ಬಿಡುಗಡೆಯಾಯಿತು ದೇಶದ ಮೊದಲ ಹೈಡ್ರೋಜನ್ ವಾಹನ. ಒಂದು ಬಾರಿ ಚಾರ್ಜ್ ಮಾಡಿದರೆ 650 ಕಿಮೀ ಓಡುತ್ತದೆ?

831

ಪರಿಸರ ಮಾಲಿನ್ಯ ಇತ್ತೀಚಿನ ದಿನಗಳಲ್ಲಿ ದೊಡ್ಡ ಸವಾಲು.ಕೇವಲ ನಾಮ ದೇಶ ಅಲ್ಲದೇ ಇಡೀ ಪ್ರಪಂಚವೇ ಎದುರಿಸುತ್ತಿರುವ ಬಹು ದೊಡ್ಡ ಸಮಸ್ಯೆಗಳಲ್ಲಿ ಇದು ಕೂಡ ಒಂದು. ನಿಯಂತ್ರಣಕ್ಕೆ ಅದೆಷ್ಟೋ ಮಾರ್ಗಗಳನ್ನು ಕೈಗೆತ್ತಿಕೊಂಡಿದೆ. ಆದರೆ ಜನರು ತಮ್ಮ ಸಾಮಾಜಿಕ ಜವಾಬ್ದಾರಿ ಅರಿತು ನಾನು ಎನ್ನದೆ ನಾವು ಎಂದು ಬದುಕಲು ಶುರು ಮಾಡಿದರೆ ಮಾತ್ರ ಅದು ನಿಯಂತ್ರಿಸಲು ಸಾಧ್ಯ. ಸರ್ಕಾರ ಎಷ್ಟೋ ಕ್ರಮ ಕೈ ಗೊಂಡರು ನಾವು ಕೂಡ ಬದಲಾದಾಗ ಮಾತ್ರ ಇದು ನಿಯಂತ್ರಣ ಸಾಧ್ಯ. ಈಗ ಅಂತಹುದೇ ಒಂದು ಪ್ರಯತ್ನ ನಡೆದಿದೆ.

ಬಿಡುಗಡೆ ಆಗಿದೆ ಹೊಸ ಹೈಡ್ರೋಜನ್ ಕಾರು ಏನಿದರ ವಿಶೇಷತೆ ಬನ್ನಿ ತಿಳಿಯೋಣ. ಟೊಯೊಟಾ ಕಿರ್ಲೋಸ್ಕರ್ ಕಂಪನಿಗೆ ಸೇರಿದ ಈ ಕಾರನ್ನು ನಿನ್ನೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಬಿಡುಗಡೆ ಮಾಡಿದ್ದಾರೆ. ಇದು ಭಾರತದ ಮೊದಲ ಹೈಡ್ರೋಜನ್ ಆಧಾರಿತ ಎಲೆಕ್ಟ್ರಿಕ್ ವಾಹನ. ಟೊಯೊಟಾ ಮಿರೈ ಇದರ ಮಾಡೆಲ್. ಮಿರೈ ಎಂದರೆ ಭವಿಷ್ಯ ಎಂದರ್ಥ ಹೀಗೆ ಭವಿಷ್ಯದ ಕಾರು ಎಂದು ಇದನ್ನು ಕರೆಯಲಾಗುತ್ತದೆ.

ಹೈಡ್ರೋಜನ್ ನಿಂದಾ ಚಾಲಿತ ಆಗುವ ಈ FCEV ವಾಹನ ಕೇವಲ ನೀರನ್ನು ಮಾತ್ರ ಹೊರ ಸೂಸುತ್ತದೆ, ಇದು ೦ ಅನಿಲವನ್ನು ಬಿಡುಗಡೆ ಮಾಡುತ್ತದೆ. ಅಂದರೆ ಇದರಿಂದ ಪ್ರಕೃತಿಗೆ ಯಾವುದೇ ರೀತಿಯ ಹಾನಿ ಇಲ್ಲ. ಮತ್ತು ಇದನ್ನು ಹೈಡ್ರೋಜನ್ ಫ್ಯುಯೆಲ್ ಸೆಲ್ ಬ್ಯಾಟರಿ ಅಲ್ಲಿ ನಡೆಸಬಹುದು. ಒಮ್ಮೆಗೇ ಚಾರ್ಜ್ ಮಾಡಿದರೆ ಬರೋಬ್ಬರಿ 650km ಚಲಿಸುತ್ತದೆ. ಇದರ ಬೆಲೆ 7 ರಿಂದ 8ಲಕ್ಷದ ವರೆಗೆ ಇರುತ್ತದೆ ಎಂದು ಅಂದಾಜಿಸಲಾಗಿದೆ.

Leave A Reply

Your email address will not be published.