ಫುಲ್ ಗರಂ ಆದ ಗಂಭೀರ್: ವಿರಾಟ್ ಕೊಹ್ಲಿ ಗೆ ಮೂರನೇ ಕ್ರಮಾಂಕ ಬೇಡವಂತೆ. ಮತ್ಯಾವ ಕ್ರಮಾಂಕದಲ್ಲಿ ಆಡಬೇಕಂತೆ ಗೊತ್ತೇ??

105

ಭಾರತ ತಂಡದ ಮಾಜಿ ಕ್ಯಾಪ್ಟನ್ ವಿರಾಟ್ ಕೋಹ್ಲಿ ಅವರು ಮೂರು ವರ್ಷಗಳಿಂದ ವೈಫಲ್ಯ ಅನುಭವಿಸುತ್ತಿದ್ದರು. ಇದರಿಂದಾಗಿ ಬಹಳಷ್ಟು ಟೀಕೆಗಳಿಗೂ ಒಳಗಾಗಿದ್ದರು. ಆದರೆ ಮೂರು ವರ್ಷಗಳ ಬಳಿಕ ಸತತ ಪರಿಶ್ರಮದ ನಂತರ ವಿರಾಟ್ ಕೋಹ್ಲಿ ಅವರು ಈಗ ಕ್ರಿಕೆಟ್ ನಲ್ಲಿ ಲಯ ಕಂಡುಕೊಂಡಿದ್ದು, ವಿರಾಟ್ ಕೋಹ್ಲಿ ಅವರು ಫಾರ್ಮ್ ಗೆ ಮರಳಿ ಬಂದಿದ್ದಾರೆ. ಏಷ್ಯಾಕಪ್ ಪಂದ್ಯದಲ್ಲಿ 1 ಶತಕ ಹಾಗೂ 2 ಅರ್ಧಶತಕ ಭಾರಿಸಿದ್ದಾರೆ ವಿರಾಟ್ ಕೋಹ್ಲಿ.

ಈ ಮೂಲಕ ವಿಶ್ವಕಪ್ ನಲ್ಲಿ ಸಹ ಒಳ್ಳೆಯ ಬ್ಯಾಟಿಂಗ್ ಪ್ರದರ್ಶನ ನೀಡುವ ಭರವಸೆ ಮೂಡಿಸಿದ್ದಾರೆ ವಿರಾಟ್. 1021 ದಿನಗಳ ನಂತರ ವಿರಾಟ್ ಕೋಹ್ಲಿ ಅವರ ಬ್ಯಾಟ್ ನಲ್ಲಿ ಸೆಂಚುರಿ ಬಂದ ಕಾರಣ, ಅಭಿಮಾನಿಗಳು ಹಾಗೂ ಭಾರತ ತಂಡ ಬಹಳ ಸಂತೋಷಪಟ್ಟಿತ್ತು. ವಿರಾಟ್ ಕೋಹ್ಲಿ ಅವರು ಟಿ20 ವಿಶ್ವಕಪ್ ಪಂದ್ಯಕ್ಕೂ ಆಯ್ಕೆಯಾಗಿದ್ದು, ವಿರಾಟ್ ಅವರು ಯಾವ ಕ್ರಮಾಂಕದಲ್ಲಿ ಆಡಬೇಕು ಎನ್ನುವ ವಿಚಾರ ಚರ್ಚೆಯಾಗುತ್ತಿದೆ. ಕೆಲವರು ವಿರಾಟ್ ಅವರನ್ನು ಆರಂಭಿಕ ಬ್ಯಾಟ್ಸ್ಮನ್ ಆಗಿ ಆಡಲಿ ಎಂದರೆ, ಇನ್ನು ಕೆಲವರು ಮೂರನೇ ಕ್ರಮಾಂಕದಲ್ಲಿ ಆಡಲಿ ಎನ್ನುತ್ತಿದ್ದಾರೆ.

ಇದೀಗ ಭಾರತ ತಂಡದ ಮಾಜಿ ಆಟಗಾರ ಹಾಗೂ ಸಂಸದ ಗೌತಮ್ ಗಂಭೀರ್ ಅವರು ವಿರಾಟ್ ಕೋಹ್ಲಿ ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ. ವಿರಾಟ್ ಕೋಹ್ಲಿ ಅವರನ್ನು ಆರಂಭಿಕನಾಗಿ ಕಣಕ್ಕೆ ಇಳಿಸಿ ತಲೆ ಇಲ್ಲದ ಕೆಲಸ ಮಾಡಬೇಕು, ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ರಾಹುಲ್ ಆಡಲಿ, ಅವರು 10 ಓವರ್ ಗಳ ವರೆಗೂ ಬ್ಯಾಟಿಂಗ್ ಮಾಡಿದರೆ 3ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಬರಲಿ. ಒಂದು ವೇಳೆ ಆರಂಭಿಕ ಆಟಗಾರರು ಬೇಗ ವಿಕೆಟ್ ಒಪ್ಪಿಸಿದರೆ, ವಿರಾಟ್ ಕೋಹ್ಲಿ ಅವರು 3ನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿಯಲಿ ಎಂದು ಹೇಳಿದ್ದಾರೆ ಗೌತಮ್ ಗಂಭೀರ್. ಈ ಹೇಳಿಕೆ ಈಗ ವೈರಲ್ ಆಗುತ್ತಿದೆ.

Leave A Reply

Your email address will not be published.