ಸದ್ದಿಲ್ಲದೆ ಮೋದಿ ಅವರು ಜಾರಿಗೆ ತಂದಿದ್ದಾರೆ ಏಕರೂಪದ ನಾಗರಿಕ ಕಾನೂನು ? ಏನಿದು ಹೊಸ ಬೆಳವಣಿಗೆ ಇಲ್ಲಿ ಓದಿರಿ.

1,662

ಏಕರೂಪದ ನಾಗರಿಕ ಕಾನೂನು ಎಂಬುದು ಇಡೀ ದೇಶದ ಜನರಿಗೆ ಒಂದೇ ರೀತಿಯ ಕಾನೂನು ಸ್ಥಾಪಿಸುತ್ತದೆ. ಇದರಲ್ಲಿ ಯಾವುದೇ ರೀತಿಯ ಧರ್ಮ , ಜಾತಿ, ಮತ, ಪಂಗಡಗಳು ಅಡ್ಡಿ ಬರುವುದಿಲ್ಲ. ಬದಲಾಗಿ ಭಾರತೀಯ ನಾಗರಿಕರಿಗೆ ಎಲ್ಲರಿಗೂ ಸಮಾನ ನ್ಯಾಯ ಒದಗಿಸುತ್ತದೆ. ಈಗ ಪ್ರಸ್ತುತ ಮುಸ್ಲಿಂ ರಿಗೆ ಅವರದ್ದೇ ಆದ ಷರಿಯಾ ಕಾನೂನು ಇದೆ. ಇದರ ಪ್ರಕಾರ ಮದುವೆ ವಯಸ್ಸು ವಿಚ್ಚೇದನಕ್ಕೆ ಅವರದ್ದೇ ಆದ ರೀತಿಗಳು ಇವೆ. ಇದೆ ರೀತಿ ಹಲವಾರು ಧರ್ಮಗಳಲ್ಲಿ ಅವರದ್ದೇ ಆದ ಕಾನೂನು ವ್ಯವಸ್ಥೆ ಇದೆ . ಇದು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತದೆ ಹಾಗೆಯೇ ಹೆಣ್ಣು ಮಕ್ಕಳ ಬದುಕಿನ ಹಕ್ಕನ್ನು ಕಸಿದು ಕೊಳ್ಳುತ್ತದೆ.

ಅದಕ್ಕಾಗಿಯೇ ಮೋದಿ ಅವರು ಏಕರೂಪದ ನಾಗರಿಕ ಕಾನೂನು ತಂದೆ ತರುತ್ತೇನೆ ಎಂದು ಹಿಂದಿನಿಂದಲೂ ಪಣ ತೊಟ್ಟಿದ್ದರು. ಹಾಗಾದರೆ ಈ ಏಕರೂಪದ ಕಾನೂನು ವ್ಯವಸ್ಥೆಯಲ್ಲಿ ಏನೇನು ಬರುತ್ತದೆ ? ನಿಮಗೆ ಗೊತ್ತಿಲ್ಲವಾದರೆ ಮುಂದಕ್ಕೆ ಓದಿರಿ. ಏಕರೂಪದ ನಾಗರಿಕ ಕಾನೂನಿನ ಮುಖ್ಯ ಅಂಶಗಳು ಎಂದರೆ: 1. ಮದುವೆಯ ವಯಸ್ಸು 2.ವಿಚ್ಚೇದನ ಪಡೆಯುವ ರೀತಿ ಮತ್ತು ನಿಯಮಗಳು 3.ಮರು ಮದುವೆಗೆ ಇರುವ ನಿಯಮಗಳು 4.ದತ್ತು ಪಡೆದು ಕೊಳ್ಳುವ ನಿಯಮಗಳು 5.ಆಸ್ತಿ ಹಕ್ಕುಗಳು.

ಈ 5 ಅಂಶಗಳನ್ನು ನೀವು ಗಮನಿಸಿದರೆ ನಿಮಗೆ ತಿಳಿಯಬಹುದು , ಯಾವ ರೀತಿಯಲ್ಲಿ ಮೋದಿ ಅವರು ಹಂತ ಹಂತ ವಾಗಿ ಈ ಕಾನೂನು ಜಾರಿಗೆ ತರಲು ಮುಂದಾಗಿದ್ದಾರೆ ಎಂದು. ಹೌದು ಸಮಾಜದಲ್ಲಿ ಇದ್ದ ಅನಿಷ್ಟ ಪದ್ಧತಿ ಎಂದೇ ಕರೆಯಲಾದ ಟ್ರಿಪಲ್ ತಲಾಕ್ ಅನ್ನು ಮೋದಿ ಅವರು ಈ ಹಿಂದೆಯೇ ಭಾರತದಲ್ಲಿ ನಿಷೇಧ ಮಾಡಿದ್ದರು. ಅದೆಷ್ಟೋ ಜನರ ವಿರೋಧ ಕಟ್ಟಿಕೊಂಡು ಹೆಣ್ಣು ಮಕ್ಕಳ ಹಿತ ರಕ್ಷಣೆಗಾಗಿ ಈ ಅನಿಷ್ಠ ಆಚರಣೆಯನ್ನು ಭಾರತದಾದ್ಯಂತ ನಿಷೇಧ ಮಾಡಲಾಗಿದೆ. ಅದರ ಹೊರತಾಗಿಯೂ ಹಾಗೇನಾದರೂ ಆದರೆ ಅದಕ್ಕೆ ಮಹಿಳೆ ಪರವಾಗಿ ಹಲವಾರು ಕಾನೂನು ರೂಪಿಸಿದ್ದಾರೆ.

ಇದೀಗ ಅದಕ್ಕೆ ಪುಷ್ಟಿ ಎಂಬಂತೆ ಮತ್ತೊಂದು ಬದಲಾವಣೆ ನಡೆದಿದೆ. ಹೌದು ಮೊನ್ನೆ ತಾನೆ ಘೋಷಣೆ ಮಾಡಿದ ಮದುವೆಯ ವಯಸ್ಸು. ಹೌದು ಇನ್ನು ಮುಂದಕ್ಕೆ ಮದುವೆ ಆಗುವ ಹೆಣ್ಣು ಮಕ್ಕಳು ಕನಿಷ್ಠ ಎಂದರೂ 21 ವರ್ಷ ವಯಸ್ಸು ದಾಟಿರಬೇಕು. ಇಲ್ಲವಾದರೆ ಅದು ಬಾಲ್ಯ ವಿವಾಹ ಎಂದು ಗಣನೆಗೆ ತೆಗೆದುಕೊಂಡು ಕಾನೂನಾತ್ಮಕ ವಿಚಾರಣೆ ಎದುರಿಸಬೇಕಾಗುತ್ತದೆ. ಇಡೀ ಭಾರತ ದೇಶಕ್ಕೆ ಈ ಕಾನೂನು ಅನ್ವಯವಾಗುತ್ತದೆ.

ಅದೇನೇ ಇರಲಿ ಸಾಮಾಜಿಕ ಪಿಡುಗು ದೂರ ಮಾಡಿ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಪಣ ತೊಟ್ಟಿರುವ ಮೋದಿ ಅವರಿಗೆ ನಮ್ಮ ಬೆಂಬಲ ಸದಾ ಇದ್ದೇ ಇರುತ್ತದೆ. ಆದಷ್ಟು ಬೇಗ ಉಳಿದ ಎಲ್ಲಾ ಕಾನೂನುಗಳು ಜಾರಿ ಆಗಲಿ ಏಕರೂಪದ ನಾಗರಿಕ ಸಂಹಿತೆ ಜಾರಿಗೆ ಬರಲಿ ಎಂದು ಆಶಿಸೋಣ.

Leave A Reply

Your email address will not be published.