Ayodhya Rama Mandir: ನರೇಂದ್ರ ಮೋದಿ ಇಲ್ಲದೆ ಇರುತ್ತಿದ್ದರೆ ರಾಮ ಮಂದಿರ ಆಗುತ್ತಿರಲಿಲ್ಲ- ಕಾಂಗ್ರೆಸ್ ನಾಯಕ.

223

ಹಿಂದೂಗಳ ಬಹು ವರ್ಷಗಳ ಕನಸಾಗಿದ್ದ ರಾಮ ಮಂದಿರ ( Rama Mandir) ಅಯೋದ್ಯೆಯಲ್ಲಿ (Ayodhya) ಕೊನೆಗೂ ಸಾಕಾರಗೊಳ್ಳುತ್ತಿದೆ. ನಾಳೆ ಅಂದರೆ ಜನವರಿ ೨೪,೨೦೨೨ ರಂದು ಇಡೀ ವಿಶ್ವವೇ ತಿರುಗಿ ನೋಡುವಂತೆ ಭವ್ಯವಾಗಿ ಪ್ರಭು ಶ್ರೀ ರಾಮ ( Shree Rama) ನ ಪ್ರಾಣ ಪ್ರತಿಷ್ಠಾಪನೆ (Prana Pratishtha) ಗೊಳ್ಳಲಿದೆ. ಇದಕ್ಕಾಗಿ ಇಡೀ ದೇಶ ಅಲ್ಲದೆ ವಿಶ್ವದ ವಿವಿಧ ಕಡೆ ನೆಲೆ ನಿಂತಿರುವ ಹಿಂದೂ ಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ.

ಅಯೋದ್ಯೆ ರಾಮ ಮಂದಿರ ಕ್ಕಾಗಿ (Ayodhya Rama Mandir) ಹಿಂದೆ ಅಂದರೆ ೫೦೦ ವರ್ಷಗಳಿಂದ ಸಂಘರ್ಷ ನಡೆದು ಕೊಂಡು ಬರುತ್ತಿದೆ. ಅದಕ್ಕೆ ಅದೆಷ್ಟೋ ಹಿಂದೂಗಳು ಸಿಕ್ಕರೂ ತಮ್ಮ ಪ್ರಾಣ ನೀಡಿದ್ದಾರೆ. ಕೊನೆಗೂ ಈ ಬಲಿದಾನಕ್ಕೆ ಒಂದು ಬೆಲೆ ನಾಳೆ ಸಿಗುತ್ತಿದೆ. ಈ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೆ ದೇಶದ ಜನರು ಉತ್ಸಾಹದಲ್ಲಿದ್ದಾರೆ, ಆದರೆ ಕಾಂಗ್ರೆಸ್ (Congress) ಹಾಗು ಎಡಪಂತೀಯ ಪಕ್ಷಗಳು ಒಟ್ಟಾರೆ ಹೇಳಬೇಕೆಂದರೆ indi ಒಕ್ಕೂಟದ ಅನೇಕ ಪಕ್ಷಗಳು ಈ ಪ್ರಾಣ ಪ್ರತಿಷ್ಠಾಪನೆಗೆ (Prana Pratishtha) ಬಹಿಷ್ಕಾರ ಹಾಕಿದೆ.

ಇದೀಗ ಈ indi ಒಕ್ಕೂಟದಲ್ಲೇ ಅದರಲ್ಲೂ ಕಾಂಗ್ರೆಸ್ ನಲ್ಲೆ ಅಪಸ್ವರ ಎದ್ದಿದ್ದು ಅನೇಕರು ಕಾಂಗ್ರೆಸ್ (Congress) ನಿರ್ಣಯದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಲ್ಲದೆ ಅನೇಕ ಕಾಂಗ್ರೆಸ್ ನಾಯಕರು ರಾಜಕೀಯ ಬಿಟ್ಟು ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಗೆ (Rama Mandir Prana Pratishtha) ಹೋರಾಡಿದ್ದಾರೆ. ಇದೀಗ ಕಾಂಗ್ರೆಸ್ ನ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಮ್ ಅವರು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಇಲ್ಲದೆ ಇರುತ್ತಿದ್ದರೆ, ಈ ರಾಮ ಮಂದಿರದ ಕನಸು ಇಂದಿಗೂ ನನಸಾಗುತ್ತಿರಲಿಲ್ಲ ಎಂದು ಷಾಕಿಂಗ್ ಹೇಳಿಕೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್ ಪುರಾತತ್ವ ಸಾಕ್ಷಿ ಹಾಗು ಇನ್ನಿತರ ಆಧಾರ ದ ಮೇಲೆ ರಾಮ ಜನ್ಮಭೂಮಿ ಯಲ್ಲಿ ರಾಮ ಮಂದಿರ ನಿರ್ಮಿಸಲು ಒಂದು ಐತಿಹಾಸಿಕ ನಿರ್ಣಯ ಕೊಟ್ಟಿತ್ತು. ಹಾಗೇನೇ ಮೋದಿ ಇಲ್ಲದೆ ಇರುತ್ತಿದ್ದರೆ ರಾಮ ಮಂದಿರ ಇಂದಿಗೂ ನಿರ್ಮಾಣ ಆಗುತ್ತಿರಲಿಲ್ಲ, ಮಂದಿರ ನಿರ್ಮಾಣ ಹಾಗು ರಾಮ ನ ಪ್ರಾಣ ಪ್ರತಿಷ್ಠಾಪನೆ ಎಲ್ಲ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ ಗೆ (Prime Minister Narendra Modi) ಸಲ್ಲಬೇಕು ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

Leave A Reply

Your email address will not be published.