40 ಆನೆಗಳ ಒಟ್ಟು ತೂಕಕ್ಕೆ ಸಮನಾಗಿರುವ ಈ ಒಂದು ಅಳಿವಿನಂಚಿನಲ್ಲಿರುವ ಜೀವಿ ಯಾವುದು?

1,475

ಗಾತ್ರದಲ್ಲಿ ಅತ್ಯಂತ ದೊಡ್ಡ ಜೀವಿ ಎಂದಾಗ ಮನಸಿಗೆ ಬರುವುದು ಆನೆ. ದೈತ್ಯ ಗಾತ್ರದ ಈ ಪ್ರಾಣಿ ನೋಡಲೇ ಭಯ ಹುಟ್ಟಿಸುತ್ತದೆ. ಆನೆ ಎಂದಾಕ್ಷಣ ಎಲ್ಲರಿಗೂ ಮೊದಲಿಗೆ ನೆನಪಿಗೆ ಬರುವುದೇ ಅದರ ದೊಡ್ಡ ದೇಹ ರಚನೆ, ಅತ್ಯಂತ ಭಾರವಾದ ಪ್ರಾಣಿ., ಅತ್ಯಂತ ಎತ್ತರದ ಪ್ರಾಣಿ ಎಂಬುದು, ಆದರೆ ನಾವು ಇಲ್ಲಿ ಇಂದು ನೋಡಲು ಹೊರಟಿರುವ ಈ ಜೀವಿಯ ತೂಕ 40 ಆನೆಗಳ ಒಟ್ಟು ತೂಕಕ್ಕೆ ಸಮನಾಗಿದೆ. ಹೌದು ಇದು ಆಶ್ಚರ್ಯ ಎನಿಸಿದರು ಸತ್ಯ ಸಂಗತಿ. ಹಾಗಾದರೆ ಯಾವುದು ಆ ಜೀವಿ ಬನ್ನಿ ತಿಳಿಯೋಣ.

ಆ ಜೀವಿ ಮತ್ಯಾವುದೋ ಅಲ್ಲ ಅದು ತಿಮಿಂಗಿಲ (ವೇಲ್) ಹೌದು. ಪ್ರಸ್ತುತ ಇರುವ ಜೀವಿ ರವಹನೆಯಲ್ಲಿ ಅತ್ಯಂತ ದೊಡ್ಡ ಜೀವಿ ಇದು. ಇದು 40 ಆನೆಗಳ ಒಟ್ಟು ತೂಕಕ್ಕೆ ಸಮ ಹಾಗೆ 30 ಮೀಟರ್ ವರೆಗೂ ಉದ್ದ ಇದ್ದು ಈಗಾಗಲೇ ಅಳಿದಿರುವ ಡೈನಾಸರ್ ಗಿಂತಲೂ ಉದ್ದ ಇದೆ. ಹೌದು ಆಳ ಸಮುದ್ರದಲ್ಲಿ ಬದುಕುವ ಈ ಜೀವಿ ಈಗ ಅಳಿವಿನ ಅಂಚಿನಲ್ಲಿ ಇದೆ. ಇದರ ಅದೆಷ್ಟೋ ಉಪಜಾತಿ ಜೀವಿಗಳು ಇದೀಗಾಗಲೇ ಅಳಿದು ಹೋಗಿದೆ. ಹಿಂದಿನ ದಾಖಲೆ ನೋಡಿದರೆ ಅಂಟಾರ್ಟಿಕಾ ಸಮುದ್ರ ದಾಲ್ಲಿ ಈ ಹಿಂದೆ 2,25,000 ಬ್ಲೂ ವೇಲ್ ಗಳಿದ್ದವು ಆದರೆ ಈಗ ಅದರ ಸಂಖ್ಯೆ 3000 ಕ್ಕಿಂತ ಕಡಿಮೆ ಇದೆ ಹಾಗಾದ್ರೆ ನೀವೇ ಅಂದಾಜಿಸಿ ಯಾವ ರೀತಿಯಲ್ಲಿ ಅಳಿಯುತ್ತದೆ ಇದರ ಸಂತತಿ ಎಂದು. ತಜ್ಞರ ಪ್ರಕಾರ ಇನ್ನು ಮುಂದೆ ಬರುವ 25 ವರ್ಷಗಳಲ್ಲಿ ಇದರ ಕೆಲವೊಂದು ಜಾತಿಯ ಮೀನುಗಳು ನಶಿಸಿ ಹೋಗಬಹುದು ಎಂದು.

ಈ ವೇಲ್ ಗಳಲ್ಲಿ ಎರಡು ರೀತಿ ಇದೆ ಒಂದು ಜಾತಿಯ ಮೀನುಗಳಲ್ಲಿ ಹಲ್ಲುಗಳ ರಚನೆ ಇದೆ ಇವುಗಳನ್ನು “toothed ವೇಲ್ಸ್” ಎಂದು ಕರೆಯುತ್ತಾರೆ. ಇದರ ಹಲ್ಲುಗಳು ಅತೀ ಸೂಕ್ಷ್ಮ ವಾಗಿರುತ್ತದೆ. ಹಾಗೆಯೇ ಮತ್ತೊಂದು ಜಾತಿಯ ವೇಲ್ ಗಳನ್ನು “ಬಲಿನ್ ವೇಲ್ಸ್” ಎಂದು ಕರೆಯುತ್ತಾರೆ ಇವುಗಳಲ್ಲಿ ಬ್ರಷ್ ಮಾದರಿಯ ರಚನೆಗಳು ಇವೆ. ಈ ಜಾತಿಯ ತಿಮಿಂಗಿಲಗಳು ಹಲ್ಲನ್ನು ಹೊಂದಿರುವುದಿಲ್ಲ. ಹೀಗೆ ಈ ವೇಲ್ ಗಳ ಸಂತತಿ ದಿನೇ ದಿನೇ ಕಡಿಮೆ ಆಗುತ್ತಿದು ಮನುಷ್ಯನ ದುರಾಸೆಯಿಂದ ಎಲ್ಲವನ್ನೂ ನಾಶ ಮಾಡುತ್ತಿದ್ದಾನೆ. ಅವುಗಳ ಪ್ರಾಕೃತಿಕ ಜೀವನವನ್ನು ತನ್ನ ಸ್ವಾರ್ಥ ಕಾಗಿ ಬಳಸುತ್ತಿರುವನು. ಇದು ಮುಂದೆ ಯಾವ ವಿನಾಶಕ್ಕೆ ಕಾರಣ ಆಗುತ್ತದೆ ಎಂಬುದು ಕಾಲವೇ ಹೇಳಬೇಕು.

Leave A Reply

Your email address will not be published.