ತುಳಸಿ ಗಿಡ ನೆಟ್ಟ ದಿಕ್ಕಿಗೂ ಹಣದ ಸಮಸ್ಯೆಗೂ ಸಂಬಂಧ ಇದೆಯಾ? ಹೌದು ಎನ್ನುತ್ತಾರೆ ನಮ್ಮ ಹಿರಿಯರು. ಹಾಗಾದರೆ ಯಾವ ದಿಕ್ಕಿಗೆ ನೆಟ್ಟರೆ ಸೂಕ್ತ?

353

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇದೆ ಹಾಗೇನೇ ಪಾವಿತ್ರ್ಯತೆ ಕೂಡ ಇದೆ. ಹಿಂದೂಗಳ ಪ್ರತಿ ಮನೆಯಲ್ಲೂ ತುಳಸಿ ಗಿಡವನ್ನು ನಾವು ಕಾಣುತ್ತೇವೆ. ತುಳಸಿಯನ್ನು ತುಳಸಿದೇವಿಯನ್ನಾಗಿ ನಾವು ನೋಡುತ್ತೇವೆ. ಅದೇ ರೀತಿ ತುಳಸಿದೇವಿ ಇದ್ದ ಕಡೆ ಲಕ್ಷ್ಮೀದೇವಿಯ ವಾಸ ಕೂಡ ಇದೆ ಎನ್ನುತ್ತಾರೆ ನಮ್ಮ ಹಿರಿಯರು. ಇದು ಧಾರ್ಮಿಕ ಮಾತ್ರ ಅಲ್ಲದೆ ವೈಜ್ಞಾನಿಕವಾಗಿಯೂ ಮಹತ್ವ ಪಡೆದಿರುವ ಸಸಿ. ತುಳಸಿ ಗಿಡ ಇದ್ದ ಕಡೆ ಸುತ್ತಮುತ್ತಲಿನ ಗಾಳಿಯನ್ನು ಶುದ್ದೀಕರಣ ಮಾಡುತ್ತದೆ ಎಂದು ವಿಜ್ಞಾನ ಹೇಳುತ್ತದೆ.

ಸಾಮಾನ್ಯವಾಗಿ ಮನೆಯ ಎದುರು ಮುಖ್ಯ ಜಗದಲ್ಲಿ ತುಳಸಿ ಗಿಡವನ್ನು ನೆಡಲಾಗುತ್ತದೆ. ಆದರೆ ವಸ್ತು ತಜ್ಞರ ಪ್ರಕಾರ ಮನೆಯಲ್ಲಿ ಅನವಶ್ಯಕ ಜಗಳ, ಹಣದ ಸಮಸ್ಯೆ ಎದುರಾಗುವುದು, ವಸ್ತು ದೋಷ ನಿವಾರಣೆಗೆ ಪ್ರತ್ಯೇಕ ದಿಕ್ಕುಗಳಿಗೆ ಅನುಗುಣವಾಗಿ ಈ ತುಳಸಿ ಗಿಡವನ್ನು ನೆಡುತ್ತಾರೆ. ಮನೆಯಲ್ಲಿ ಅನವಶ್ಯಕ ಜಗಳಗಳು ನಡೆಯುತ್ತಿದ್ದರೆ ಹಿರಿಯರು ತುಳಸಿ ಗಿಡವನ್ನು ಮನೆಯ ಅಡುಗೆ ಮನೆ ಹತ್ತಿರ ನೀಡುತ್ತಿದ್ದರು, ಮನೆಯಲ್ಲಿ ವಸ್ತು ದೋಷ ಇದ್ದಾರೆ ತುಳಸಿ ಗಿಡವನ್ನು ಆಗ್ನೇಯ ದಿಕ್ಕಿನಿಂದ ವಾಯುವ್ಯ ದಿಕ್ಕಿನವರೆಗೂ ನೆಡಬಹುದು. ಅದಲ್ಲದೆ ಹಣದ ಸಮಸ್ಯೆ ಇದ್ದಾರೆ ತುಳಸಿ ಗಿಡವನ್ನು ಈಶಾನ್ಯ ಮೂಲೆಯಲ್ಲಿ ನಾಡಬೇಕೆಂದು ನಮ್ಮ ಹಿರಿಯರು ಹೇಳುತ್ತಾರೆ.

ಇಂದಿನ ಕಾಲಘಟ್ಟದಲ್ಲಿ ಹಿಂದೂಗಳ ಮನೆಯಲ್ಲಿ ಮುಖ್ಯವಾಗಿ ನಗರ ದಲ್ಲಿ ಜನರು ತುಳಸಿ ಗಿಡದ ಮಹತ್ವವನ್ನು ಮರೆತು ಬಿಟ್ಟಿದ್ದಾರೆ. ಆದರೆ ಹಳ್ಳಿಗಳಲ್ಲಿ ಇನ್ನು ಈ ನಂಬಿಕೆ ಹಾಗು ಪದ್ದತಿಗೆ ವಿಶೇಷವಾಗಿ ಪ್ರಾಮುಖ್ಯತೆ ನೀಡುತ್ತಾರೆ. ದೀಪಾವಳಿ ಸಮಯದಲ್ಲಿ ನರಕ ಚತುರ್ದಶಿ ಹಬ್ಬದಂದು ತುಳಸಿ ಪೂಜೆ ಮಾಡಿ ಬಲಿಂದ್ರ ನನ್ನ ಕರೆಯುವುದು ದಕ್ಷಿಣ ಕನ್ನಡ ದಲ್ಲಿ ಪ್ರಾಚೀನ ಕಾಲದಿಂದ ನಡೆದು ಬರುತ್ತಿರುವ ಪದ್ಧತಿ. ಅದೇ ರೀತಿ ತುಳಸಿ ಪೂಜೆ ಕೂಡ ದೀಪಾವಳಿ ಆದ ನಂತರ ನಡೆಯುತ್ತದೆ. ಪ್ರತಿ ದಿನ ತುಳಸಿ ಕಟ್ಟೆಗೆ ಪೂಜೆ ಮಾಡಿ ಭಜನೆ ಮಾಡುವುದು ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಕಡೆ ನಾವು ನೋಡಬಹುದು.

Leave A Reply

Your email address will not be published.