿಕೊಂಡಿದೆ. ರಾಹುಲ್ ದ್ರಾವಿಡ್ ಪ್ರಕಾರ ದುಬೈ ಅಲ್ಲಿ ನವೆಂಬರ್ ೧೪ ರಂದು ವರ್ಲ್ದ್ಕ್ಪ್ ಫೈನಲ್ ಆಡಿ ನವೆಂಬರ್ ೧೭ ಕ್ಕೆ ಟಿ-೨೦ ಪಂದ್ಯ ಆಡುವುದು ಕಷ್ಟಕರವಾಗಿತ್ತು ಎಂದು ಹೇಳಿದ್ದಾರೆ.

೩-೦ ಅಂತರದಲ್ಲಿ ಸರಣಿ ಗೆದ್ದ ನಂತರ ರಾಹುಲ್ ದ್ರಾವಿಡ್ ಈ ಸರಣಿ ವಾಸ್ತವದಲ್ಲಿ ಒಂದು ಉತ್ತಮ ಸರಣಿ ಆಗಿತ್ತು. ಎಲ್ಲರು ಉತ್ತಮ ರೀತಿಯಲ್ಲಿ ಆಟ ಆಡಿದ್ದಾರೆ. ಮೊದಲ ಸರಣಿ ಗೆದಿದ್ದು ಒಳ್ಳೆಯ ಆತ್ಮ ವಿಶ್ವಾಸ ನೀಡಿದೆ. ನ್ಯೂಜಿಲ್ಯಾಂಡ್ ವರ್ಲ್ದ್ಕ್ಪ್ ಫೈನಲ್ ಆಡಿದ ನಂತರ ೩ ದಿನಗಳ ನಂತರ ಇನ್ನೊಂದು ದೇಶದ ವಿರುದ್ಧ ಸರಣಿ ಆಡುವುದು ಕಷ್ಟಕರವಾದ ಸಂಗತಿ. ಅವರಿಗೆ ಇದು ಅತ್ಯಂತ ಕಷ್ಟಕರ ಆದಂತಹ ಸರಣಿ ಆಗಿದೆ ಎಂದು ಹೇಳಿದ್ದಾರೆ.

ಈ ಸರಣಿ ನಮ್ಮ ತಂಡಕ್ಕೆ ಉತ್ತಮವಾಗಿತ್ತು, ಈ ಸರಣಿಯಲ್ಲಿ ಸಿಕ್ಕ ಪಾಠವನ್ನು ನಾವು ಮುಂದಿನ ಪಂದ್ಯಗಳಿಗೂ ಅನ್ವಯಿಸಬೇಕಾಗಿದೆ. ಮುಂದಿನ ೧೦ ತಿಂಗಳು ನಮಗೆ ಪರೀಕ್ಷೆಯ ದಿನಗಳಾಗಿವೆ. ಏಳು ಬೀಳಿನ ದಿನಗಳು ಮುಂದಿವೆ. ಕೆಲ ಯುವ ಆಟಗಾರರನ್ನು ಬರುತ್ತಲೇ ನೋಡಿದಾಗ ಖುಷಿಯಾಯಿತು. ಕೆಲ ತಿಂಗಳುಗಳಿಂದ ಯಾವುದೇ ಪಂದ್ಯವನ್ನು ಅದಾದ ಯುವ ಆಟಗಾರರಿಗೆ ಈ ಸರಣಿಯಲ್ಲಿ ಆಡಲು ಅವಕಾಶ ನೀಡಿದೆವು. ನಮ್ಮ ತಂಡದ ಆಟಗಾರರ ಕೆಲವು ಕೌಶಲ್ಯ ನಮಗೆ ಈ ಸರಣಿಯಲ್ಲಿ ಗೊತ್ತಾಯಿತು ಎಂದು ನೂತನ ಕೋಚ್ ರಾಹು ದ್ರಾವಿಡ್ ಹೇಳಿದ್ದಾರೆ.

ಅದೇ ರೀತಿ ವಿಶ್ರಾಂತಿ ಪಡೆಯುತ್ತಿರುವ ನಮ್ಮ ಆಟಗಾರರು ತಂಡಕ್ಕೆ ಮರಳಿದರೆ ನಮ್ಮ ತಂಡ ಬಲಿಷ್ಠ ಆಗುವುದರಲ್ಲಿ ಅನುಮಾನ ಇಲ್ಲ ಎಂದು ದ್ರಾವಿಡ್ ಹೇಳಿದ್ದಾರೆ. ಅದೇ ರೀತಿ ನಮ್ಮ ಬಳಿ ಪರ್ಯಾಯ ತಂಡ ಕೂಡ ಬಲಿಷ್ಠವಾಗಿದ್ ಎಂದು ನೋಡಿದರು ಕೂಡ ಖುಷಿ ಆಗುತ್ತದೆ ಎಂದು ಹೇಳಿದ್ದಾರೆ. ಮುಂದೆ ಹಲವಾರು ಸರಣಿ ಪಂದ್ಯಗಳನ್ನು ನಾವು ಆಡಲಿದ್ದೇವೆ ಹಾಗೇನೇ ವಿಶ್ವ ಕಪ್ ಕೂಡ ನಮ್ಮ ಮುಂದಿದೆ ನಮ್ಮ ದೇಶದ ಈ ಆಟಗಾರರ ಫಿಟ್ನೆಸ್ ನೋಡಿದರೆ ಒಂದು ಉತ್ತಮ ತಂಡ ಆಗುವುದರಲ್ಲಿ ಅನುಮಾನವಿಲ್ಲ. ಇದರ ನಡುವೆ ಎಲ್ಲ ಆಟಗಾರರು ಸ್ವಾವಲಂಬಿ ಆದರೆ ಬಲಿಷ್ಠ ತಂಡವಾಗಿ ಭಾರತ ಹೊರಹೊಮ್ಮಲಿದೆ.

Leave A Reply

Your email address will not be published.