The Kerala Story : ಕೇರಳ ಸ್ಟೋರಿ ಬಗ್ಗೆ ಕೊನೆಗೂ ಚಕಾರವೆತ್ತಿದ ಕಮಲ್ ಹಾಸನ್. ಇವರ ಹೇಳಿಕೆಗೆ ಇದೀಗ ಪರ ವಿರೋಧದ ಚರ್ಚೆ.
ಅದಾ ಶರ್ಮಾ (Adah Sharma) ನಟನೆಯ ದ ಕೇರಳ ಸ್ಟೋರಿ (The Kerala Story) ಇದೀಗ ದೇಶದ ಎಲ್ಲೆಡೆ ಸದ್ದು ಮಾಡುತ್ತಿದೆ. ಹಾಗೇನೆ ಇದು ರಾಜಕೀಯವಾಗೂ ಚರ್ಚೆ ನಡೆಯುತ್ತಿದ್ದು, ಬಾಕ್ಸ್ ಆಫೀಸ್ ಅಲ್ಲಿ ದೂಳೆಬ್ಬಿಸಿದ್ದು ಮಾತ್ರ ಸತ್ಯ. ಈ ಕೇರಳ ಸ್ಟೋರಿ ದೇಶದ ಅನೇಕ ರಾಜ್ಯಗಳಲ್ಲಿ ಅನೇಕ ಬಾರಿ ಬ್ಯಾನ್ ಆಗಿದ್ದರೂ ಕೂಡಾ ಸುಪ್ರೀಂ ಕೋರ್ಟ್ ಆದೇಶದ ಮೇಲೆ ಭರ್ಜರಿ ಪ್ರದರ್ಶನ ಕಂಡಿದೆ. ಇದೀಗ ಈ ಸಿನೆಮಾ ಬಗ್ಗೆ ಕಮಲ್ ಹಾಸನ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕೇರಳ ಸ್ಟೋರಿ ಬಗ್ಗೆ ಒಂದು ಖಾಸಗಿ ಈವೆಂಟ್ ಅಲ್ಲಿ ಮಾತಾಡಿದ ಕಮಲ್ ಹಾಸನ್ (kamal Hasan), ನಾನು ದಿ ಕೇರಳ ಸ್ಟೋರಿ (The Kerala Story) ನೋಡಿಲ್ಲ, ನಾನು ಅದರ ಬಗ್ಗೆ ಕೇಳಿದ್ದೇನೆ ಅಷ್ಟೇ. ಈ ಸಿನೆಮಾ ಹೇಳಿದಂತೆ ಕೆಲ ಘಟನೆಗಳು ನಡೆದಿರಬಹುದು. ಆದರೆ ಅದರ ಬಗ್ಗೆ ಹೇಳುವಾಗ ಸರಿಯಾದ ನಂಬರ್ ಹೇಳಬೇಕು. ಆದರೆ ಸಿನೆಮಾ ಬ್ಯಾನ್ ಬಗೆ ನಾನು ವಿರೋಧ ಮಾಡುತ್ತೇನೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.
ನನ್ನ ಸಿನೆಮಾ ವಿಶ್ವರೂಪಂ (Vishwaroopam) ಕೂಡಾ ಬ್ಯಾನ್ ಆಗಿದೆ. ಇಲ್ಲಿಯವರೆಗೂ ಅದು ಯಾಕೆ ಬ್ಯಾನ್ ಆಗಿದೆ ಎನ್ನುವ ಮಾಹಿತಿ ಯಾರಿಗೂ ಗೊತ್ತಿಲ್ಲ. ಜನರು ಇಂತಹ ಸಿನೆಮಾಗಳಿಗೆ ಹೋಗಬೇಕು, ಅದು ಸರಿಯೋ ತಪ್ಪೋ ಎನ್ನುವ ಆಲೋಚನೆ ಅವರೇ ಮಾಡಬೇಕು ಎಂದು ಕಮಲ್ ಹಾಸನ್ (Kamal Hasan) ಹೇಳಿದ್ದಾರೆ. ಇನ್ನು ಕೇರಳ ಸ್ಟೋರಿ (the Kerala Story) ಬಗ್ಗೆ ಹೇಳಬೇಕೆಂದರೆ ಈ ಸಿನೆಮಾ ಭಾರತದಲ್ಲಿ ಭರ್ಜರಿ ಗಳಿಕೆ ಮಾಡಿದೆ. ಮೇ ೫ ರಂದು ಬಿಡುಗಡೆಯಾದ ಈ ಸಿನೆಮಾ ೨೩೦ ಕೋಟಿ ಗೂ ಹೆಚ್ಚು ಗಳಿಕೆ ಮಾಡಿದೆ.