ಈ ಬೇರೆ ಬೇರೆ ಬಣ್ಣಗಳ ಹೆಲ್ಮೆಟ್ ಯಾಕೆ ಮಾಡಲಾಗುತ್ತದೆ? ಈ ಬಣ್ಣಗಳ ಹಿಂದಿನ ಕಾರಣವೇನು? ಇಲ್ಲಿದೆ ಇಂಟೆರೆಸ್ಟಿಂಗ್ ಮಾಹಿತಿ.
ಕೆಲವು ಜಾಗಗಳಲ್ಲಿ ನೀವು ಬೇರೆ ಬೇರೆ ಬಣ್ಣಗಳ ಹೆಲ್ಮೆಟ್ ಅನ್ನು ಜನರು ಧರಿಸುವುದನ್ನು ನೋಡಿರುತ್ತೀರಾ. ಹೆಲ್ಮೆಟ್ ಹಾಕುವುದರ ಮುಖ್ಯ ಉದ್ದೇಶ ಸುರಕ್ಷತೆ. ಜನರ ತಲೆ ಸುರಕ್ಷಿತವಾಗಿಡಲು. ಒಂದು ವೇಳೆ ಏನಾದರು ಬಿದ್ದರೆ ಜಾಸ್ತಿ ಗಾಯಗಳು ಆಗದೆ ಇರುವುದಕ್ಕೆ. ಆದರೆ ಈ ಬೇರೆ ಬೇರೆ ಬಣ್ಣದ ಹೆಲ್ಮೆಟ್ ಯಾಕೆ ಜನರು ಹಾಕಿಕೊಳ್ಳುತ್ತಾರೆ. ಇದು ಫ್ಯಾಷನ್ ಗೋಸ್ಕರನೂ ಅಥವಾ ಅದರ ಹಿಂದೆ ಏನಾದರು ಕಾರಣ ಇದೆಯೋ? ಇಲ್ಲಿದೆ ಅದರ ಮಾಹಿತಿ.
ಬಿಳಿ ಹೆಲ್ಮೆಟ್: ಯಾವುದೇ ಜಗದಲ್ಲಿ ಕಟ್ಟಡ ಕಟ್ಟುತಿದೆಯೋ ಅಲ್ಲಿ ಈ ಬಿಳಿ ಬಣ್ಣದ ಹೆಲ್ಮೆಟ್ ಧರಿಸಲಾಗುತ್ತದೆ. ಅದರಲ್ಲೂ ಈ ವೈಟ್ ಹೆಲ್ಮೆಟ್ ಸೂಪೇರ್ವೈಸರ್, ಮ್ಯಾನೇಜರ್ ಗಳು ಅಲ್ಲಿ ಹಾಕಿರುತ್ತಾರೆ. ಈ ಹೆಲ್ಮೆಟ್ ಧರಿಸುವ ವ್ಯಕ್ತಿಗಳ ಅಡಿಯಲ್ಲಿ ಬೇರೆ ಕೆಲಸಗಾರರ ಜವಾಬ್ದಾರಿ ಇರುತ್ತದೆ. ಅವರ ಸುರಕ್ಷೆತೆ ಇವರ ಕೈಯಲ್ಲಿದೆ. ಬೇಸಿಗೆ ಕಾಲದಲ್ಲಿ ಈ ಹೆಲ್ಮೆಟ್ ಹಾಕುವುದರಿಂದ ಸೂಪ್ರವೈಸರ್ ತಲೆ ಶಾಂತವಾಗಿರುತ್ತದೆ, ಉತ್ತಮವಾಗಿ ಪ್ಲಾನಿಂಗ್ ಮಾಡಲು ಸಹಕಾರಿ ಅದಕ್ಕೆ ಈ ಹೆಲ್ಮೆಟ್ ಧರಿಸುತ್ತಾರೆ ಎನ್ನುವ ಕಾರಣ ಕೂಡ ಅನೇಕರು ಹೇಳುತ್ತಾರೆ.
ಹಳದಿ ಹೆಲ್ಮೆಟ್: ಕನ್ಸ್ಟ್ರಕ್ಷನ್ ಕೆಲ್ಸದಲ್ಲಿ ಎಷ್ಟೆಲ್ಲ ದಿನಕೂಲಿ ನೌಕರರು ಇದ್ದರೋ ಅವರೆಲ್ಲ ಈ ಹಳದಿ ಬಣ್ಣದ ಹೆಲ್ಮೆಟ್ ಧಾರಣೆ ಮಾಡುತ್ತಾರೆ. ಈ ಹೆಲ್ಮೆಟ್ ಧರಿಸಿದವರ ಕೆಲಸ ದೊಡ್ಡ ಗಾತ್ರದ ಮಷೀನ್ ಕೆಲಸ ನಡೆಸುವುದು, ಗುಂಡಿ ತೊಡುವುದು ಹಾಗು ಕಠಿಣ ಕೆಲಸದಾಗ್ಗಿರುತ್ತದೆ. ಈ ಹೆಲ್ಮೆಟ್ ಧರಿಸಿದವರನ್ನು ನೋಡಿದ ಕೂಡಲೇ ಗೊತ್ತಾಗುತ್ತದೆ ಕಟ್ಟಡ ನಿರ್ಮಾಣ ಕೆಲಸಗಾರರು ಎನ್ನುವುದು.
ಹಸಿರು ಹೆಲ್ಮೆಟ್: ಈ ಹಸಿರು ಹೆಲ್ಮೆಟ್ ಅನ್ನು ಕನ್ಸ್ಟ್ರಕ್ಷನ್ ಜಗದಲ್ಲಿ ಇನ್ಸ್ಪೆಕ್ಷನ್ ಅಥವಾ ಪರೀಕ್ಷೆ ಮಾಡುವ ಆಫೀಸರ್ ಗೆ ನೀಡಲಾಗುವ ಹೆಲ್ಮೆಟ್ ಆಗಿದೆ. ಹಾಗೇನೇ ಈ ಬಣ್ಣದ ಹೆಲ್ಮೆಟ್ ಹೊಸದಾಗಿ ಸೇರಿರುವ ಕೆಲಸಗಾರ ಅಥವಾ ಪ್ರೊಬೇಷನರಿ ಆಫೀಸರ್ ಗೆ ಈ ಹೆಲ್ಮೆಟ್ ನೀಡಲಾಗುತ್ತದೆ. ನೀಲಿ ಹೆಲ್ಮೆಟ್: ಈ ಬಣ್ಣದ ಹೆಲ್ಮೆಟ್ ಅನ್ನು ಎಲೆಕ್ಟ್ರಿಷಿಯನ್, ಟೆಕ್ನಿಕಲ್ ಆಪರೇಟರ್ ಗಳು ಹಾಕಿಕೊಳ್ಳುವ ಬಣ್ಣವಾಗಿದೆ. ಈ ಬಣ್ಣದ ಹೆಲ್ಮೆಟ್ ಧರಿಸಿರುವ ಕೆಲಸಗಾರರು ತುಂಬಾ ತರಬೇತಿ ಹೊದ್ನಿದವರು ಹಾಗೇನೇ ಎಕ್ಸ್ಪರ್ಟ್ ಎನ್ನುವ ಅರ್ಥ ಕೂಡ ನೀಡುತ್ತದೆ.
ಆರೆಂಜ್ ಹೆಲ್ಮೆಟ್: ಕೇಸರಿ ಬಣ್ಣದ ಹೆಲ್ಮೆಟ್ ಅನ್ನು ಲಿಫ್ಟಿಂಗ್ ಅಥವಾ ದೊಡ್ಡ ದೊಡ್ಡ ಸಾಮಗ್ರಿ ಮಷೀನ್ ಮೂಲಕ ಎತ್ತುವ ಕೆಲಸಗಾರರು ಹಾಕಿಕೊಳ್ಳುತ್ತಾರೆ. ಅಲ್ಲದೆ ಇದನ್ನು ಟ್ರಾಫಿಕ್ ಮಾರ್ಷಲ್ ಗಳು ಹಾಗು ಸಿಗ್ನಲ್ ನೀಡುವ ಕೆಲಸಗಾರರು ಕೂಡ ಹಾಕಿ ಕೊಳ್ಳುತ್ತಾರೆ. ದೊಡ್ಡ ದೊಡ್ಡ ಕ್ರೇನ್ ಗಳು ಸಿಮೆಂಟ್ ಹಾಗು ಕಬ್ಬಿಣದ ದೊಡ್ಡ ಗಾತ್ರದ ಸಾಮಾನು ಎತ್ತುವ ಕೆಲಸಗಾರರು ಈ ಹೆಲ್ಮೆಟ್ ಧಾರಣೆ ಮಾಡಿರುತ್ತಾರೆ.
ಬ್ರೌನ್ ಹೆಲ್ಮೆಟ್: ಕಂದು ಬಣ್ಣದ ಹೆಲ್ಮೆಟ್ ಅನ್ನು ವೆಲ್ಡರ್ ಗಳು ಅಥವಾ ಹೆಚ್ಚು ತಾಪಮಾನ ಅಂದರೆ ಬೆಂಕಿ ಮುಂದೆ ಕೆಲಸ ಮಾಡುವ ಕೆಲಸಗಾರರು ಹಾಕಿಕೊಳ್ಳುತ್ತಾರೆ. ಈ ವೆಲ್ಡಿಂಗ್ ಮಾಡುವ ಕೆಲಸಗಾರರಿಗೆ ಹೆಲ್ಮೆಟ್ ಜೊತೆಗೆ ಕಿಡಿ ಕಣ್ಣಿಗೆ ಹಾರದಂತೆ ರಕ್ಷಿಸಲು ಕನ್ನಡಕ ಕೂಡ ನೀಡಲಾಗುತ್ತದೆ. ಕೆಂಪು ಹೆಲ್ಮೆಟ್: ಈ ಕಟ್ಟಡ ನಿರ್ಮಾಣ ಜಗದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಇರುತ್ತಾರೆ. ಇವರು ಕೆಂಪು ಬಣ್ಣದ ಹೆಲ್ಮೆಟ್ ಧರಿಸಿರುತ್ತಾರೆ.
ಪಿಂಕ್ ಹೆಲ್ಮೆಟ್: ಈ ಬಣ್ಣದ ಹೆಲ್ಮೆಟ್ ಧರಿಸಿರುವ ಉದಾಹರಣೆ ಬಹಳ ಕಡಿಮೆ. ಆದರೆ ಈ ಹೆಲ್ಮೆಟ್ ಮಹಿಳೆಯರು ಕಟ್ಟಡ ನಿರ್ಮಾಣದಲ್ಲಿ ಧರಿಸುವ ಹೆಲ್ಮೆಟ್ ಆಗಿದೆ. ಹಾಗೇನೇ ಹೆಲ್ಮೆಟ್ ಒಂದು ವೇಳೆ ಯಾರಾದರೂ ಕಳೆದು ಹೋದರು ಕೂಡ ಈ ಬಣ್ಣದ ಹೆಲ್ಮೆಟ್ ಧಾರಣೆ ಮಾಡಿಕೊಳ್ಳುತ್ತಾರೆ ಕೆಲಸಗಾರರು. ಗ್ರೇಯ್ ಹೆಲ್ಮೆಟ್: ಬೂದು ಬಣ್ಣದ ಹೆಲ್ಮೆಟ್ ಕಟ್ಟಡ ನಿರ್ಮಾಣದ ಪ್ರದೇಶದಲ್ಲಿ ಯಾರಾದರೂ ವಿಸಿಟ್ ನೀಡಲು ಅಥವಾ ನೋಡಲು ಬರುವ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಈ ಜನರು ಅಲ್ಲಿ ಕೆಲಸಗಾರರು ಅಲ್ಲ, ಬದಲಾಗಿ ಕೆಲಸ ನೋಡಲು ಬರುವವರಾಗಿದ್ದಾರೆ. ಹಾಗಾಗಿ ಅಂತಹ ವ್ಯಕ್ತಿಗಳಿಗೆ ಈ ಹೆಲ್ಮೆಟ್ ನೀಡಲಾಗುತ್ತದೆ.