ಬಹು ನರೀಕ್ಷಿತ KGF ಚಾಪ್ಟರ್ 3 ರಿಲೀಸ್ ಬಗ್ಗೆ ಮಹತ್ತರ ಮಾಹಿತಿ ಬಿಚ್ಚಿಟ್ಟ ನಿರ್ಮಾಪಕರು? ರಿಲೀಸ್ ಡೇಟ್ ಕೂಡ ಹೇಳಿಯೇ ಬಿಟ್ಟರು!

199

ಕನ್ನಡ ಸಿನೆಮಾ ಇಂಡಸ್ಟ್ರಿ ಅನ್ನು ಒಂದು ಮಟ್ಟಕ್ಕಿಂತ ಇನ್ನೊಂದು ಮಟ್ಟಕ್ಕೆ ಕೊಂಡೊಯ್ದ ಚಿತ್ರ ಇದ್ದರೆ ಅದು KGF. ಹೌದು ಎಲ್ಲರೂ ಸ್ಯಾಂಡಲ್ವುಡ್ ಕಡೆ ಹಿಂತಿರುಗಿ ನೋಡುವಂತೆ ಮಾಡಿದ ಚಿತ್ರ. ಬಾಲಿವುಡ್ ಅಧಃಪತನಕ್ಕೆ ಅಡಿಪಾಯ ಹಾಕಿದ ಚಿತ್ರ ಕೂಡ ಎಂದರೂ ತಪ್ಪಾಗಲಿಕ್ಕಿಲ್ಲ. ಆದರೆ ಇದೀಗ 2 ಚಾಪ್ಟರ್ ನಂತರ ಇದೀಗ ಮೂರನೇ ಅಧ್ಯಾಯದ ಬಗ್ಗೆ ನಿರ್ಮಾಪಕರು ಮಾಹಿತಿ ಬಿಚ್ಚಿಟ್ಟಿದ್ದಾರೆ.

KGF ಚಾಪ್ಟರ್ 3 ಸಿನೆಮಾದ ಬಗ್ಗೆ ಕೇಳಿದಾಗ ಅವರು ಸಿನೆಮಾ ಮಾಡುವುದು ಖಂಡಿತ ಮತ್ತು ಇದು ಹಲವು ಅಧ್ಯಾಯಗಳಲ್ಲಿ ಬರಲಿದೆ. ಈಗ ಪ್ರಶಾಂತ್ ನಿಲ್ ಅವರು ಸಲಾರ್ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಅದಾದ ನಂತರ ಜೂನಿಯರ್ NTR ಜೊತೆಗೆ ಒಂದು ಸಿನೆಮಾ ಮಾಡಲು ಸಹಿ ಹಾಕಿದ್ದಾರೆ. ಈ ಎಲ್ಲಾ ಸಿನೆಮಾ ಮುಗಿಯುವುದು 2025 ಆಗುತ್ತದೆ. ಆ ಸಮಯಕ್ಕೆ KGF ಚಾಪ್ಟರ್ 3 ಚಿತ್ರ ಸೆಟ್ ಏರಲಿದೆ ಅಲ್ಲಿಂದ ಶೂಟಿಂಗ್ ಮುಗಿಸಿ 2026 ಹಂತಕ್ಕೆ ಚಿತ್ರ ಮಂದಿರಕ್ಕೆ ಬರಲಿದೆ ಎಂದು ವಿಜಯ್ ಕಿರಗಂದುರು ಹೇಳಿದ್ದಾರೆ.

ಜೇಮ್ಸ್ ಬಾಂಡ್ ಮಾದರಿಯಲ್ಲಿ ಇದು ಮೂಡಿ ಬರಲಿದೆ. ಒಟ್ಟು 5 ಭಾಗಗಳಲ್ಲಿ KGF ಚಿತ್ರ ಬರಲಿದ್ದು. ಅದರ ನಂತರವೂ ಮುಂದುವರೆಯುತ್ತದೆ ಆದರೆ 5 ನೆಯ ಭಾಗದ ನಂತರ ಯಶ್ ಅವರ ಬದಲಿಗೆ ಬೇರೆ ಹೀರೋ ಬರಲಿದ್ದಾರೆ ಎಂದು ಅವರು ಹೇಳಿದ್ದಾರೆ. ಅದೇನೇ ಆಗಲಿ ಮುಂದಿನ ಭಾಗ ಬರುತ್ತದೆ ಎನ್ನುವುದೇ ಖುಷಿ ಆದರೆ ಇನ್ನೂ 4 ವರ್ಷಗಳ ಕಾಲ ಕಾಯಬೇಕು.

Leave A Reply

Your email address will not be published.