Cricket News: ವಿಶ್ವಕಪ್ ಗೆ ಸ್ಥಾನ ಪಡೆದಿದ್ದ ಸಂಜು ಸ್ಯಾಮ್ಸನ್ ರನ್ನ ಇಂದು ಎಲ್ಲ ಪಂದ್ಯಗಳಿಂದ ಹೊರಗಿಡಲಾಗಿದೆ. ಆಯ್ಕೆಗಾರರ ವಿರುದ್ದ ಕಿಡಿ ಕಾರಿದ ಆಶೀಶ್ ನೆಹ್ರಾ.

130

ನ್ಯೂಜಿಲ್ಯಾಂಡ್ (NewZeland) ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ 300 ರನ್ ಗಳಿಸಿದರು ಕೂಡ ಸೋಲನ್ನು ಅನುಭವಿಸಿದ ಭಾರತ ತಂಡಕ್ಕೆ ಭಾರತದಾದ್ಯಂತ ಟೀಕೆ ಗಳ ಸುರಿಮಳೆ ಬಂದಿದೆ. ಇದೆ ಕಾರಣಕ್ಕೆ ನಾಯಕ ಶಿಖರ್ ಧವನ್ (Shikar Dhavan) ಹಾಗು coach ವಿವಿಎಸ್ ಲಕ್ಷ್ಮಣ್ (VVS Laxman) ಎರಡು ಬದಲಾವಣೆ ಗಳೊಂದಿಗೆ ತಂಡವನ್ನು ರಚನೆ ಮಾಡಿದ್ದರು. ಸಂಜು ಸ್ಯಾಮ್ಸನ್ ಹಾಗು ಶಾರ್ದುಲ್ ಠಾಕೂರ್ ಅವರನ್ನು ಕೈಬಿಟ್ಟು, ದೀಪಕ್ ಹುಡ (Deepak Hooda) ಹಾಗು ದೀಪಕ್ ಚಾಹರ್ (Deepak Chahar) ಅವರನ್ನು ಕಣಕ್ಕಿಳಿಸಲಾಯಿತು.

ಈ ಬದಲಾವಣೆ ಬಗ್ಗೆ ಭಾರತದ ಮಾಜಿ ಬೌಲರ್ ಆಶೀಶ್ ನೆಹ್ರಾ (Ashish Nehra) ಕೆಂಡ ಮಂಡಲವಾಗಿದ್ದರೆ. ಇದರ ಹಿಂದಿನ ಲಾಜಿಕ್ ಏನು ಅಂತ ಪ್ರಶ್ನೆ ಮಾಡಿದ್ದಾರೆ. ಮೊದಲ ಪಂದ್ಯದಲ್ಲಿ 307 ರನ್ ಗಳನ್ನೂ ಮಾಡಿಯೂ ಕೂಡ ನ್ಯೂಜಿಲ್ಯಾಂಡ್ ಗೆದ್ದಿದ್ದಾರೆ. ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ (Sanju Samson) ಬಹು ಮುಖ್ಯ 36 ರನ್ ಗಳಿಸಿದ್ದಲ್ಲದೆ, ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಶ್ರೇಯಸ್ ಅಯ್ಯರ್ (Shreys Iyer) ಗೆ ಸಾಥ್ ನೀಡಿದ್ದರು. ಈ ಪಂದ್ಯದಲ್ಲಿ ಭಾರತ 5 ಬೌಲರ್ ಗಳ ತಂಡ ರಚನೆ ಮಾಡಿತ್ತು.

PC-Hindustan times

ಇದರ ಬಗ್ಗೆ ಆಶೀಶ್ ನೆಹ್ರಾ (Ashish Nehra) ಪ್ರೈಮ್ ವಿಡಿಯೋ (Amazon Prime Video) ದಲ್ಲಿ ಸಂದರ್ಶನ ನೀಡುತ್ತಾ ಈ ಎರಡನೇ ಪಂದ್ಯದಲ್ಲಿ ಆಯ್ಕೆ ಯಾವ ಲಾಜಿಕ್ ಮೇಲೆ ಮಾಡಿದ್ದಾರೆ ಎನ್ನುವ ಬಗ್ಗೆ ನನಗೆ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ. ಶಾರ್ದುಲ್ ಠಾಕೂರ್ (Shardul Thakur) ಬದಲು ದೀಪಕ್ ಚಾಹರ್ (Deepak Chahar) ಉತ್ತಮ ಬೌಲರ್, ಅವರನ್ನು ಬದಲಿಸಿದ್ದು ಸರಿಯಾಗಿಯೇ ಇದೆ. ಆದರೆ ಕೇವಲ ಒಂದು ಪಂದ್ಯ ಆಡಿಸಿ ಸಂಜು ಸ್ಯಾಮ್ಸನ್ (Sanju Samson) ಅವರನ್ನು ಕೈ ಬಿಟ್ಟಿದ್ದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು ಹೇಳುತ್ತಾ, ” ದೀಪಕ್ ಹುಡ ರ ಬೌಲಿಂಗ್ ಉತ್ತಮವಾಗಿದೆ ಎಂದು ಅವರನ್ನು ಆಯ್ಕೆ ಮಾಡಲಾಗಿಲ್ಲ. ಇವರ ಬದಲು ವಾಷಿಂಗ್ ಟಾನ್ ಸುಂದರ್ ಕೂಡ ಉತ್ತಮ ಎಲ್ಲ ರೌಂಡರ್, ಟಿ-20 ಪಂದ್ಯಗಳಲ್ಲಿ ಇವರು ವಿಕೆಟ್ ಗಳನ್ನೂ ಕಿತ್ತಿದ್ದಾರೆ. ಬ್ಯಾಟಿಂಗ್ ಕೂಡ ಉತ್ತಮವಾಗಿ ಮಾಡಿದ್ದಾರೆ. ಇವರು 6 ನೇ ಬೌಲಿಂಗ್ ಒಪ್ಶನ್ ಆಗಿರಬೇಕಿತ್ತು. ಸಂಜು ಸ್ಯಾಮ್ಸನ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದವರಾಗಿದ್ದರು. ಇವಾಗ ಅವರನ್ನು ಯಾವ ತಂಡದಲ್ಲಿ ಕೂಡ ಆಡಿಸುತ್ತಿಲ್ಲ. ಇವರಿಗೆ ಅವಕಾಶವೇ ಸಿಗುತ್ತಿಲ್ಲ ಎಂದು ಆಶೀಶ್ ನೆಹ್ರಾ ಹೇಳಿದ್ದಾರೆ.

Leave A Reply

Your email address will not be published.