Interesting Facts: ಏಟಿಎಂ ಕಾರ್ಡ್ ನಲ್ಲಿರುವ 16 ಅಂಕೆಗಳ ಯಾಕಿದೆ ಗೊತ್ತೇ? ಇದರ ಬಹು ಮುಖ್ಯ ಮಾಹಿತಿ ಇಂದೇ ತಿಳಿಯಿರಿ.

784

ATM Card : ಇಂದಿನ ದಿನಗಳಲ್ಲಿ ಜನರ ಬಳಿಯಲ್ಲಿ ಬ್ಯಾಂಕ್ ಅಕೌಂಟ್ ಪ್ರತಿಯೊಬ್ಬರ ಬಳಿ ಇದ್ದೆ ಇರುತ್ತದೆ. ಇದನ್ನು ಬಳಸಲು ಪ್ರತಿ ಬಾರಿ ಬ್ಯಾಂಕ್ ಗೆ ಹೋಗುವುದು ಅನಿವಾರ್ಯವಾಗಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಂಕ್ ಡಿಜಿಟಲೀಕರಣ ಮಾಡಿ ಏಟಿಎಂ ಕಾರ್ಡ್ ಎನ್ನುವ ಹೊಸ ವಿಧಾನ ಪರಿಚಯಿಸಿ ಇಂದು ಬ್ಯಾಂಕ್ ಗೆ ಪ್ರತಿ ವ್ಯವಹಾರಕ್ಕೂ ಅಲೆದಾಡುವ ಪರಿಸ್ಥಿತಿ ಇಲ್ಲವಾಗಿದೆ.

ಇಂದು ಡಿಜಿಟಲೀಕರಣದಿಂದ (Digitalized) ಮನೆಯಲ್ಲೇ ವ್ಯವಹಾರ ನಡೆಯುತ್ತದೆ. ಮೊಬೈಲ್ ಬ್ಯಾಂಕ್ ನಲ್ಲೂ ಕೂಡ ಇಂದು ಕ್ಷಣ ಮಾತ್ರದಲ್ಲಿ ಹಣ ವರ್ಗಾವಣೆ ಮಾಡಬಹುದಾಗಿದೆ. ಇದಕ್ಕೆಲ್ಲ ಮುಖ್ಯವಾಗಿ ಬೇಕಾಗಿರುವುದು ಒಂದು ಕಾರ್ಡ್ ಅದನ್ನು ಸಾಮಾನ್ಯ ಜನರು ಏಟಿಎಂ ಕಾರ್ಡ್ ಎನ್ನುತ್ತಾರೆ. ಇದನ್ನು ಬ್ಯಾಂಕಿಂಗ್ (Banking) ಪದದಲ್ಲಿ ಡೆಬಿಟ್ ಕಾರ್ಡ್ (Debit Card) ಎಂದು ಹೇಳುತ್ತಾರೆ.

ಇಂದು ಈ ಏಟಿಎಂ ಕಾರ್ಡ್ ಇಂದಾಗಿ ಜನರು ತಮ್ಮ ಬಳಿ ನಗದು ರೂಪದಲ್ಲಿ ಹಣವನ್ನು ಇಟ್ಟುಕೊಳ್ಳುವುದು ಬಹಳಷ್ಟು ಕಡಿಮೆ ಆಗಿದೆ. ಎಲ್ಲವನ್ನು ಮೊಬೈಲ್ ಮೂಲಕವೇ ನಡೆಯುತ್ತದೆ. ನಿಮ್ಮ ಬಳಿಯೂ ಈ ಡೆಬಿಟ್ ಕಾರ್ಡ್ (Debit Card) ಇದ್ದಾರೆ ಅದರ ಹಿಂದೆ 16 ಅಂಕೆಗಳನ್ನು ನೋಡಿರುತ್ತೀರಾ. ಇದು ಯಾವ ಕಾರಣಕ್ಕೆ ಇರುತ್ತದೆ ಎನ್ನುವ ಆಲೋಚನೆ ಬಂದು ಕೂಡ ಇರಬಹುದು ನಿಮ್ಮ ತಲೆಯಲ್ಲಿ. ಈ 16 ಅಂಕೆ ಬಹಳ ಮಹತ್ವ ಪೂರ್ಣವಾಗಿರುತ್ತದೆ. ಇದರ ಮಹತ್ವ ಏನೆಂಬುದನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ.

16 ಸಂಖ್ಯೆ ಯಾಕಿದೆ ಇಲ್ಲಿದೆ ಮಾಹಿತಿ:
೧.ಎಟಿಎಂ ಕಾರ್ಡ್‌ನ ಹಿಂಭಾಗದಲ್ಲಿ ಬರೆಯಲಾದ ಮೊದಲ ಸಂಖ್ಯೆಯು ಅದನ್ನು ನೀಡಿದ ಕಂಪನಿ ಅಥವಾ ಉದ್ಯಮಕ್ಕೆ ಸಂಬಂಧಿಸಿದೆ. ಈ ಸಂಖ್ಯೆ ಅಥವಾ ಕಂಪನಿಯನ್ನು ಮೇಜರ್ ಐಡೆಂಟಿಫೈಯರ್ ಕಂಪನಿ ಎಂದೂ ಕರೆಯಲಾಗುತ್ತದೆ. ಈ ಸಂಖ್ಯೆಯು ಉದ್ಯಮದಿಂದ ಉದ್ಯಮಕ್ಕೆ ಬದಲಾಗುತ್ತದೆ.

೨. ಎಟಿಎಂ ಕಾರ್ಡ್‌ನಲ್ಲಿ ಮೊದಲ ಅಂಕಿಯ ನಂತರ ಬರುವ ಮುಂದಿನ 5 ಅಂಕೆಗಳನ್ನು ವಿತರಕರ ಗುರುತಿನ ಸಂಖ್ಯೆ ಎಂದು ಕರೆಯಲಾಗುತ್ತದೆ. ಈ ಕಾರ್ಡ್ ಅನ್ನು ಯಾವ ಕಂಪನಿಗೆ ನೀಡಲಾಗಿದೆ ಎಂಬುದನ್ನು ಇದು ತೋರಿಸುತ್ತದೆ.

೩. ಎಟಿಎಂ ಕಾರ್ಡ್‌ನಲ್ಲಿರುವ (ATM Card) 7ನೇ ಅಂಕಿಯಿಂದ 15ನೇ ಅಂಕಿಯವರೆಗಿನ ಸಂಖ್ಯೆಗಳು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ನೇರ ಸಂಪರ್ಕವನ್ನು ಹೊಂದಿವೆ. ಇದು ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ ಅಲ್ಲದಿದ್ದರೂ, ಇದು ಖಂಡಿತವಾಗಿಯೂ ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಗೆ ಲಿಂಕ್ ಆಗಿದೆ.

೪. ಅದೇ ರೀತಿ ಎಟಿಎಂ ಕಾರ್ಡ್‌ನಲ್ಲಿ ಬರೆದಿರುವ 16ನೇ ಮತ್ತು ಕೊನೆಯ ಅಂಕೆ ಎಟಿಎಂ ಕಾರ್ಡ್‌ನ (ATM Card) ಸಿಂಧುತ್ವವನ್ನು ಹೇಳುತ್ತದೆ. ಇದನ್ನು ಚೆಕ್ಸಮ್ ಅಂಕೆ ಎಂದೂ ಕರೆಯುತ್ತಾರೆ. ಅಂದರೆ ಎಟಿಎಂ ಕಾರ್ಡ್‌ನ ಹಿಂಭಾಗದಲ್ಲಿ ಬರೆದಿರುವ 16 ಅಂಕಿಗಳಿಗೆ ವಿಶೇಷ ಮಹತ್ವವಿದೆ ಎಂದು ನೀವು ಈಗ ಅರ್ಥಮಾಡಿಕೊಂಡಿರಬೇಕು.

Leave A Reply

Your email address will not be published.