Farming: ಮನೆ ಮಳಿಗೆಯಲ್ಲಿ ಕೃಷಿ ಮಾಡುವ ಮೂಲಕ ತಿಂಗಳಿಗೆ 60 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ ಈ ಮಹಿಳೆ.
ಆಫೀಸ್ ಕೆಲಸ ಬೇಕು ಅಂತ ಪ್ರತಿ ದಿನ 12 ಗಂಟೆ ಕಂಪ್ಯೂಟರ್ ಮುಂದೆ ಕೆಲಸ ಮಾಡುವವರ ಮದ್ಯೆ, ಕೃಷಿಯನ್ನು ನೆಚ್ಚಿಕೊಂಡು ಮನೆ ಟಾರಸ್ ಮೇಲೆಯೇ ಕೃಷಿ ಮಾಡಿ ಹಣ ಗಳಿಸುವ ಜನರು ಬಹಳ ಕಡಿಮೆ. ಇಂತಹ ಜನರು ಇನ್ನೊಬ್ಬರಿಗೆ ಸ್ಫೂರ್ತಿ ಆಗುತ್ತಾರೆ ಹಾಗೇನೇ ಇವರು ಇನ್ನೊಬ್ಬರಿಗೆ ಹೇಗೆ ಸ್ವಾವಲಂಬಿಯಾಗಿ ಬದುಕಬಹುದು ಎನ್ನುವ ಪಾಠ ಕೂಡ ಮಾಡುತ್ತಾರೆ.
ರೇಮಾದೇವಿ ಎನ್ನುವ ಮಹಿಳೆ ಕೇರಳದಲ್ಲಿ ಇರುವಾಗ ತಮ್ಮ ಮನೆಯ ತೋಟದಲ್ಲಿ ಸಾವಯವ ಕೃಷಿ ಮಾಡುತ್ತಿದ್ದರು. ಇವರ ಗುರಿಯಾಗಿದ್ದು ದೈನಂದಿನ ಅಗತ್ಯ ತರಕಾರಿಗಳನ್ನ ಬೆಳೆಯುವುದು. ಆದರೆ ಇದು ಇತ್ತೀಚಿಗೆ ಹವ್ಯಾಸವಾಗಿ ಈ ಕೃಷಿ ಮೂಲಕ ಆಧಾಯ ಗಳಿಸುವ ಮಾರ್ಗ ಕೂಡ ಕಂಡುಹಿಡಿದಿದ್ದಾರೆ. ಇಂದು ಈ ಮಹಿಳೆ ತಮ್ಮ ಮನೆಯಲ್ಲಿಯೇ ತರಕಾರಿ ಅಲ್ಲದೆ ಬೇಳೆ ಕಾಳು ಗಳನ್ನೂ ಕೂಡ ಬೆಳೆಯುತ್ತಿದ್ದಾರೆ.
ಚಿಕ್ಕಂದಿನಲ್ಲಿ ತಮ್ಮ ಅಜ್ಜಿ ಜೊತೆ ತೋಟಗಾರಿಕೆ ಮಾಡುತ್ತಿದ್ದರು ಈ ರೇಮಾದೇವಿ. ಇವರು ಹಾಗು ಇವರ ತಂಗಿ ಬಾಲ್ಯದಲ್ಲಿ ಅಜ್ಜಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಅವರ ತೋಟಗಾರಿಕೆ ಯಾ ಪ್ರಭಾವದಿಂದ ಇಂದು ಇವರು ಕೂಡ ಸಾವಯವ ಕೃಷಿ ಮಾಡುತ್ತಿದ್ದಾರೆ. ಕಳೆದ 20 ವರ್ಷಗಳಿಂದ ಮನೆಯ ಮಳಿಗೆ ಮೇಲೆ ಕೃಷಿ ಮಾಡುತ್ತಿದ್ದು, ತರಕಾರಿ ಹಾಗು ಹಣ್ಣಿನ ಕೃಷಿ ಮಾಡುತ್ತಿದ್ದಾರೆ.
ಈ ಜ್ಞಾನವನ್ನು ಜನಸಾಮಾನ್ಯರ ಬಳಿ ಕೊಂಡು ಹೋಗಲು ಒಂದು ಯೌಟ್ಯೂಬ್ ಚಾನೆಲ್ ಕೂಡ ತೆರೆದು ಹೇಗೆ ಕೃಷಿ ಮಾಡಬೇಕು ಎಂದು ಕೂಡ ಹೇಳಿ ಕೊಡುತ್ತಾರೆ. ಅಲ್ಲದೆ ತರಕಾರಿ ಕಾಳುಗಳನ್ನು ಸಂಗ್ರಹಿಸಿ ಜನರಿಗೆ ತಲ್ಪಿಸುವ ವ್ಯವಸ್ಥೆ ಕೂಡ ಮಾಡುತ್ತಾರೆ. 56 ವರ್ಷದ ರೇಮಾದೇವಿ ಟೆರೇಸ್ ಗಾರ್ಡನಿಂಗ್ ಅನ್ನು ಸುಸ್ಥಿರ ವಿಧಾನದಲ್ಲಿ ನಡೆಸುತ್ತಿದ್ದಾರೆ. ಅತಿ ಕಡಿಮೆ ವೆಚ್ಚದಲ್ಲಿ ಅಧಿಕ ಆಧಾಯ ಗಳಿಸಬಹುದು ಎಂದು ಇವರು ನಂಬಿದ್ದಾರೆ.
ರೆಮ್ಯಾ ಸಸ್ಯಶಾಸ್ತ್ರದಲ್ಲಿ ಮೇಜರ್ ಆಗಿದ್ದರು. ಇವರು ಕೃಷಿ ಹಾಗು ತೋಟಗಾರಿಕೆಯಲ್ಲಿ ಬಹಳ ಆಸಕ್ತಿ ಹೊಂದಿದ್ದರು. ಮಾರುಕಟ್ಟೆಯಿಂದ ತರಕಾರಿ ತಂದದ್ರಲ್ಲಿ ಇವರಿಗೆ ರಾಸಾಯನಿಕ ವಾಸನೆ ಬರತೊಡಗಿತು. ಮಕ್ಕಳಿಗೆ ಇಂತಹ ಆಹಾರ ಕೊಡಬಾರದು ಎನ್ನುವ ಯೋಚನೆ ಮಾಡಿ ಮನೆಯಲ್ಲಿಯೇ ತರಕಾರಿ ಬೆಳೆಯಲು ಪ್ರಾರಂಭ ಮಾಡಿದರು.
ತರಕಾರಿ ಬೀಜಗಳನ್ನು ಇಂದು ಆನ್ಲೈನ್ ಮೂಲಕ ಜನರಿಗೆ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಪ್ಯಾಕೆಟ್ ಬೆಲೆ 25 ರಿಂದ 40 ರೂಪಾಯಿಗಳ ವರೆಗೆ ಇದೆ. ಸದ್ಯ ಈ ಸೀಡ್ಸ್ ವ್ಯಾಪಾರದಿಂದ ತಿಂಗಳಿಗೆ 60 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಇದರ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಹಾಗು ಈ ಬೀಜಗಳ ಖರೀದಿಗೆ ಇವರ ಮೊಬೈಲ್ ನಂಬರ್ 79077 87439 ಸಮರ್ಕ ಮಾಡಬಹುದಾಗಿದೆ. – ಭಾವನಾ ಶ್ರೀವಾಸ್ತವ.