3 ಟ್ರಿಪಲ್ ಸೆಂಚುರಿ ಬಾರಿಸಿದ್ದ ಸೆಕ್ಯೂರಿಟಿ ಗಾರ್ಡ್ ಮಗ ಈಗ ಕೋಟಿಗಟ್ಟಲೆ ಬೆಲೆ ಬಾಳುವ ಶ್ರೇಷ್ಠ ಕ್ರಿಕೆಟಿಗ ಯಾರಿವರು?

616

ಜೀವನವೇ ಹಾಗೆ ನೋಡಿ ಕಷ್ಟ ಎಂಬುದು ಬಂದರೆ ಮೇಲಿಂದ ಮೇಲೆ ಬರುತ್ತದೆ. ಆದರೆ ನಮ್ಮ ಧೃಡ ನಿರ್ಧಾರಗಳು ನಮ್ಮನ್ನು ಎಂದು ಸೋಲಲು ಬಿಡುವುದಿಲ್ಲ ಎಂಬುದಕ್ಕೆ ಈ ನೈಜ ಉದಾಹರಣೆಯೇ ಸಾಕ್ಷಿ. ಇವರು ಅತೀ ಬಡತನದಲ್ಲಿ ಬೆಳೆದು ಬಂದ ಕ್ರಿಕೆಟಿಗ ತಂದೆ ಸೆಕ್ಯೂರಿಟಿ ಗಾರ್ಡ್ ತಾಯಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಮಗನನ್ನು ಸೇನೆಗೆ ಸೇರಿಸಬೇಕು ಎಂಬುದು ತಂದೆ ಇಚ್ಚೆ ಆದರೆ ಮಗ ಮಾತ್ರ ಕ್ರಿಕೆಟ್ ಹಿಂದೆ ಬಿದ್ದಿದ್ದ.

ತಾಯಿ ಬೆನ್ನೆಲುಬಾಗಿ ನಿಂತಳು ಆದರೆ ದೇವರ ಆಟವೇ ಬೇರೆ ಇತ್ತು ಇದ್ದ ಒಬ್ಬಾಕೆ ತಾಯಿಯನ್ನು ಕಸಿದು ಕೊಂಡ ಆದರೆ ತಮ್ಮನ ಆ ಛಲವನ್ನು ಕಂಡ ಅಕ್ಕ ಆತನ ಕನಸು ಕಮರಲು ಬಿಡಲಿಲ್ಲ. ಆಕೆ ಆತನನ್ನು ಕ್ರಿಕೆಟ್ ಆಡುವಂತೆ ಉತ್ತೇಜಿಸಿದಳು. ಅಂಡರ್ 19 ವರ್ಲ್ಡ್ ಕಪ್ ನಿಂದ ಆರಂಭವಾದ ಅವರ ಕ್ರಿಕೆಟ್ ಕರಿಯಿರ್ ಈಗ ಶ್ರೇಷ್ಠ ಮಟ್ಟದಲ್ಲಿ ಇದೆ. ಹೌದು ರಣಜಿ ಇತಿಹಾಸದಲ್ಲಿ ಒಂದೇ ಋತುವಿನಲ್ಲಿ 3 ಟ್ರಿಪಲ್ ಸೆಂಚುರಿ ಬಾರಿಸಿದ ಏಕೈಕ ಬ್ಯಾಟ್ಸ್ಮನ್ ಇವರೊಬ್ಬರೇ.

ಈಗ ಎಲ್ಲರ ಕುತೂಹಲ ಹೆಚ್ಚಾಗಿರುವುದು ಖಂಡಿತ ಅವರು ಮತ್ಯಾರು ಅಲ್ಲ ಭಾರತ ತಂಡದ ರಾಕ್ ಸ್ಟಾರ್ ಆಟಗಾರ ರವೀಂದ್ರ ಜಡೇಜಾ. ಹೌದು ಅಂದು ಕಷ್ಟದಿಂದ ಆಡಿ ತಮ್ಮ ಪ್ರತಿಭೆಯಿಂದ ಮೇಲಕ್ಕೆ ಬಂದ ಈ ಆಟಗಾರ ಇಂದು ಕೋಟ್ಯಂತರ ಬೆಲೆ ಬಾಳುವ ಕ್ರಿಕೆಟ್ ಆಸ್ತಿ. ಜಡೇಜಾ ಎಂದರೆ ನೆನ್ಪಾಗುವುದು ಅವರ ತೀವ್ರ ಗತಿಯ ವೇಗ , ಕ್ಷೇತ್ರ ರಕ್ಷಣೆ ಇಂತಹ ಮ್ಯಾಚ್ ಅನ್ನು ಕೂಡ ತಮ್ಮ ತಂಡದತ್ತ ತಿರುಗಿಸುವ ಕೌಶಲ್ಯ ಹೊಂದಿರುವ ಆಟಗಾರ ಇವರು.

ಹಿರಿಯರು ಹೇಳಿದ ಮಾತು ಸುಳ್ಳಲ್ಲ ಜೀವನದಲ್ಲಿ ಕಷ್ಟಗಳು ಬಂದೆ ಬರುತ್ತದೆ ಅದಕ್ಕೆ ನಮ್ಮ ಕನಸನ್ನು ಅರ್ಧಕ್ಕೆ ಬಿಟ್ಟರೆ ಅದು ನಮ್ಮ ಮುಟ್ಟಾಳತನ ಬದಲಾಗಿ ಬಂದ ಕಷ್ಟಗಳ ಎದುರಿಸಿ ಗುರಿಯೆಡೆಗೆ ನಡೆದರೆ ದೇಶವನ್ನೇ ಹೆಮ್ಮೆ ಪಡಿಸುವ ಜಡೇಜಾ ರಂತಹ ವ್ಯಕ್ತಿಗಳಾಗಿ ಮೂಡಿ ಬರಬಹುದು.

Leave A Reply

Your email address will not be published.