Kannada News: ರಾಷ್ಟೀಯ ಹೆದ್ದಾರಿಗಳಲ್ಲಿ ಮದ್ಯೆ ಈ ರೆಫ್ಲೆಕ್ಟರ್ ಗಳು ಯಾಕೆ ಇರುತ್ತದೆ? ಇದರ ಕೆಲಸ ಏನು ಎನ್ನುವುದರ ಮಾಹಿತಿ ತಿಳಿದುಕೊಳ್ಳಿ.
ಹೆದ್ದಾರಿಗಳ ಬದಿಯಲ್ಲಿ ಅಳವಡಿಸಿರುವ ಫಲಕಗಳನ್ನು ನೀವು ನೋಡಿರಬಹುದು. ಈ ಪ್ರತಿ ಫಲಕಗಳು ಸಹಾಯದಿಂದ ರಾತ್ರಿ ಗಾಡಿ ಓಡಿಸಲು ನಮಗೆ ಸುಲಭವಾಗುತ್ತದೆ. ಇವುಗಳು ಸ್ವಲ್ಪ ದೂರದಲ್ಲಿಯೇ ಇರಿಸಲಾಗುತ್ತದೆ. ಇದು ರಾತ್ರಿ ಇಡೀ ಮಿಟಿಕಿಸುತ್ತಲೇ ಇರುತ್ತದೆ. ಇದರಲ್ಲಿ ಬೆಳಕು ಎಲ್ಲಿಂದ ಬರುತ್ತದೆ? ವಿದ್ಯುತ್ ಇಲ್ಲದೆ ಇದು ಹೇಗೆ ಬೆಳಕು ನೀಡುತ್ತದೆ ಎಂದು ನಿಮಗೂ ಕುತೂಹಲ ಕೆರಳಿಸಿರಬಹುದು. ಪ್ರತಿಪಾಲಕಗಳು ರಾತ್ರಿ ಕಾಣುವಷ್ಟು ಸಂಕೀರ್ಣವಾಗಿದೆ, ಅವುಗಳು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ನಾವು ನಿಮಗೆ ಹೇಳುತ್ತೇವೆ.
ರಸ್ತೆ ಬದಿಯಲ್ಲಿ ಕಾಣಸಿಗುವ ಈ ಈ ರೋಡ್ ಲೈಟ್ ಗೆ ಸ್ಟಡ್ ಅಂತ ಕರೆಯುತ್ತಾರೆ. ಇದು ಸೈಕಲ್ ಪೆಡ್ಡಲ್ ತರ ಇರುತ್ತವೆ. ಈ ಪೆಡ್ಡಲ್ ಗಳ ಎರಡು ಕಡೆ ರೆಫ್ಲೆಕ್ಟರ್ ಗಳಿರುತ್ತವೆ. ಒಂದಕ್ಕೆ ಆಕ್ಟಿವ್ ರೆಫ್ಲೆಕ್ಟರ್ ಹಾಗು ಇನ್ನೊಂದಕ್ಕೆ ಪಸ್ಸಿವ್ ರೆಫ್ಲೆಕ್ಟರ್ ಅಂತ ಕರೆಯುತ್ತಾರೆ. ಕೆಲವು ರೆಫ್ಲೆಕ್ಟರ್ ಗಳಲ್ಲಿ ರೇಡಿಯಂ ತುಂಬಿದ್ದರೆ, ಇನ್ನು ಕೆಲವು ರೆಫ್ಲೆಕ್ಟರ್ LED ಇಂದ ಆಗಿರುತ್ತದೆ.
ಫಾಸ್ಸಿವ್ ರೆಫ್ಲೆಕ್ಟರ್ ರೇಡಿಯಂ ಇಂದ ಹೊಳೆಯುತ್ತದೆ. ಇವುಗಳ ಎರಡು ಕಡೆ ರೇಡಿಯಂ ಪಟ್ಟಿ ಕೂಡ ಇರುತ್ತದೆ. ಇದರ ಮೇಲೆ ಯಾವುದೇ ವಾಹನದ ಬೆಳಕು ಬಿದ್ದರೆ ಇದು ಹೊಳೆಯುತ್ತದೆ. ಈ ಫಾಸ್ಸಿವ್ ರೆಫ್ಲೆಕ್ಟರ್ ಗಳಿಗೆ ವಿದ್ಯುತ್ ಅವಶ್ಯಕತೆ ಇರುವುದಿಲ್ಲ. ಇನ್ನು ಆಕ್ಟಿವ್ ರೆಫ್ಲೆಕ್ಟರ್ LED ಇಂದ ಮಾಡಲಾಗಿದ್ದು, ಇವುಗಳಿಗೆ ಸೌರ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ. ಈ ಕಾರಣದಿಂದ ಇವುಗಳು ರಾತ್ರಿ ಹೊತ್ತು ಬ್ಲಿಂಕ್ ಆಗುತ್ತವೆ. ಇದನ್ನು ಸೌರ ಪನ್ನೆಲ್ ಮೂಲಕ ವಿದ್ಯುತ್ ನೀಡಲಾಗುತ್ತದೆ.
ಇನ್ನು ರಾತ್ರಿ ಸಮಯದಲ್ಲಿ ಈ ಲೈಟ್ ಗಳನ್ನೂ ಉರಿಸಲು ಯಾರು ಬೇಕಾಗುವುದಿಲ್ಲ. ಹಾಗೇನೇ ಬೆಳಗಿನ ಸಮಯದಲ್ಲಿ ಈ ಲೈಟ್ ಗಳನ್ನೂ ಯಾರು ಕೂಡ ಆಫ್ ಮಾಡಬೇಕಂತಿಲ್ಲ. ಈ ಲೈಟ್ಸ್ ಗಳಲ್ಲಿ ಒಂದು ಸೆನ್ಸರ್ ಇರುತ್ತದೆ. ಇದಕ್ಕೆ LDR ಅಂತ ಕರೆಯುತ್ತಾರೆ. ರಾತ್ರಿ ಆಗುತ್ತಲೇ ಈ ಲೈಟ್ ಗಳಲ್ಲಿ ಸೆನ್ಸರ್ ಮೂಲಕ ಲೈಟ್ ಗಳು ಆನ್ ಆಗುತ್ತವೆ. ಬೆಳಿಗ್ಗೆ ಆಫ್ ಆಗುತ್ತವೆ. ಈ ರೀತಿ ಹೆದ್ದಾರಿಯಲ್ಲಿ ಇರುವ ಸ್ಟಡ್ ಗಳು ಕೆಲಸ ಮಾಡುತ್ತವೆ.