ತಪ್ಪಾಗಿ ಬೇರೆಯವರಿಗೆ ಹಣ ವರ್ಗಾವಣೆ ಆದರೆ ಗಲಿಬಿಲಿ ಆಡಬೇಡಿ. ಈ ಸಿಂಪಲ್ ಕೆಲಸ ಮಾಡಿ ಪೂರ್ತಿ ಹಣ ನಿಮಗೆ ರಿಟರ್ನ್ ಆಗುತ್ತದೆ.
ಪೆಟಿಎಂ (Paytm) ಇಂದು ಎಲ್ಲ ಕೆಲಸಗಳಿಗೂ ಬೇಕಾಗುವಂತಹ ಅಪ್ಲಿಕೇಶನ್. ಜನರ ದೈನಂದಿನ ವ್ಯವಹಾರಗಳಿಗೆ ಒಂದು ಬೇಕೇ ಬೇಕು ಎನ್ನುವ ಸಾಧನವಾಗುತ್ತ ಹೋಗುತ್ತಿದೆ. ರಿಚಾರ್ಜ್ (Recharge) ಇಂದ ಹಿಡಿದು ಹಣ ಇನ್ನೊಬ್ಬರಿಗೆ ವರ್ಗಾವಣೆ ಮಾಡಲು ಕೂಡ ಪೆಟಿಎಂ ಉಪಯುಕ್ತವಾಗಿದೆ. ಅಲ್ಲದೆ ಟಿಕೆಟ್ ಬುಕಿಂಗ್ ಕೂಡ ಇದರಲ್ಲಿ ಮಾಡಬಹುದು. ಪೆಟಿಎಂ ಇಂದ ಜನರಿಗೆ ಬಹಳಷ್ಟು ಸಹಾಯ ಆಗಿದೆ.ಆದರೆ ಕೆಲವು ಬಾರಿ ನಿಮಗೂ ಕೂಡ ಈ ಅಪ್ಲಿಕೇಶನ್ ಗಳಿಂದ ಸಣ್ಣ ಪುಟ್ಟ ತೊಂದರೆ ಆಗಿದ್ದುಂಟು.
ನೀವು ರಿಚಾರ್ಜ್ ಮಾಡಿದ ನಂತರ ಹಣ ಬ್ಯಾಂಕ್ ಇಂದ ಕಟ್ ಆಗಿದ್ದರು ಕೂಡ ರಿಚಾರ್ಜ್ ಆಗದಿರುವುದು, ಇನ್ನೊಬ್ಬರಿಗೆ ಹಣ ವರ್ಗಾವಣೆ ಮಾಡಿದರು ಕೂಡ ಅವರಿಗೆ ಹೋಗದೆ ಇರುವುದು ಉದಾಹರಣೆಗಳಿವೆ. ಈ ಕಾರಣಕ್ಕೆ ಪೆಟಿಎಂ ಇದೆಲ್ಲ ಸಮಸ್ಯೆಗೆ ಪರಿಹಾರ ನೀಡಲಿದೆ. ನೀವು ಪೆಟಿಎಂ ಬಳಕೆ ದಾರರಾಗಿದ್ದರೆ ನಿಮಗೂ ಕೂಡ ಇಂತಹ ಸಮಸ್ಯೆಗಳು ಎದುರಾಗಿರಬಹುದು. ನಿಮಗೆ ಇಂತಹ ಸಮಸ್ಯೆಗಳು ಎದುರಾಗಿದ್ದರೆ ನಿಮಗೆ ಇಂತಹ ಸಮಸ್ಯೆಗಳ ಪರಿಹಾರ ನಾವು ನಿಮಗೆ ಇಂದು ನೀಡುವ ಪ್ರಯತ್ನ ಮಾಡುತ್ತೇವೆ.
ಒಂದು ವೇಳೆ ನೀವು ಹಣ ವರ್ಗಾವಣೆ ಮಾಡುವಾಗ ತಪ್ಪಾಗಿ ಬೇರೆಯವರಿಗೆ ಕಳುಹಿಸಿದರೆ ಗಲಿಬಿಲಿ ಆಗುವುದು ಸಹಜ. ಆಗ ಏನು ಮಾಡಬೇಕು ಎನ್ನುವುದು ನಮಗೆ ಗೊತ್ತಾಗುವುದಿಲ್ಲ. ಈ ತರ ಒಂದು ವೇಳೆ ಆದರೆ ನೀವು ಪೆಟಿಎಂ ಬಳಿ ಕಾಲ್ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇಲ್ಲವಾದರೆ ನೀವು ನಿಮ್ಮ ಬ್ಯಾಂಕ್ ಗೆ ತೆರಳಿ ಆದ ತಪ್ಪಿನ ಬಗ್ಗೆ ಹೇಳಿಕೊಂಡರೆ ಅವರು ಹಣ ನಿಮಗೆ ಹಿಂತಿರುಗಿಸುವ ವ್ಯವಸ್ಥೆ ಮಾಡುತ್ತಾರೆ.
ನೀವು ವರ್ಗಾವಣೆ ಮಾಡಿದ ವ್ಯಕ್ತಿಯ ಅಕೌಂಟ್ ಒಂದೇ ಶಾಖೆ ಅಥವಾ ಒಂದೇ ಬ್ಯಾಂಕ್ ಆಗಿದ್ದರೆ ಯಾವುದೇ ತೊಂದರೆ ಇಲ್ಲದೆ ವೇಗವಾಗಿ ನಿಮ್ಮ ಅಕೌಂಟ್ ಗೆ ಹಣ ವರ್ಗಾವಣೆ ಆಗುತ್ತದೆ. ಇಲ್ಲವಾದರೆ ನೀವು ವರ್ಗಾವಣೆ ಮಾಡಿದ ವ್ಯಕ್ತಿಯ ಬ್ಯಾಂಕ್ ಬ್ರಾಂಚ್ ಗೆ ತೆರಳಿ ಹಣ ಹಿಂತಿರುಗಿಸುವಂತೆ ಕೇಳಿಕೊಳ್ಳಬಹುದು. ಒಂದು ವೇಳೆ ಹಣ ಪಡೆದ ವ್ಯಕ್ತಿ ಹಿಂತಿರುಗಿಸಲು ಒಪ್ಪದೇ ಇದ್ದರೆ ನೀವು ಪೊಲೀಸ್ ಕಂಪ್ಲೇಂಟ್ ಕೊಡುವುದರ ಮೂಲಕ ನೀವು ಹಣವನ್ನು ಹಿಂದೆ ಪಡೆಯ ಬಹುದಾಗಿದೆ.
RBI ನಿಯಮಗಳೇನು?
ಒಂದು ವೇಳೆ ನೀವು ಹಣ NEFT ಮಾಡುವಾಗ ಬ್ಯಾಂಕ್ ಗಳು ನೀವು ನಮೂದಿಸಿದ ಅಕೌಂಟ್ ನಂಬರ್ ಹಾಗು ಹೆಸರು ಹೋಲಿಕೆ ಮಾಡಬೇಕಾಗುತ್ತದೆ. ಒಂದು ವೇಳೆ ಹೆಸರು ಹಾಗು ಅಕೌಂಟ್ ನಂಬರ್ ಹೊಂದಿರುವ ವ್ಯಕ್ತಿಯ ಹೆಸರು ಹೋಲಿಕೆ ಆಗದೆ ಹೋದರೆ ಹಣ ವರ್ಗಾವಣೆ ಬ್ಯಾಂಕ್ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಬ್ಯಾಂಕ್ ಹಾಗೇನಾದರೂ ವರ್ಗಾವಣೆ ಮಾಡಿದ್ದೆ ಆದಲ್ಲಿ ಅದಕ್ಕೆ ಬ್ಯಾಂಕ್ ನೇರ ಹೊಣೆ ಆಗುತ್ತದೆ. ನಿಮಗೆ ನಿಮ್ಮ ಹಣ ಆಗ ವಾಪಸು ಸಿಗುತ್ತದೆ.