AB ಡಿವಿಲಿಯರ್ಸ್ ಹಾಗು ಸೂರ್ಯಕುಮಾರ್ ಯಾದವ್ ಚರ್ಚೆಗೆ ಇತಿಶ್ರೀ ಹಾಡಿದ ಇರ್ಫಾನ್ ಪಠಾಣ್. SKY ಗಿಂತ ABD ಉತ್ತಮ ಎಂದ ಪಠಾಣ್.
ಸೂರ್ಯ ಕುಮಾರ್ ಯಾದವ್ ಹಾಗು ಡಿವಿಲಿಯರ್ಸ್ ಅವರ ನಡುವೆ ಇತೀಚೆಗೆ ಯಾರು ಉತ್ತಮ ಎನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಇದಕ್ಕೆ ಭಾರತದ ಮಾಜಿ ಬೌಲರ್ ಇರ್ಫಾನ್ ಪಠಾಣ್ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಇರ್ಫಾನ್ ಪಠಾಣ್ ಪ್ರಕಾರ ಡಿವಿಲಿಯರ್ಸ್ ಸೂರ್ಯಕುಮಾರ್ ಯಾದವ್ ಗಿಂತ ಉತ್ತಮವಾಗಿದ್ದರು. ಅಲ್ಲದೆ ಸ್ಕೈ ಗಿಂತ ಹೆಚ್ಚು ಶಕ್ತಿ abd ಗೆ ಇತ್ತು ಎಂದು ಹೇಳಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತಾಡುತ ಇರ್ಫಾನ್ ಪಠಾಣ್, ಇಬ್ಬರನ್ನು ಹೋಲಿಕೆ ಮಾಡುವುದು ಬಹಳ ಕಷ್ಟ. ಆದರೆ ಹೇಳಲೇಬೇಕೆಂದರೆ abd ಸೂರ್ಯಕುಮಾರ್ ಯಾದವ್ ಗಿಂತ ಹೆಚ್ಚಿನ ಶಕ್ತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಸ್ಕೈ ಗಿಂತ ವೇಗವಾಗಿ ಹಾಗೇನೇ ತಕ್ಷಣದಲ್ಲಿ ಚೆಂಡನ್ನು ಬೌಂಡರಿ ಗೆ ಕಳುಹಿಸುವ ಶಕ್ತಿ abd ಗೆ ಹೆಚ್ಚಿತ್ತು. ಆದರೆ ಸೂರ್ಯ ಕುಮಾರ್ ಯಾದವ್ ಇಂಗ್ಲೆಂಡ್ ನ ಜೋಸ್ ಬಟ್ಲರ್ ಗಿಂತ ಉತ್ತಮ ಆಟಗಾರ ಎಂದು ಹೇಳಿದ್ದಾರೆ.
ಹಾಗೇನೇ ಮಾತಾಡುತ್ತ, ಭಾರತ ತಂಡ ಸೂರ್ಯಕುಮಾರ್ ಯಾದವ್ ರಂತಹ ಉತ್ತಮ ಬ್ಯಾಟ್ಸಮನ್ ರನ್ನ ಪಡೆದಿರಲಿಲ್ಲ. ಹಾಗೇನೇ ಪಡೆಯುವುದಿಲ್ಲ. ಮಿಡ್ಲ್ ಓವರ್ ಗಳಲ್ಲಿ ಇವರ ಆತ ಅತ್ಯದ್ಭುತ. ಹಾಗೇನೇ ಇವರನ್ನು ನಾಲ್ಕನೇ ಕ್ರಮಾಂಕದಲ್ಲಿ ಮೈದಾನಕ್ಕೆ ಕಳಿಸಿದರೆ ಉತ್ತಮ. ಇವರು ಸ್ಪಿನ್ನರ್ ಗಳ ಎದುರು ಉತ್ತಮವಾಗಿ ಆಡುತ್ತಾರೆ ಹಾಗೇನೇ ಬೌಂಡರಿ ಮೂಲಕ ಇವರು ಪಂದ್ಯದ ಗತಿ ಬದಲಿಸಬಲ್ಲರು ಎಂದು ಇರ್ಫಾನ್ ಪಠಾಣ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.