Shark Tank: ರಾತ್ರೋರಾತ್ರಿ ಮುಚ್ಚಿಹೋಯ್ತು 40 ಕೋಟಿ ಮೌಲ್ಯದ ಕಂಪನಿ. ಈ ಕಂಪನಿ ಬಗ್ಗೆ ನೀವು ಕೇಳಿರಬಹುದು. ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ ಈ ಸುದ್ದಿ.

232

ಭಾರತ ಸ್ಟಾರ್ಟ್ ಅಪ್ ಅಂದರೆ ಹೊಸ ಉದ್ಯಮ ಶುರು ಮಾಡುವುದರಲ್ಲಿ ಹೆಸರು ವಾಸಿಯಾಗಿದೆ. ಹಾಗೇನೇ ಭಾರತದಲ್ಲಿ ಅತಿ ಹೆಚ್ಚು ಯೂನಿಕಾರ್ನ್ (Unicorn) (ಅಂದರೆ ಕಂಪನಿ ವ್ಯಾಲ್ಯೂಯೇಷನ್ ಅಥವಾ ಬೆಲೆ 1 ಬಿಲಿಯನ್ ಗು ಅಧಿಕ) 2022 ರಲ್ಲಿ ಹೊಂದಿತ್ತು. ಹಾಗೇನೇ ಈ ಸ್ಟಾರ್ಟ್ ಅಪ್ (StartUp) ಗೆ ಅನುಗುಣವಾಗಿ ದೂರದರ್ಶನದಲ್ಲಿ ಶಾರ್ಕ್ ಟ್ಯಾಂಕ್ (Shark Tank) ಎನ್ನುವ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಇದರಲ್ಲಿ ಹೊಸ ಉದ್ಯಮ ಶುರು ಮಾಡಿರುವ ವ್ಯಕ್ತಿಗಳು ತಮ್ಮ ಉದ್ಯಮಕ್ಕೆ ಬಂಡವಾಳ ಹಾಕಲು ದೊಡ್ಡ ದೊಡ್ಡ ಕಂಪನಿ ಗಳ ಬಳಿ ಪಿಚ್ ಮಾಡಲು ಹೋಗುತ್ತವೆ.

ಈ ಶಾರ್ಕ್ ಟ್ಯಾಂಕ್ ಕಾರ್ಯಕ್ರಮ ಮೊದಲು ವಿದೇಶದಲ್ಲಿ ಹೆಸರುವಾಸಿಯಾಗಿತ್ತು. ಇದೀಗ ಭಾರತದಲ್ಲಿ ಮೊದಲ ಆವೃತ್ತಿ ದೊಡ್ಡ ಹಿಟ್ ಆಗಿತ್ತು. ಅದೇ ಕಾರಣಕ್ಕೆ ಇದೀಗ ಎರಡನೇ ಆವೃತ್ತಿ ಕೂಡ ಬಂದಿದೆ. ಇಲ್ಲಿ ಬಂದಿರುವ ಒಂದು ಕಂಪನಿ ಇದೀಗ ದೇಶದೆಲ್ಲೆಡೆ ದೊಡ್ಡ ಸುದ್ದಿ ಮಾಡುತ್ತಿದೆ. ಈ ಕಂಪನಿ ದೇಶದಲ್ಲಿ ಅಲ್ಲದೆ ವಿದೇಶದಲ್ಲಿ ಕೂಡ ದೊಡ್ಡ ಹೆಸರುವಾಸಿಯಾಗಿತ್ತು. ಆದರೆ ದುರದೃಷ್ಟವಶಾತ್ ಕಂಪನಿ ರಾತ್ರೋ ರಾತ್ರಿ ಮುಚ್ಚಿದೆ. ಆದರೆ ದೃತಿ ಗೆಡದ ತಂಡ ಮತ್ತೊಮ್ಮೆ ಹೊಸ ಉದ್ಯಮದೊಂದಿಗೆ ಇದೀಗ ತಲೆ ಎತ್ತಿ ನಿಲ್ಲಲು ಶಾರ್ಕ್ ಟ್ಯಾಂಕ್ ಗೆ ಬಂದಿದೆ.

2014 ರಲ್ಲಿ ಮೂರೂ ಗೆಳೆಯರಾದ ವಿನಯ್ ಸಿಂಘಾಲ್, ಶಶಾಂಕ್ ವೈಷ್ಣವ್, ಪ್ರವೀಣ್ ಸಿಂಘಾಲ್ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ ಕಂಟೆಂಟ್ ತಯಾರು ಮಾಡುವ ಕಂಪನಿ ಸ್ಥಾಪನೆ ಮಾಡಿದ್ದರು. ಕಂಪನಿ ಹೆಸರು ವಿಟ್ಟಿ ಫೀಡ್ (WittyFeed). ಶುರು ಮಾಡಿದ್ದೆ ತಡ ನಾಲ್ಕು ವರ್ಷಗಳಲ್ಲಿ ಕಂಪನಿ ವಿದೇಶದಲ್ಲಿ ತಮ್ಮ ಬ್ರಾಂಚ್ ಗಳನ್ನೂ ತೆರೆದಿದ್ದರು. ತಿಂಗಳಿಗೆ 120 ಮಿಲಿಯನ್ ಜನರು ಇವರ ವಿಡಿಯೋ ನೋಡುತ್ತಿದ್ದರೆ, 40 ಕೋಟಿ ರೂಪಾಯಿಗಳ ವಾರ್ಷಿಕ ಅಧವಾ ಇವರದ್ದಾಗಿತ್ತು.

ಇವರದು ಆಗಲೇ ಹೇಳಿದಂತೆ ಸಾಮಾಜಿಕ ಜಾಲತಾಣದಲ್ಲಿ ಕಂಟೆಂಟ್ ಮಾಡುವ ಉದ್ಯಮವಾಗಿದ್ದು, ೨೦೧೮ ರಲ್ಲಿ ಅಮೇರಿಕಾದಲ್ಲಿ ನಡೆದ ಕೆಲ ಕಾರಣಗಳಿಂದ ಫೇಸ್ಬುಕ್ ಇವರ ಕಂಪನಿ ಕೂಡ ಮುಚ್ಚಿದ್ದಾರೆ. ಅಮೇರಿಕಾದ ಮತದಾರರ ಮೇಲೆ ಪ್ರಭಾವ ಹಾಕಿದ್ದಾರೆ ಎನ್ನುವ ಕಾರಣಕ್ಕೆ ಇವರ ಫೇಸ್ಬುಕ್ ಅಕೌಂಟ್ ಮುಚ್ಚಿದ್ದಾರೆ. ಇದರಿಂದ ಇಡೀ ತಂಡ ಖಿನ್ನತೆಗೆ ಒಳಗಾಗಿತ್ತು. ಇವರ ಜೊತೆ ಒಟ್ಟು 90 ಉದ್ಯೋಗಿಗಳು ಇದ್ದರು. ಇವರನ್ನು ಮನೆಗೆ ಕಳಿಸದೆ ಸುಮಾರು ಮೂರೂ ತಿಂಗಳುಗಳ ಕಾಲ ಇವರಿಗೆ ಸಂಬಳ ನೀಡಿ ತನ್ನ ಜೊತೆ ಉಳಿಸಿಕೊಂಡಿತ್ತು.

ದೃತಿ ಗೆಡದ ಇವರು ಮತ್ತೊಮ್ಮೆ ಒಂದು ಹೊಸ ಬಿಸಿನೆಸ್ ಐಡಿಯಾ ಇಂದ ಶೂನ್ಯದಿಂದ ಉದ್ಯಮ ಶುರು ಮಾಡಿದ್ದಾರೆ. ತನ್ನ ಕಂಪನಿ ಅಲ್ಲಿ ಕೆಲಸ ಮಾಡುವವರಿಂದಲೇ ಬಂಡವಾಳ ಹಾಕಿ ಅವರನ್ನು ಪಾರ್ಟ್ನರ್ ಮಾಡಿ ಒಂದು ಹೊಸ STAGE ಎನ್ನುವ OTT ಪ್ಲಾಟ್ಫಾರ್ಮ್ ಅನ್ನು ಸ್ಥಾಪನೆ ಮಾಡಿದ್ದಾರೆ. ಇದು ನೆಟ್ ಫ್ಲಿಕ್ಸ್ ಹಾಗು ಹೊಟ್ಸ್ಟಾರ್ ನಂತೆಯೇ ಒಂದು APP ಆಗಿದ್ದು, ಹರಿಯಾಣ ಹಾಗು ರಾಜಸ್ತಾನಿ ಪ್ರದೇಶದ ಜನರಿಗೆ ಬೇಕಾಗುವ ರೀತಿ ಧಾರಾವಾಹಿ ಹಾಗು ಇತರ ಮನೋರಂಜನಾ ವಿಡಿಯೋ ಗಳನ್ನೂ ನೀಡುತ್ತಿದೆ.

ಇದು ಈಗಾಗಲೇ ೧.೩ ಲಕ್ಷ ಪಾವತಿ ಚಂದಾದಾರರನ್ನು ಹೊಂದಿದೆ. ಹಾಗೇನೇ ಈ ಕಂಪನಿ ಮೌಲ್ಯ ಸುಮಾರು 300 ಕೋಟಿ ಅಷ್ಟಿದೆ. ಇವರು ಶಾರ್ಕ್ ಟ್ಯಾಂಕ್ ಗೆ ಬಂದು ತಮ್ಮ ಹೊಸ ಉದ್ಯಮದಲ್ಲಿ ಹೂಡಿಕೆ ಮಾಡುವಂತೆ ಕೇಳಿಕೊಂಡಿದ್ದಾರೆ. ಇವರ ಈ ಛಲ ಬಿಡದೆ ಮಾಡಿದ ಪ್ರಯತ್ನದಿಂದ ಇವರಿಗೆ ಮೆಚ್ಚುಗೆ ಸಿಕ್ಕಿದ್ದು, ಬಂಡವಾಳ ಕೂಡ ಸಿಕ್ಕಿದೆ. ಹಾಗೇನೇ ಇವರ ಈ ರೋಮಾಂಚಕ ವಿಷಯ ದೇಶದೆಲ್ಲೆಡೆ ಚರ್ಚೆ ಆಗುತ್ತಿದೆ. ಇವರ ಮೊದಲ ಕಂಪನಿ ವಿಡಿಯೋ ಕೂಡ ನೀವು ನೋಡಿರಬಹುದು.

Leave A Reply

Your email address will not be published.