ಕನ್ನಡ ಸಿನೆಮಾ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ 5 ನಟರು ಯಾರು ? ನಿಮ್ಮ ನೆಚ್ಚಿನ ನಟ ಈ ವರ್ಷ ಗಳಿಸಿದ ಆದಾಯ ಎಷ್ಟು ?

36

ಕನ್ನಡ ಸಿನೆಮಾ ರಂಗ ಕಳೆದ ಎರಡು ವರ್ಷದಲ್ಲಿ ವಿಶ್ವವೇ ತಿರುಗಿ ನೋಡುವಂತಹ ಕೆಲಸ ಮಾಡುತ್ತಿದೆ. ಯಾರು ಕಂಡು ಕೇಳರಿಯದ ರೀತಿಯಲ್ಲಿ ಹೊಚ್ಚ ಹೊಸ ಕಥೆ, ನಿರ್ದೇಶನ ಜನರ ಮನ ಗೆಲ್ಲುವ ಹಲವು ಸಿನೆಮಾಗಳನ್ನು ಕೊಟ್ಟಿದೆ. ಕೇವಲ ಕರ್ನಾಟಕಕ್ಕೆ ಸೀಮಿತ ಆಗಿದ್ದ ಸಿನೆಮಾಗಳು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಿಂತದ್ದು ಕನ್ನಡಕ್ಕೆ ಒಂದು ಹೆಮ್ಮೆ. ಕೇವಲ ಸಿನೆಮಾ ಕೊಟ್ಟದ್ದು ಅಲ್ಲದೆ ಅಂತಾರಾಷ್ಟ್ರೀಯ ಪ್ರಶಸ್ತಿ ಕೂಡ ಬಾಚಿಕೊಂಡಿದೆ. ಹಾಗಾದರೆ ಇಷ್ಟೆಲ್ಲಾ ಬೆಳೆಯುತ್ತಿರುವ ಸಿನೆಮಾ ರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರುಗಳು ಯಾರು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಬನ್ನಿ 2023 ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟರು ಯಾರು ಎಂದು ನೋಡೋಣ.

ಎಲ್ಲಾ ನಟರೂ ತಮ್ಮದೇ ಆದ ಹಿಂಬಾಲಕರನ್ನು ಹೊಂದಿದ್ದಾರೆ. ಹಾಗಾದರೆ ಇಲ್ಲಿ ನಿಮ್ಮ ನೆಚ್ಚಿನ ನಾಯಕ ಎಷ್ಟರ ಮಟ್ಟಿಗೆ ಸಂಭಾವನೆ ಪಡೆಯುತ್ತಾರೆ ಎಂಬ ಕುತೂಹಲ ನಿಮ್ಮ ಮನಸಿನಲ್ಲಿ ಕೂಡ ಇರಬಹುದು. ಹಾಗಿದ್ದರೆ ನಿಮ್ಮ ನೆಚ್ಚಿನ ನಟರು ಎಷ್ಟು ಸಂಭಾವನೆ ಪಡೆಯುತ್ತಾರೆ ಮತ್ತು ಅವರ ಸಂಭಾವನೆಗೆ ತಕ್ಕ ಸಿನೆಮಾ ಅವರು ನೀಡಿದ್ದಾರೆಯೇ ಎಂಬ ವಿಮರ್ಶೆ ನಿಮಗೆ ಬಿಟ್ಟದ್ದು. ಅತೀ ಹೆಚ್ಚು ಸಂಭಾವನೆ ಪಡೆಯುವ 5 ನಟರ ಪಟ್ಟಿ ಇಲ್ಲಿದೆ. ಇದು 2023 ನೆಯ ಸಾಲಿನಲ್ಲಿ ನಟರು ಪಡೆದ ಸಂಭಾವನೆಯನ್ನು ಪರಿಗಣಿಸಿ ಮಾಡಲಾಗಿದೆ.

5ನೆಯ ಸ್ಥಾನದಲ್ಲಿ ರಾಜ್ ಕುಟುಂಬದ ಶಿವರಾಜ್ ಕುಮಾರ್ ಅವರು ಬರುತ್ತಾರೆ. ಅವರು ತಮ್ಮ ಪ್ರತಿ ಸಿನೆಮಾಗೆ ಸರಿ ಸುಮಾರು 8 ಕೋಟಿಯಷ್ಟು ಸಂಭಾವನೆ ಪಡೆದಿದ್ದಾರೆ. ಹಾಗೆ 4ನೆಯ ಸ್ಥಾನದಲ್ಲಿ ಧ್ರುವ ಸರ್ಜಾ ಅವರು ಬರುತ್ತಾರೆ , ಸರ್ಜಾ ಪರಿವಾರದ ಧ್ರುವ ಸರ್ಜಾ ಅವರು ತಮ್ಮ ಪ್ರತಿ ಸಿನೆಮಾಗೆ 10 ಕೋಟಿ ಅಷ್ಟು ಸಂಭಾವನೆ ಪಡೆಯುತ್ತಾರೆ. 3ನೆಯ ಸ್ಥನಾ ನೋಡಿದರೆ ದರ್ಶನ್ ತೂಗುದೀಪ ಅವರು ಇದ್ದು ಅವರು 2023 ಸಾಲಿನಲ್ಲಿ 15-20 ಕೋಟಿ ಸಂಭಾವನೆ ಪಡೆದಿದ್ದಾರೆ. ಎರಡನೇ ಸ್ಥಾನದಲ್ಲಿ ಕಿಚ್ಚ ಸುದೀಪ್ ಅವರು ಇದ್ದು ಅವರು ತಮ್ಮ ಪ್ರತಿ ಸಿನಿಮಾಗೂ 10-25 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇನ್ನು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಕೆಜಎಫ್ ಖ್ಯಾತಿಯ ರಾಕಿ ಭಾಯ್ ಯಶ್ ಅವರಿದ್ದು ಇವರು 2023 ರಾಲ್ಲಿ 60-100 ಕೋಟಿ ರೂಪಾಯಿ ಸಂಭಾವನೆ ಪಡೆದು ಸ್ಯಾಂಡಲ್ವುಡ್ ನಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ನಟ ಎಂದು ತಮ್ಮನೂ ತಾವು ಪ್ರೂವ್ ಮಾಡಿ ಕೊಂಡಿದ್ದಾರೆ. ನಿಮ್ಮ ನೆಚ್ಚಿನ ನಟ ಯಾರು ಎಂದು ಕಾಮೆಂಟ್ ಮೂಲಕ ತಿಳಿಸಿ.

Leave A Reply

Your email address will not be published.