Elon Musk: ಮನೆಗೆ ಹೋಗದೇ ಕಷ್ಟಪಟ್ಟು ದುಡಿದರೂ ಕ್ಯಾರೇ ಅನ್ನದೇ ಕೆಲಸದಿಂದ ತೆಗೆದ ಎಲಾನ್ ಮಸ್ಕ್.

187

ಎಲಾನ್ ಮಸ್ಕ್ (Elon Musk) ವಿಶ್ವದ ಶ್ರೀಮಂತ ಪಟ್ಟಿಯಲ್ಲಿ (World Richest Person) ಮೊದಲ ಸ್ಥಾನದಲ್ಲಿರುವ ವ್ಯಕ್ತಿ. ಏನೇ ಇರಲಿ ಇಲ್ಲದೇ ಇರಲಿ ಸದಾ ಸುದ್ದಿಯಲ್ಲಿರುತ್ತಾರೆ ಮಸ್ಕ್. ಅಮೇರಿಕಾದಲ್ಲಿ ಸ್ಪೇಸ್ ಎಕ್ಸ್ (Space X), ಟೆಸ್ಲಾ (tesla) ದಂತಹ ದೊಡ್ಡ ದೊಡ್ಡ ಉದ್ಯಮಗಳ‌ ಮಾಲಿಕರಾದ ಎಲಾನ್, ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ ಟ್ವಿಟರ್ (twitter) ಅನ್ನು ಕೂಡಾ ಖರೀದಿ ಮಾಡಿದ್ದರು.

ಕಂಪೆನಿ ತನ್ನ ತೆಕ್ಕೆಗೆ ಪಡೆದ ಕೂಡಲೇ ಸಾವಿರಾರು ಟ್ವಿಟರ್ ಕೆಲಸಗಾರರನ್ನು ಎಲ್ಲಾ ಕಡೆಯಿಂದ ತೆಗೆದು ಹಾಕಿದ್ದು ಬಹುದೊಡ್ಡ ಸುದ್ದಿಯಾಗಿತ್ತು. ಹಾಗೇನೆ ಈ ಕೆಲಸಗಾರರು ನ್ಯಾಯಾಲಯಕ್ಕೂ ಹೋಗಿದ್ದರು. ಕೆಲಸ ಕಳೆದುಕೊಳ್ಳದೇ ಇನ್ನೂ ಕಂಪನಿಯಲ್ಲಿದ್ದ ಅನೇಕರು ತಮ್ಮನ್ನು ಯಾವಾಗ ತೆಗೆಯುತ್ತಾರೋ ಎನ್ನುವ ಹೆದರಿಕೆಲ್ಲಿ ಬಕಪಕ್ಷಿಯಂತೆ ಕಾಯುತ್ತಿದ್ದರು.

ಕಳೆದ ವಾರ ಎಲಾನ್ ಮಸ್ಕ್ ಇಡೀ ಪ್ರಾಜೆಕ್ಟ್ ತಂಡವನ್ನು ಟ್ವಿಟರ್ ಕಂಪೆನಿಯಿಂದ ವಜಾ ಮಾಡಿದೆ. ಇದರಲ್ಲಿ ದೊಡ್ಡ ಸುದ್ದಿಯಾಗಿದ್ದು ಎಸ್ತಾರ್ ಕ್ಲಾಪೋರ್ಡ್ (Esther Crawford) ಎನ್ನುವ ಮಹಿಳೆ. ಟ್ವಿಟರ್ ಪೇಮೆಂಟ್ ಎನ್ನುವ ಹೊಸ ಪೀಚರ್ ನ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದ ಈಕೆ ಮನೆಗೂ ಹೋಗದೇ ಕಛೇರಿಯಲ್ಲಿಯೇ ಕೆಲಸ ಮಾಡುತ್ತಿದ್ದರು. ಇವರು ಕಂಪೆನಿಯಲ್ಲಿ ಮಲಗಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೂರಲ್ ಕೂಡಾ ಆಗಿತ್ತು.

ಇದೀಗ ಕಂಪೆನಿ ಅಭಿವೃದ್ಧಿಗೋಸ್ಕರ ಮನೆಗೂ ಹೋಗದೇ, ಕಚೇರಿಯಲ್ಲಿಯೇ ಇದ್ದು ಕಷ್ಟ ಪಟ್ಟು ಕೆಲಸ ಮಾಡಿದರೂ ಕೂಡಾ ಎಲಾನ್ ಮಸ್ಕ್ ಯಾವ ಕಾರಣಕ್ಕೆ ಇವರನ್ನು ತೆಗೆದಿದ್ದಾರೆ ಎನ್ನುವುದು ಇಲ್ಲಿಯವರೆಗೂ ಗೊತ್ತಾಗಿಲ್ಲ. ಹಾಗೇನೆ ಮಸ್ಕ್ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಬೈಗಳಗಳ ಸುರಿಮಳೆ ಬರುತ್ತಿದ್ದು. ಕೆಲಸ ಮಾಡುವ ಮಹಿಳೆಗೆ ಜನರು ಸಾಂತ್ವಾನ ನೀಡುತ್ತಿದ್ದಾರೆ. ಇನ್ನು ಎಷ್ಟು ಜನರನ್ನು ಕೆಲಸದಿಂದ ತೆಗೆದು ಹಾಕುತ್ತಾರೆ ಎನ್ನುವುದು ಕೇವಲ ಎಲಾನ್ ಮಸ್ಕ್ ಗೇ ಗೊತ್ತು.

Leave A Reply

Your email address will not be published.