Knowledge: ಗ್ಯಾಸ್ ಸಿಲಿಂಡರ್ ನಲ್ಲಿ ಕೆಳಗಡೆ ಈ ರಂಧ್ರಗಳನ್ನು ಯಾಕೆ ಮಾಡಲಾಗುತ್ತದೆ? ಇದರ ಹಿಂದಿನ ಕಾರಣವೇನು ಗೊತ್ತೇ? ಇಲ್ಲಿದೆ ಇಂಟೆರೆಸ್ಟಿಂಗ್ ಮಾಹಿತಿ.
(Gas) ಗ್ಯಾಸ್ ಸಿಲಿಂಡರ್ ಇಂದು ಎಲ್ಲರ ಮನೆಯಲ್ಲೂ ಬಳಸುವ, ಹಾಗು ದೈನಂದಿನ ಜೀವನಕ್ಕೆ ಅಗತ್ಯವಿರುವ ಸಾಧನ. ನೀವು ಈ ಸಿಲಿಂಡರ್ ನೋಡಿದರೆ ಕೆಳಗಿನ ಭಾಗದಲ್ಲಿ ರಂದ್ರಗಳು ಇರುತ್ತದೆ. ಇವುಗಳನ್ನು ಯಾಕೆ ಮಾಡಲಾಗುತ್ತದೆ ಎನ್ನುವ ಕುತೂಹಲ ನಿಮಗೂ ಮೂಡಿರಬಹುದು. ಇದನ್ನು ಭದ್ರತೆ ದೃಷ್ಟಿಕೋನದದಿಂದ ಮಾಡಲಾಗುತ್ತದೆ. ಇದರ ಹಿಂದಿನ ಕಾರಣವನ್ನು ನಾವು ಇಂದು ನಿಮಗೆ ತಿಳಿಸುತ್ತೇವೆ.
ಈ ಮೇಲೆ ಹೇಳಿದಂತೆ ಭದ್ರತೆ ದೃಷ್ಟಿಯಿಂದ ಈ ರಂಧ್ರಗಳನ್ನು ಮಾಡಲಾಗುತ್ತದೆ. ಕೆಲವೊಮ್ಮೆ ತಾಪಮಾನ ಏರಿಕೆ ಆಗುತ್ತದೆ. ಆಗ ಗಾಳಿ ಈ ರಂಧ್ರಗಳ ಮೂಲಕ ಹಾದು ಹೋಗುವುದರ ಮೂಲಕ ಬಿಸಿ ಏರಿಕೆಯನ್ನು ತಡೆಗಟ್ಟುತ್ತದೆ. ಈ ರಂದ್ರಗಳು ಕೆಳಗಡೆ ಇಲ್ಲದೆ ಇದ್ದರೆ, ಸಿಲಿಂಡರ್ ಕೆಳಗಡೆ ತೇವಾಂಶ ಕೂಡಿ, ಸಿಲಿಂಡರ್ ತುಕ್ಕು ಹಿಡಿಯುತ್ತದೆ. ಇದರಿಂದ ಸಿಲಿಂಡರ್ ಸೋರಿಕೆ ಆಗಬಹುದು. ತೇವಾಂಶ ತಡೆಯಲು ಹಾಗು ತಾಪಮಾನ ನಿಯಂತ್ರಿಸಲು ಈ ರಂದ್ರ ಅತ್ಯವಶ್ಯಕ.
ಸಿಲಿಂಡರ್ ತಯಾರಿಕೆಯಲ್ಲಿ ಅತ್ಯಂತ ಹೆಚ್ಚು ನಿಗಾ ವಹಿಸಲಾಗುತ್ತದೆ. ಇದನ್ನು ವಾಸನೆಯಿಲ್ಲದ ಅನಿಲ ಎಂದು ಹೇಳಲಾಗುತ್ತದೆ. ಇದು ಹೆಚ್ಚು ದಹಿಸಬಲ್ಲುದು. ಆಗ ಇದರ ವಾಸನೆ ಬರುವುದಿಲ್ಲ. ಇದರ ಸೋರಿಕೆ ಹೆಚ್ಚು ಅಪಾಯಕಾರಿ. ಅದಕ್ಕೆ ಇದರ ಸೋರಿಕೆ ಕಂಡು ಹಿಡಿಯಲು ಇದಕ್ಕೆ ಈತೈಲ್ ಮಾರ್ಕಪ್ಟ್ಯಾನ್ ಎನ್ನುವ ರಾಸಾಯನಿಕ ಸೇರಿಸಲಾಗುತ್ತದೆ. ಇದರ ಮುಕಾಂತರ ಸೋರಿಕೆ ಆಗುವಾಗ ಇದರ ವಾಸನೆ ತಿಳಿದುಕೊಳ್ಳಬಹುದು. ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಶೇರ್ ಮಾಡಿ, ನಿಮ್ಮ ಗೆಳೆಯರ ಬಳಿ ಹಂಚಿಕೊಳ್ಳಿ.