Knowledge: ಪ್ಲಾಸ್ಟಿಕ್ ಚೇರ್ ಗಳಲ್ಲಿ ಸಣ್ಣ ರಂದ್ರಗಳಿರುವುದನ್ನು ನೀವು ಗಮನಿಸಿರುತ್ತೀರ. ಇದನ್ನೇಕೆ ಮಾಡುತ್ತಾರೆ? ಇದರ ಹಿಂದಿನ ಕಾರಣಗಳೇನು?

219

ಜಗತ್ತಿನಲ್ಲಿ ಅನೇಕ ವಸ್ತುಗಳಿವೆ, ಇವುಗಳು ನಮ್ಮ ದೈನಂದಿನ ಜೀವನದಲ್ಲಿ ಬಹಳ ಬಳಕೆಗೆ ಬರುತ್ತವೆ. ಇಂತಹ ವಸ್ತುಗಳಲ್ಲಿ ಚೇರ್ ಅಥವಾ ಕುರ್ಚಿಗಳು ಕೂಡ ಒಂದು. ಇವುಗಳನ್ನು ನಾವು ದೈನಂದಿನ ಜೀವನದಲ್ಲಿ ಕೂರಲು ಬಳಸುತ್ತೇವೆ. ಈ ಕುರ್ಚಿಗಳಲ್ಲಿ ನೀವು ಒಂದು ಸಾಮಾನ್ಯ ವಿಷಯವನ್ನು ಗಮನಿಸಿರುತ್ತೀರ. ಅದೇ ಈ ಪ್ಲಾಸ್ಟಿಕ್ ಚೇರ್ ಗಳಲ್ಲಿ ಇರುವ ಸಣ್ಣ ರಂದ್ರ.

ಈ ಪ್ಲಾಸ್ಟಿಕ್ ಚೇರ್ ಗಳ ನಡುವೆ ಸಣ್ಣ ರಂಧ್ರಗಳನ್ನು ಮಾಡಿರುತ್ತಾರೆ. ಇದನ್ನು ಏಕೆ ಮಾಡಿರುತ್ತಾರೆ? ಇದರ ಹಿಂದಿನ ಕಾರಣವೇನು? ಎನ್ನುವ ಪ್ರಶ್ನೆ ನಮ್ಮಲ್ಲಿ ಮೂಡಿರುವುದಂತೂ ಖಂಡಿತ. ನಿಜ ಹೇಳಬೇಕೆಂದರೆ, ಯಾವದೇ ವಸ್ತು ಮಾಡುವ ಮುಂಚೆ ವೈಜನಿಕವಾಗಿ ಯೋಜನೆ ಮಾಡಿ ನಂತರ ತಯಾರು ಮಾಡುತ್ತಾರೆ. ಈ ಪ್ಲಾಸ್ಟಿಕ್ ಚೇರ್ ನಲ್ಲಿರುವ ಸಣ್ಣ ರಂದ್ರ ದ ಹಿಂದೆ ಕೂಡ ಈ ವೈಜ್ಞಾನಿಕ ಕಾರಣ ಇದೆ.

ಪ್ಲಾಸ್ಟಿಕ್ ಚೇರ್ ಮಾಡುವ ಯಾವುದೇ ಬ್ರಾಂಡೆಡ್ ಕಂಪನಿ ಇರಲಿ ಅಥವಾ ಲೋಕಲ್ ಚೇರ್ ಗಳಿರಲಿ, ಎಲ್ಲರು ಕೂಡ ವಿಜ್ಞಾನ ಬಳಸಿಕೊಳ್ಳುತ್ತಾರೆ. ಜಗತ್ತಿನ ಮೂಲೆ ಮೂಲೆಗಳಲ್ಲೂ ಈ ಚೇರ್ ಗಳು ಒಂದು ಮೂಲೆಯಲ್ಲಿ ಒಂದರ ಮೇಲೆ ಒಂದರಂತೆ ಜೋಡಿಸಿ ಇರುವುದನ್ನು ನೀವು ನೋಡಿರುತ್ತೀರಾ ಹಾಗೆ ಜೋಡಣೆ ಕೂಡ ಮಾಡಿರುತ್ತೀರಾ. ಹಾಗೇನೇ ಈ ಚೇರ್ ಗಳಲ್ಲಿ ನಡುವೆ ರಂದ್ರ ಒಂದು ವೇಳೆ ಇಲ್ಲದೆ ಹೋದರೆ ಚೇರ್ ಗಳು ಒಂದರ ಮೇಲೆ ಒಂದು ಜೋಡಿಸಿ ಇತ್ತ ನಂತರ ಅಂಟಿಕೊಂಡು ಬಿಡುತ್ತವೆ.

ತೆಗೆಯಲು ಕೂಡ ಬಹಳ ಬಲ ಪ್ರಯೋಗ ಮಾಡಬೇಕಾಗುತ್ತದೆ. ಹಾಗೇನೇ ಗಾಳಿ ಪ್ರವೇಶ ಇರಲು ಈ ರಂದ್ರ ಮಾಡಿರುತ್ತಾರೆ. ಇದರಿಂದ ಚೇರ್ಗಳು ಅಂಟಿಕೊಳ್ಳದೆ ಸುಲಭವಾಗಿ ಒಂದರ ಮೇಲೊಂದರಂತೆ ಜೋಡಿಸಿಟ್ಟ ಚೇರ್ ಗಳನ್ನೂ ತೆಗೆಯಬಹುದಾಗಿದೆ. ಅದಲ್ಲದೆ ತೂಕ ಹೆಚ್ಚಿರುವ ವ್ಯಕ್ತಿ ಚೇರ್ ಮೇಲೆ ಕೂತರು ಕೂಡ ಅವನ ತೂಕದಿಂದ ಚೇರ್ ಮುರಿಯದಂತೆ ತಡೆದುಕೊಳ್ಳಲ್ಲು ಈ ಸಣ್ಣ ರಂದ್ರಗಳು ಸಹಾಯಕ ವಾಗಿದೆ. ಇದನ್ನು ಶೇರ್ ಮಾಡಿ ನಿಮ್ಮ ಗೆಳೆಯರ ಬಳಿ ಹಂಚಿಕೊಳ್ಳಿ.

Leave A Reply

Your email address will not be published.