Loan ತಗೊಂಡು ಮನೆ ಮಾಡುವುದು ಲಾಭವೋ ಅಥವಾ ಬಾಡಿಗೆ ಮನೆಯಲ್ಲಿ ಇರುವುದು ಉತ್ತಮವೋ? ನಿಮಗೆ ಯಾವುದು ಲಾಭದಾಯಕ?

277

Loan : ನಮ್ಮದೇ ಸ್ವಂತ ಮನೆ ಕಟ್ಟಬೇಕು, ಅದರಲ್ಲಿ ವಾಸಿಸಬೇಕು ಎನ್ನುವ ಆಸೆ ಪ್ರತಿಯೊಬ್ಬ ಭಾರತೀಯನಲ್ಲಿ ಇದ್ದೆ ಇರುತ್ತದೆ. ಬಡವನಿಂದ ಹಿಡಿದು ಮಾಧ್ಯಮ ವರ್ಗದ ಜನರು ಕೂಡ ತಮ್ಮ ಸಣ್ಣ ಸಣ್ಣ ಆಸೆಯನ್ನು ಕಡೆಗಣಿಸಿ ಮನೆ ಕಟ್ಟಿಸಲು ಹಣ ಕುಡಿ ಇಡುತ್ತಾನೆ. ಈ ಮೆಟ್ರೋ ನಗರಗಳಲ್ಲಿ ಅಂದರೆ ಬೆಂಗಳೂರು ನಂತಹ ಸ್ಥಳಗಳಲ್ಲಿ ಜಾಗ ಖರೀದಿ ಮಾಡುವುದು ದಿನದಿಂದ ದಿನಕ್ಕೆ ದುಬಾರಿ ಆಗುತ್ತಾ ಹೋಗುತ್ತಿದೆ. 2 ರೂಮ್ ಇರುವ ಮನೆ ಕೂಡ ಇಂದು ಖರೀದಿ ಮಾಡುವುದು ಸುಲಭವಿಲ್ಲ. ಇದಕ್ಕೆ ಕಡಿಮೆ ಅಂದರು 50 ಲಕ್ಷ ಹಣ ಬೇಕೇ ಬೇಕು. ಇದೆ ಕಾರಣಕ್ಕೆ ಅನೇಕ ಸಮೀಕ್ಷೆಗಳ ಪ್ರಕಾರ ಮೆಟ್ರೋ ನಗರಗಳಲ್ಲಿ ಮನೆ ಖರೀದಿ ಮಾಡುವುದಕ್ಕಿಂತ ಕೇವಲ ಬಾಡಿಗೆ ಮನೆಯಲ್ಲಿ ವಾಸಿಸುವುದೇ ಲಾಭದಾಯಕವಾಗಿದೆ.

ಮನೆ ಸ್ವಂತ ಇರುವುದು, ಕಟ್ಟುವುದು ಭಾರತದಲ್ಲಿ ಒಂದು ಭಾವನಾತ್ಮಕ ವಿಷಯವಾಗಿದೆ. ತಮ್ಮ ಮನೆಯವರು ಸುರಕ್ಷಿತವಾಗಿ ಒಂದು ಸೂರಿನಡಿಯಲ್ಲಿ ಇರಬೇಕೆಂದು ಪ್ರತಿಯೊಬ್ಬ ಬಯಸುತ್ತಾನೆ. ಆದರೆ ಭಾವನೆ ಬಿಟ್ಟು ಬಾಡಿಗೆ ಮನೆಯಲ್ಲಿ ಇರುವುದು ನಿಮಗೆ ಹೆಚ್ಚು ಲಾಭದಾಯಕವಾಗಿದೆ. ನಿಮಗೆ ಇದು ನಂಬಲು ಅಸಾದ್ಯವಾಗುತ್ತಿದೆ. ಆದರೆ ಅದರ ಬಗ್ಗೆ ಸಿಂಪಲ್ ಆಗಿ ಒಂದು ಲೆಕ್ಕಾಚಾರ ನಿಮಗೆ ನೀಡಲಿದ್ದೇವೆ.

ನೀವು ಬೆಂಗಳೂರು ಅಲ್ಲಿ ಒಂದು ಮನೆ ಖರೀದಿ ಮಾಡಬೇಕೆಂದು ನಿಶ್ಚಯ ಮಾಡಿದ್ದೀರಿ. ಎರಡು BHK ಮನೆ ಗೆ ಕಡಿಮೆ ಅಂದರು 50 ಲಕ್ಷ ಖರ್ಚು ಆಗುತ್ತದೆ ಎಂದಿಟ್ಟುಕೊಳ್ಳೋಣ. ಒಬ್ಬ ಮಧ್ಯಮವರ್ಗದ ವ್ಯಕ್ತಿ ಕಷ್ಟದಿಂದ 10 ರಿಂದ 12 ಪ್ರತಿಶತ ಅಂದರೆ 5 ರಿಂದ 7 ಲಕ್ಷದವರೆಗೆ ಡೌನ್ ಪೇಮೆಂಟ್ ನೀಡಬಲ್ಲ. ಒಂದು ವೇಳೆ ಆತ 20 ಪ್ರತಿಶತ ಅಂದರೆ 10 ಲಕ್ಷ ಡೌನ್ ಪೇಮೆಂಟ್ ನೀಡುತ್ತಾನೆ ಅಂದರೆ ಅವನು ಉಳಿದ 40 ಲಕ್ಷ ಸಾಲ ಮಾಡಲೇಬೇಕಾಗುತ್ತದೆ. ಹಾಗೇನೇ ಇದರ ಮೇಲೆ ಸ್ಟ್ಯಾಂಪ್ ಡ್ಯೂಟಿ, ರಿಜಿಸ್ಟ್ರೇಷನ್ ಚಾರ್ಜ್, ಬ್ರೋಕರೇಜ ಎಲ್ಲ ಸೇರಿ 5 ಲಕ್ಷದವರೆಗೆ ಹೆಚ್ಚಿನ ಖರ್ಚು ಬರುವುದಂತೂ ಖಂಡಿತ.

ಅದಕ್ಕಿಂತ ಹೆಚ್ಚಿನವರು ಕೆಲಸಕ್ಕಾಗಿ ಬೆಂಗಳೂರು ನಂತಹ ನಗರಕ್ಕೆ ಹೋಗುವುದರಿಂದ ಅಲ್ಲಿ ಬಾಡಿಗೆ ಮನೆಯಲ್ಲಿ ತಿಂಗಳಿಗೆ 10 ಸಾವಿರ ಕೊಟ್ಟು ಇರುವುದು ಉತ್ತಮ. ಸಾಲ ಮಾಡಿ ತಿಂಗಳಿಗೆ 25 ಸಾವಿರ EMI ಕಟ್ಟುವುದಕ್ಕಿಂತ ತಿಂಗಳಿಗೆ 10 ಸಾವಿರ ನೀಡುವ ಬಾಡಿಗೆ ಮನೆಯಲ್ಲಿದ್ದು, ಉಳಿದ 15 ಸಾವಿರ ಹಣ ಉಳಿತಾಯ ಮಾಡಿ ಊರಲ್ಲಿ ಕಡಿಮೆ ಖರ್ಚಿನಲ್ಲಿ ಉತ್ತಮ ಮನೆ ನಿರ್ಮಾಣ ಮಾಡಬಹುದು ಅಥವಾ ಅದೇ ಉಳಿತಾಯದ ಹಣ ಬೇರೆ ಯಾವುದಕ್ಕಾದರೂ ಉಪಯೋಗ ಮಾಡಬಹುದು.

Leave A Reply

Your email address will not be published.