Interesting: ಮೊಬೈಲ್ ಶಾಪ್ ಗಳಲ್ಲಿ ನಿಮಗೆ ಸಿಗುತ್ತಿರುವುದು ನಕಲಿ ಅಥವಾ ಅಸಲಿ ಮೊಬೈಲ್ ಚಾರ್ಜರ್ ಎಂದು‌ ಕಂಡುಹಿಡಿಯುವುದು ಹೇಗೆ? ಇಲ್ಲಿದೆ‌ ಸಿಂಪಲ್ ಪರಿಹಾರ.

507

Tips to find fake or real mobile charger : ನಿಮ್ಮ ಬಳಿ ಇರುವ ಯಾವುದೇ ಕಂಪೆನಿಯ ಮೊಬೈಲ್ ಚಾರ್ಜರ್ ಹಾಳಾದರೆ, ನೀವು ಮೊಬೈಲ್ ಶಾಪ್ ಗೆ ಹೋಗಿ ಬೇರೆ ಚಾರ್ಜರ್ ತಗೋತಿರ. ಅದು ಸಾಮಾನ್ಯ ವಿಷಯ. ಆದರೆ ನೀವು ಖರೀದಿ ಮಾಡುವ ಚಾರ್ಜರ್ ನೋಡಲು ಅಸಲಿ ಚಾರ್ಜರ್ ತರಹನೇ‌ ಇದ್ದರೂ ಕೂಡಾ ಮನೆಗೆ ಬಂದು ಚಾರ್ಜ್ ಮಾಡುವಾಗ ಮೊದಲಿನ ಚಾರ್ಜರ್ ರೀತಿ‌ ಕೆಲಸ ಮಾಡುವುದಿಲ್ಲ ಎನ್ನುವ ಅಂಶ ನಿಮಗೂ ಕೆಲವು ಬಾರಿ‌ ಅರಿವಿಗೆ ಬಂದಿರಬಹುದು. ನೋಡಲು ಒಂದೇ‌‌ ರೀತಿ‌ ಇದ್ದರು ಕೂಡಾ ಚಾರ್ಜಿಂಗ್ ತುಂಬಾ ನಿಧಾನವಾಗಿ ಇರುತ್ತದೆ.

ನೀವು ನಿಮ್ಮ ಮೊಬೈಲ್ ಬ್ರಾಂಡ್ ನ ಚಾರ್ಜರ್ ಮಾತ್ರ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದರೆ, ಖರೀದಿ ಮಾಡುವ ಸಂದರ್ಭದಲ್ಲಿ ಆ ಬ್ರಾಂಡ್ ನ ಹೆಸರು ಸರಿಯಾಗಿ ಬರೆದಿದೆಯಾ ಎಂದು ನೋಡಿಕೊಳ್ಳಿ. ಡೂಪ್ಲಿಕೇಟ್ ಚಾರ್ಜರ್ ಆಗಿದ್ದರೆ ಆ ಚಾರ್ಜರ್ ಬ್ರಾಂಡ್ ಹೆಸರಿನಲ್ಲಿ ಸ್ವಲ್ಪ ಬದಲಾವಣೆ ಇರುತ್ತದೆ. ಹಾಗೆನೆ ಅಸಲಿ ಕಂಪೆನಿ ರೀತಿ ಕಾಣಲು font style ಬದಲಾವಣೆ ಮಾಡಿರುತ್ತಾರೆ. ಹಾಗೆನೇ ನೀವು ಖರೀದಿ ಮಾಡುವ ಮುನ್ನ ಅದನ್ನು ತೆರೆದು ಅಲ್ಲಿಯೇ ಚಾರ್ಜ್ ಮಾಡುವ ಮೂಲಕ ಚಾರ್ಜರ್ ಕೆಲಸ ಮಾಡುತ್ತದೆಯೋ ಇಲ್ಲವೋ ಎಂದು ಪರಿಶೀಲಮಾಡಿಕೊಳ್ಳಿ. ಒಂದು ವೇಳೆ‌ ಚಾರ್ಜಿಂಗ್ ಸ್ಪೀಡ್ ಕಡಿಮೆ‌ ಇದ್ದರೆ ಅದು ನಕಲಿ ಚಾರ್ಜರ್ ಆಗಿರುತ್ತದೆ ಎಂದು ನಮಗೆ ಸುಲಭವಾಗಿ ಗೊತ್ತಾಗುತ್ತದೆ.

ನಕಲಿ ಚಾರ್ಜರ್ ಮಾಡುವವರು ಅಸಲಿ ಚಾರ್ಜರ್ ನ ರೀತಿಯೇ ಡಿಸೈನ್ ಮಾಡಿರುತ್ತಾರೆ. ಆದರೆ ಸ್ವಲ್ಪ ಬದಲಾವಣೆ ಮಾಡಿಯೇ ಇರುತ್ತಾರೆ. ಹಾಗಾಗಿ ನೀವು ಹೊಸ ಚಾರ್ಜರ್ ಖರೀದಿ ಮಾಡಲು ಹೋಗುವಾಗ ನಿಮ್ಮ ಹಳೆಯ ಚಾರ್ಜರ್ ಕೂಡ ತೆಗೆದುಕೊಂಡು ಹೋಗಿ. ಅಲ್ಲಿ ಹೋಗಿ ಎರಡಕ್ಕೂ ಹೋಲಿಕೆ ಮಾಡಿ. ಡಿಸೈನ್ ನಲ್ಲಿ ವ್ಯತ್ಯಾಸ ಕಂಡು ಬಂದರೆ‌ ಅದು ನಕಲಿ ಚಾರ್ಜರ್ ಆಗಿರುತ್ತದೆ. ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ನಿಮ್ಮ ಗೆಳೆಯ ಗೆಳತಿಯರಲ್ಲೂ ಹಂಚಿಕೊಳ್ಳಿ.

Leave A Reply

Your email address will not be published.