Interesting : ಮನೆ ಮಾಳಿಗೆ ಮೇಲೆ ಉಚಿತವಾಗಿ ಹಾಕಿ ಸೋಲಾರ್ ಪ್ಯಾನೆಲ್. ಜೀವನ ಪೂರ್ತಿ ಉಚಿತ ವಿದ್ಯುತ್ ಪಡೆಯಿರಿ. ಇದು ಹೇಗೆ ಸಾಧ್ಯ ಅಂತೀರಾ ಇಲ್ಲಿದೆ ಮಾಹಿತಿ.
How to Install Solar Panel: ದೇಶದಲ್ಲಿ ಇದೀಗ ಶೆಕೆ ಸಿಕ್ಕಾಪಟ್ಟೆ ಇದೆ. ಮಳೆ ಕೂಡ ಸರಿಯಾಗಿ ಬರುತ್ತಿಲ್ಲ. ಇಂತಹ ಸಂಧರ್ಭದಲ್ಲಿ ಫ್ಯಾನ್ ಹಾಗು ಎಸಿ ಕೂಡ ಅಧಿಕವಾಗಿ ಎಲ್ಲೆಡೆ ಬಳಸುತ್ತಾರೆ. ನಿಮ್ಮ ಮನೆಯಲ್ಲೂ ಬಳಸಿರುತ್ತೀರ. ಅದೇ ರೀತಿ ಬೇಸಿಗೆ ಕಾಲದಲ್ಲಿ ವಿದ್ಯುತ್ ಕೂಡ ಸಿಗದೇ ಪದೇ ಪದೇ ಕರೆಂಟ್ ಹೋಗುತ್ತಾ ಇರುತ್ತದೆ. ಇದ್ದಿಲು ಇಂದ ಇಂದು ನಾವು ದೇಶದಲ್ಲಿ ಅತಿ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡುತ್ತಿದ್ದೇವೆ. ಅದು ಕಡಿಮೆ ಆಗುತ್ತಿದ್ದಂತೆಯೇ ವಿದ್ಯುತ್ ಸಮಸ್ಯೆ ಉಂಟಾಗುತ್ತದೆ. ಅದಕ್ಕಾಗಿಯೇ ವಿದ್ಯುತ್ ಉತ್ಪಾದನೆ ಮಾಡಲು ಬೇರೆ ಪರ್ಯಾಯ ವ್ಯವಸ್ಥೆ ಬಗ್ಗೆ ಸರಕಾರ ಚಿಂತನೆ ಮಾಡುತ್ತಿದೆ.
ಸೋಲಾರ್ ಪ್ಯಾನೆಲ್ ಒಂದು ಪರ್ಯಾಯವಾಗಿದೆ. ಇದನ್ನು rooftop ಸೋಲಾರ್ ಅಂತಾನೂ ನೀವು ಕರೆಯಬಹುದು. ವರದಿಗಳ ಪ್ರಕಾರ ನಮ್ಮ ದೇಶದಲ್ಲಿ ಸೂರ್ಯನ ಶಕ್ತಿ ಬೇಕಾದಷ್ಟು ಸಿಗುತ್ತದೆ. ಆದರೆ ಇದರ ಉಪಯೋಗ ನಾವು ಅತಿ ಕಡಿಮೆ ಮಾಡುತ್ತಿದ್ದೇವೆ. ನಮ್ಮ ದೇಶದ ಬಗ್ಗೆ ಹೇಳುವುದಾದರೆ ಕೇವಲ ಬೆರೆಳೆಣಿಕೆಯಷ್ಟು ಜನ ಮಾತ್ರ ಸೋಲಾರ್ ಬಳಸಿಕೊಂಡು ವಿದ್ಯುತ್ ಉಪಯೋಗಿಸುತ್ತಿದ್ದಾರೆ.
ಭಾರತ ಈ ವಿಷಯದಲ್ಲಿ ಬಹಳಷ್ಟು ಹಿಂದೆ ಇದೆ. ಆದರೆ ಹತ್ತು ವರ್ಷಕ್ಕಿಂತ ಹಿಂದಿನದು ನೋಡುವುದಾದ್ರೆ ಭಾರತ ಸೌರ ಉತ್ಪನ್ನ ಬಹಳ ಹೆಚ್ಚು ಮಾಡಿದೆ. ನಮ್ಮ ಮನೆ ಟೆರೇಸ್ ನಲ್ಲಿ ಸೌರ ಪ್ಯಾನೆಲ್ ಬಳಸುವುದರಿಂದ ಅನೇಕ ಉಪಯೋಗಗಳಿವೆ. ಮೊದಲನೇದು ವಿದ್ಯುತ್ ನಮಗೆ ಉಚಿತ ಸಿಕ್ಕಿದರೆ, ಹೆಚ್ಚುವರಿ ವಿದ್ಯುತ್ ಅನ್ನು ನಾವು ಸರಕಾರಕ್ಕೆ ಮಾರಾಟ ಮಾಡಬಹುದಾಗಿದೆ. ಇನ್ನು ಹಲವೆಡೆ ರೈತರು ಸೋಲಾರ್ ಬಳಸೊಕೊಂಡು ವಿದ್ಯುತ್ ಉತ್ಪಾದನೆ ಮಾಡಿ ಹೊಲಗಳಿಗೆ ನೀರುಣಿಸಲು ಉಪಯೋಗಿಸುತ್ತಿದ್ದಾರೆ.
Roof Top ಸೋಲಾರ್ ಪ್ಯಾನೆಲ್ ಎಂದರೇನು?
ಮನೆಗಳ ಮೇಲ್ಛಾವಣಿಯ ಮೇಲೆ ರೂಫ್ಟಾಪ್ ಸೌರ ಫಲಕಗಳು ಕಂಡುಬರುತ್ತವೆ. ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಲಾಗಿದೆ, ಇದನ್ನು ರೂಫ್ ಟಾಪ್ ಪ್ಯಾನಲ್ ಎಂದು ಕರೆಯಲಾಗುತ್ತದೆ. ಇದು ಸೂರ್ಯನ ಕಿರಣಗಳಿಂದ ಶಕ್ತಿಯನ್ನು ಹೀರಿಕೊಳ್ಳುವ ಮತ್ತು ವಿದ್ಯುತ್ ಉತ್ಪಾದಿಸುವ ಅಂತಹ ತಂತ್ರಜ್ಞಾನವಾಗಿದೆ. ಫಲಕದಲ್ಲಿ ದ್ಯುತಿವಿದ್ಯುಜ್ಜನಕ ಕೋಶಗಳನ್ನು ಸಹ ಸ್ಥಾಪಿಸಲಾಗಿದೆ, ಇದು ಸೌರ ಶಕ್ತಿಯನ್ನು ವಿದ್ಯುತ್ ಆಗಿ ಪರಿವರ್ತಿಸುತ್ತದೆ. ಈ ವಿದ್ಯುತ್ ಪವರ್ ಗ್ರಿಡ್ನಿಂದ ವಿದ್ಯುತ್ ಮಾಡುವಂತೆಯೇ ಮಾಡುತ್ತದೆ.