ವರ್ಲ್ಡ್ ಟೆಸ್ಟ್ ಚಾಂಪಿಯನ್ ಶಿಪ್ ರೇಸ್ ಮತ್ತಷ್ಟು ರೋಮಾಂಚನಕಾರಿಯಾಗಿದೆ. ಫೈನಲ್ ಆಡಬೇಕೆಂದರೆ ಭಾರತ ಈ ಸಣ್ಣ ಕೆಲಸ ಮಾಡಿದರೆ ಸಾಕು.
ಭಾರತ ಹಾಗು ಆಸ್ಟ್ರೇಲಿಯಾ ನಡುವಿನ ನಾಲ್ಕು ಟೆಸ್ಟ್ ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿಯ ಎರಡನೇ ಪಂದ್ಯವನ್ನು ಭಾರತ ತಂಡ ಗೆದ್ದಿದೆ. ದೆಹಲಿಯಲ್ಲಿ ನಡೆದ ಈ ಪಂದ್ಯದಲ್ಲಿ ಭಾರತದ ಪರ ರವೀಂದ್ರ ಜಡೇಜಾ ಅದ್ಬುತ ಸಾಧನೆ ಮಾಡಿದ್ದಾರೆ. ಎರಡು ಇನ್ನಿಂಗ್ ಅಲ್ಲಿ ಒಟ್ಟು ಹತ್ತು ವಿಕೆಟ್ ಕಬಳಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಇಲ್ಲಿಯವರೆಗೆ ಆಡಿದ ಎರಡು ಟೆಸ್ಟ್ ಸರಣಿಯ ವಿಶೇಷ ಎಂದರೆ, 3 ದಿನಗಳಲ್ಲಿ ಟೀಮ್ ಇಂಡಿಯಾ ಎರಡು ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿದೆ. ಇದೀಗ ನಾಲ್ಕು ಟೆಸ್ಟ್ ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಇದೀಗ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ತನ್ನ ಸ್ಥಾನ ಭದ್ರಪಡಿಸುವ ಹಕ್ಕನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಲುಪಲು ಭಾರತ ತಂಡಕ್ಕೆ ಒಂದು ಗೆಲುವಿನ ಅಗತ್ಯವಿದೆ. ಭಾರತ 2021 ಹಾಗು 2023 ರ ಸೀಸನ್ ನಡುವೆ ಒಟ್ಟು 16 ಟೆಸ್ಟ್ ಪಂದ್ಯಗಳನ್ನಾಡಿವೆ. ಇವುಗಳಲ್ಲಿ 10 ಪಂದ್ಯಗಳನ್ನು ಗೆದ್ದಿವೆ. ನಾಲ್ಕರಲ್ಲಿ ಸೋಲನ್ನು ಕಂಡಿದೆ. ಎರಡು ಪಂದ್ಯಗಳಲ್ಲಿ ಡ್ರಾ ಮಾಡಿಕೊಂಡಿದೆ. ಭಾರತದ ಗೆಲುವಿನ ಶೇಕಡಾವಾರು ೬೧.೬೬ ರಿಂದ ೬೪.೦೬ ಕ್ಕೆ ಏರಿದೆ. ಹಾಗೇನೇ ಆಸ್ಟ್ರೇಲಿಯಾದ ಗೆಲುವಿನ ಶೇಕಡಾವಾರು ೭೦.೮೩ ರಿಂದ ೬೬.೬೬ ಕ್ಕೆ ಇಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಒಂದು ಗೆಲುವು ಭಾರತವನ್ನು ಫೈನಲ್ ಗೆ ಕೊಂಡುಹೋಗುತ್ತದೆ.
ಭಾರತ ಆಸ್ಟ್ರೇಲಿಯಾದ ವಿರುದ್ಧ ೩-೧ ರ ಅಂತರದಲ್ಲಿ ಗೆದ್ದರೆ ಫೈನಲ್ ತಲುಪುವುದು ಖಚಿತ. ಮತ್ತೊಂದೆಡೆ ನ್ಯೂಜಿಲ್ಯಾಂಡ್ ಹಾಗು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿ ಕೂಡ ಬಹಳ ಮುಖ್ಯವಾಗಿದೆ. ಶ್ರೀಲಂಕಾ ನ್ಯೂಜಿಲ್ಯಾಂಡ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದರೆ ಭಾರತ ಹಾಗು ಶ್ರೀಲಂಕಾ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಆಡಲಿದೆ. ಒಂದು ವೇಳೆ ಭಾರತ ಆಸ್ಟ್ರೇಲಿಯಾದ ಜೊತೆ ೨-೨ ರಲ್ಲಿ ಸರಣಿ ಸಮಬಲ ಮಾಡಿಕೊಂಡರೆ ಭಾರತ ಫೈನಲ್ ತಲುಪಲು ಕಷ್ಟವಿದೆ.
ಆಸ್ಟ್ರೇಲಿಯಾದ ಜೊತೆ ಸಮಬಲ ವಾದರೆ ಭಾರತ ದಕ್ಷಿಣ ಆಫ್ರಿಕಕ್ಕಿಂತ ಮೇಲಿನ ಸ್ಥಾನದಲ್ಲಿ ಇರಲಿದೆ. ಹಾಗೇನೇ ಶ್ರೀಲಂಕಾ ನ್ಯೂಜಿಲ್ಯಾಂಡ್ ವಿರುದ್ಧ ಸೋಲಲೇಬೇಕಾಗಿದೆ. ಇಲ್ಲವಾದರೆ ಭಾರತ ಫೈನಲ್ ತಲುಪುವುದಿಲ್ಲ. ಹಾಗೇನೇ ಭಾರತ ಇನ್ನು ಒಂದು ಪಂದ್ಯ ಗೆದ್ದರು ಕೂಡ ಫೈನಲ್ ತಲುಪಬಹುದು. ಇನ್ನು ಮುಂದಿನ ಪಂದ್ಯ ೧ ಮಾರ್ಚ್ ಇಂದ ೫ ಮಾರ್ಚ್ ನಡುವೆ ನಡೆಯಲಿದೆ. ಆಸ್ಟ್ರೇಲಿಯಾಗೆ ಮಾಡು ಇಲ್ಲವೇ ಮಾಡಿ ಪಂದ್ಯವಾದರೆ, ಭಾರತಕ್ಕೆ ಈ ಪಂದ್ಯ ಗೆದ್ದರೆ ಸುಲಭವಾಗಿ ಫೈನಲ್ ಗೆ ತಲುಪಬಹುದು.