ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಇರುವಾಗ ಬಿಜೆಪಿ ಮತ್ತು ಕಾಂಗ್ರೆಸ್ ಎಷ್ಟು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ? ಮುಂದಿನ ಚುನಾವಣೆ ಯಾರಿಗೆ ವರದಾನ ಆಗಲಿದೆ?

48

ಪಂಚರಾಜ್ಯಗಳ ಚುನಾವಣೆ ಈಗಾಗಲೆ ಮುಗಿದಿದ್ದು ಮುಂಬರುವ ಲೋಕಸಭಾ ಚುನಾವಣೆಗೆ ವೇದಿಕೆ ಸಜ್ಜಾಗಿದೆ. ಎಲ್ಲಾ ರೀತಿಯ ಆಡಳಿತ ವೈಖರಿಗಳ ಮಧ್ಯೆ ಯಾವೆಲ್ಲ ಪಕ್ಷ ಎಷ್ಟು ರಾಜ್ಯಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡು ಮುಂದೆ ಬರುವ ಲೋಕಸಭಾ ಚುನಾವಣೆ ಸಜ್ಜಾಗಿದೆ ಎಂದು ನೋಡೋಣ. ಕೇಂದ್ರದಲ್ಲಿ ಈಗಾಗಲೇ ಬಿಜೆಪಿ ಅಧಿಕಾರದಲ್ಲಿ ಇದ್ದು ಸತತ ಎರಡು ಬಾರಿ ಗೆದ್ದು ಲೋಕಸಭೆಯಲ್ಲಿ ತನ್ನ ಅಧಿಕಾರ ನಡೆಸುತ್ತಿದೆ. ಮೋದಿ ಹವಾ ಇನ್ನೂ ತಣ್ಣಗೆ ಆಗುವ ಯಾವ ಲಕ್ಷಣ ಕಾಣುತ್ತಿಲ್ಲ, ಅದಕ್ಕೆ ಹಿಡಿದ ಕೈಗನ್ನಡಿ ಈ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ.

ಯಾವುದೇ ಭಾಗ್ಯಗಳ ಗೋಜಿಗೆ ಹೋಗದ ಜನರು 3 ರಾಜ್ಯಗಳಲ್ಲಿ ಬಿಜೆಪಿ ಗೆ ಬಹುಮತ ನೀಡಿದ್ದು ಮುಂದೆ ಬರುವ ಲೋಕಸಭಾ ಚುನಾವಣೆಗೆ ಏನೋ ಬಹುದೊಡ್ಡ ಸಂದೇಶ ಕೊಟ್ಟಂತೆ ಕಾಣುತ್ತಿದೆ. ಹಾಗಾದರೆ ಈಗ ಅಧಿಕಾರದಲ್ಲಿ ಬಿಜೆಪಿ ಒಟ್ಟು ಎಷ್ಟು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ ಮತ್ತು ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ ಎಷ್ಟು ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆ ಎನ್ನುವುದನ್ನು ಒಮ್ಮೆ ನೋಡೋಣ.

ಬಿಜೆಪಿ ಒಟ್ಟು 17 ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿದೆ. ಅದರಲ್ಲಿ ನಿನ್ನೆ ನಡೆದ ಪಂಚರಾಜ್ಯಗಳ ಚುನಾವಣೆ ಲೆಕ್ಕಾಚಾರ ಸೇರಿಸಿ. ಅದೇ ರೀತಿಯಲ್ಲಿ ಇಂದು ಮತಗಣನೆ ನಡೆಯುತ್ತಿರುವ ಮಿಜೆರಾಂ ಸೇರಿದರು ಆಶ್ಚರ್ಯ ಇಲ್ಲ. ಹಾಗೆಯೇ ಉಳಿದಂತೆ ಕಾಂಗ್ರೆಸ್ ಕೇವಲ 3 ರಾಜ್ಯಗಳಲ್ಲಿ ತನ್ನ ಅಧಿಕಾರ ಚಲಾವಣೆ ಮಾಡುತ್ತಿದೆ. ಅದರಲ್ಲಿ ನಿನ್ನೆ ನಡೆದ ತೆಲಂಗಾಣ ಚುನಾವಣೆಯ ಮತ ಎಣಿಕೆ ಮುಗಿದಿದ್ದು ಅಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಇನ್ನು ಮುಂದಿನ ಲೋಕಸಭಾ ಚುನಾವಣೆ ಕಡೆ ಗಮನ ಹರಿಸಿದರೆ ಬಿಜೆಪಿ ಪರವಾಗಿ ಜನರು ಇದ್ದರೆ ಎಂಬ ಸಂದೇಶ ಮತ್ತೊಮ್ಮೆ ಜೋರಾಗಿ ಕೇಳುತ್ತಿದೆ. ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗಿ ಬರುತ್ತಾರೆ ಎಂದು ಬಹುಜನರ ಆಶಯ ಆಗಿದೆ.

Leave A Reply

Your email address will not be published.