ಭಾರತದ ಮೊದಲ ರೈಲು ಪ್ರಾರಂಭವಾಗಿದ್ದು ಈ ಸ್ಟೇಷನ್ ಇಂದ. ಮೊದಲ ರೈಲಲ್ಲಿ ಪ್ರಯಾಣಿಸಿದ ಜನರೆಷ್ಟು ಗೊತ್ತೇ? ತಪ್ಪದೆ ಈ ಇತಿಹಾಸ ಓದಿ.
ಭಾರತೀಯ ರೈಲ್ವೆ ವಿಶ್ವದ ಅತಿದೊಡ್ಡ ರೈಲ್ವೆ ಜಾಲಗಳಲ್ಲಿ ಒಂದಾಗಿದೆ. ಭಾರತೀಯ ರೈಲ್ವೆ ನಲ್ಲಿ ಪ್ರತಿದಿನ 25 ದಶಲಕ್ಷಕ್ಕೂ ಹೆಚ್ಚು ಜನರು ಪ್ರಯಾಣ ಮಾಡುತ್ತಾರೆ. ಜನರಿಗೆ ಈ ಪ್ರಯಾಣ ತುಂಬಾ ಆರಾಮದಾಯಕ ಹಾಗು ಕಡಿಮೆ ವೆಚ್ಚದಾಗಿರುತ್ತದೆ. ದೇಶದ ಬಹುಪಾಲು ಜನರು ಹತ್ತಿರವಿರಲಿ ದೂರವೇ ಸ್ಥಳ ಇರಲಿ, ಹೆಚ್ಚಾಗಿ ಬಳಸುವುದು ರೈಲನ್ನೇ.
ಇಂದಿನ ಕಾಲದಲ್ಲಿ ಸರಕಾರ ರೈಲ್ವೆ ಇಲಾಖೆಗೆ ಮತ್ತಷ್ಟು ಹಣ ನೀಡುತ್ತಾ, ರೈಲ್ವೆ ಅನ್ನು ಡಿಜಿಟಲೀಕರಣ ಮಾಡುವತ್ತ ಚಿಂತನೆ ನಡೆಸುತ್ತಿದೆ. ಇದರಿಂದ ಸಾರ್ವಜನಿಕರು ಹೆಚ್ಚು ಸೌಲಭ್ಯ ಪಡೆಯಬಹುದು ಎನ್ನುವುದು ಇದರ ಹಿಂದಿನ ಉದ್ದೇಶ. ಭಾರತೀಯ ರೈಲ್ವೆ 1845 ರಲ್ಲಿ ಪ್ರಾರಂಭವಾಯಿತು. ಇಂದಿನ ಲೇಖನದಲ್ಲಿ ಭಾರತದ ರೈಲ್ವೆ ಮೊದಲಿಗೆ ಎಲ್ಲಿಂದ ಪ್ರಾರಂಭವಾಯಿತು ಎನ್ನುವುದನ್ನು ನಿಮಗೆ ತಿಳಿಸಲಿದ್ದೇವೆ. ಪೂರ್ತಿ ಮಾಹಿತಿ ಓದಿ.
ವಿಶ್ವದ ಅತಿ ದೊಡ್ಡ ರೈಲ್ವೆ ಜಾಲತಾಣ ಭಾರತವಾಗಿದೆ. ದೇಶದ ಮೊದಲ ರೈಲ್ವೆ ಕಾರ್ಯಾಚರಣೆ ಯಾವಾಗ ಮತ್ತು ಎಲ್ಲಿಂದ ಎನ್ನುವ ಕುರಿತು ಮಾತಾಡಿದರೆ, ಮೊದಲ ರೈಲ್ವೆ ಕಾರ್ಯಾಚರಣೆ 25 ಕಿಲೋಮೀಟರು ನದ್ದಾಗಿತ್ತು. 1837 ರಲ್ಲಿ ಚಿಂತಾದ್ರಿವೇಟ್ ತನಕ ಓಡಿಸಲಾಯಿತು. ಇದರ ಪೂರ್ಣ ಶ್ರೇಯ ಸರ್ ಅರ್ಥರ್ ಕಾಟನ್ ಅವರಿಗೆ ಸಲ್ಲಬೇಕು. ಆದರೆ ಭಾರತೀಯ ರೈಲ್ವೆ ಸಾರ್ವಜನಿಕರಿಗೆ ಮೊದಲ ಬಾರಿಗೆ 1853 ರ ಏಪ್ರಿಲ್ 16 ರಂದು ಬಾರಿ ಬಂದರು ಸ್ಟೇಷನ್ ನ ಮುಂಬೈ ನಿಂದ ಠಾಣೆ ಗೆ ಓಡಿಸಲಾಯಿತು. ಈ ರೈಲ್ ಅಲ್ಲಿ ಸುಮಾರು 400 ರಷ್ಟು ಪ್ರಯಾಣಿಕರಿದ್ದರು.
ಭಾರತದ ಮೊದಲ ರೈಲ್ವೆ ಸ್ಟೇಷನ್ ಮುಂಬೈ ನ ಬಾರಿ ಬಂದರ್. 1888 ರಲ್ಲಿ ಈ ನಿಲ್ದಾಣದ ಹೆಸರನ್ನು ಬದಲಾಯಿಸಿ ವಿಕ್ಟೋರಿಯಾ ಟರ್ಮಿನಸ್ ಎಂದು ಬದಲಾಯಿಸಲಾಯಿತು. ಇನ್ನು ಮೊದಲ ರೈಲ್ವೆ ಹಳಿ 56 ಕಿಲೋ ಮೀಟರ್ ವರೆಗೆ ಮಾಡಲಾಯಿತು. ಇದನ್ನು ಆಗಸ್ಟ್ 21 1847 ರಂದು ಪ್ರಾರಂಬಿಸಲಯಿತು. ಇದನ್ನು ಜೇಮ್ಸ್ ಜಾನ್ ವರ್ಕ್ಲಿ ಪ್ರಾರಂಭಿಸಿದರು. 1853 ರಲ್ಲಿ ಈ ಹಳಿಯಲ್ಲಿ ಮೊದಲ ಪ್ರಯಾಣಿಕ ರೈಲು ಓಡಿಸಲಾಯಿತು. ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ಶೇರ್ ಮಾಡಿ ಬೆಂಬಲಿಸಿ.