ಹಿಂದೂ ಸಂಪ್ರದಾಯದಲ್ಲಿ ಮೊದಲ ಪೂಜೆ ಯಾವಾಗಲೂ ಗಣೇಶನಿಗೆ ಅರ್ಪಿತ. ಯಾಕೆ ಗೊತ್ತಾ ಇದರ ಹಿಂದೆ ಇದೆ ಒಂದು ನೀತಿ ಪಾಠ
ನಮಸ್ಕಾರ ಸ್ನೇಹಿತರೇ ಹಿಂದೂ ಸಂಪ್ರದಾಯದಲ್ಲಿ ನೀವು ಹಲವಾರು ದೇವರುಗಳನ್ನು ಕಾಣಬಹುದು, ಹಲವಾರು ದೇವಾನು ದೇವತೆಗಳಿಗೆ ಪ್ರತಿಯೊಬ್ಬರು ಕೂಡ ಸಾಕಷ್ಟು ಪೂಜೆಗಳನ್ನು ಮಾಡುತ್ತಾರೆ. ಆದರೆ ಅದೇ ಸಮಯದಲ್ಲಿ ಯಾವುದೇ ಒಂದು ಶುಭ ಕಾರ್ಯ ಆರಂಭಿಸುವ ಮುನ್ನ ಹಿಂದೂ ಸಂಪ್ರದಾಯದಲ್ಲಿ ಮೊದಲ ಪೂಜೆಯನ್ನು ಗಣೇಶನಿಗೆ ಅರ್ಪಿಸಲಾಗುತ್ತದೆ, ಅಂದರೆ ಗಣೇಶನ ಪೂಜೆಯ ಮೂಲಕ ಶುಭ ಕಾರ್ಯವನ್ನು ಆರಂಭಿಸಲಾಗುತ್ತದೆ.
ಯಾಕೆ ಹೀಗೆ ಗಣೇಶನಿಗೆ ಯಾವಾಗಲೂ ಮೊದಲ ಪೂಜೆ ಯಾವ ಕಾರಣಕ್ಕೆ ಎಂಬುದನ್ನು ತಿಳಿದು ಕೊಳ್ಳಬೇಕಾದರೇ ನೀವು ಮಹಾ ಶಿವ ಪಾರ್ವತಿ ಹಾಗೂ ಸಹೋದರರಾದ ಗಣೇಶ ಮತ್ತು ಕಾರ್ತಿಕೇಯನ ನಡುವೆ ನಡೆದ ಒಂದು ಅರ್ಥ ಪೂರ್ಣ ಕಥೆಯನ್ನು ತಿಳಿದು ಕೊಳ್ಳಲೇಬೇಕು.
ಸ್ನೇಹಿತರೆ ಒಮ್ಮೆ ಮಾತೆ ಪಾರ್ವತಿ ಬಳಿ ಒಂದು ದೈವಿಕವಾದ ಜ್ಞಾನವನ್ನು ನೀಡುವಂತಹ ಹಣ್ಣು ಇರುತ್ತದೆ, ಇದನ್ನು ಗಣೇಶನಿಗೆ ನೀಡಬೇಕೋ ಅಥವಾ ಸುಬ್ರಹ್ಮಣ್ಯನಿಗೆ ನೀಡಬೇಕೋ ಎಂಬ ಪ್ರಶ್ನೆ ಉಂಟಾಗುತ್ತದೆ. ಆಗ ಮಹಾ ಶಿವನು ಇಡೀ ಪ್ರಪಂಚದಾದ್ಯಂತ ಮೂರು ಸುತ್ತುಗಳನ್ನು ಯಾರು ಮೊದಲು ಪೂರ್ಣಗೊಳಿಸುತ್ತಾರೆಯೋ ಅವರು ಈ ದೈವಿಕ ಹಣ್ಣನ್ನು ಪಡೆದು ಕೊಳ್ಳುತ್ತಾರೆ ಎಂಬ ನಿರ್ಧಾರಕ್ಕೆ ಬರಲಾಗಿತ್ತು.
ಸ್ಪರ್ಧೆ ಆರಂಭವಾದ ಕೂಡಲೇ ಸುಬ್ರಹ್ಮಣ್ಯನುನು ತನ್ನ ವಾಹನವಾದ ನವಿಲಿನ ಮೇಲೆ ಪ್ರಪಂಚದಾದಂತ್ಯ ಸುತ್ತಾಟವನ್ನು ಆರಂಭಿಸಿದನು, ಆದರೆ ಗಣೇಶನು ಶಿವ ಹಾಗೂ ಪಾರ್ವತಿ ರವರ ಸುತ್ತ ಮೂರು ಸುತ್ತು ಹಾಕಿ ನನ್ನ ಹೆತ್ತವರು ನನ್ನ ಜಗತ್ತು ಎಂದು ಹೇಳಿದರು, ಈ ಮೂಲಕ ಗಣೇಶನ ಓಟವನ್ನು ಗೆದ್ದನು ಹಾಗೂ ಜ್ಞಾನದ ದೈವಿಕ ಫಲವನ್ನು ಪಡೆದು ಕೊಂಡನು. ಅದಕ್ಕಾಗಿಯೇ ನಾವು ಯಾವುದೇ ಪೂಜೆಯ ಆರಂಭದಲ್ಲಿ ಗಣೇಶನನ್ನು ಪ್ರಾರ್ಥಿಸುತ್ತೇವೆ. ಅನುಕೂಲಕರ ಸುದ್ದಿಯನ್ನು ಆಹ್ವಾನಿಸಲು, ನಾವು ಕೈಗೊಳ್ಳುವ ಯಾವುದೇ ಉದ್ಯಮವನ್ನು ಯಶಸ್ವಿಯಾಗಿ ಪ್ರಾರಂಭಿಸಲು ಮತ್ತು ಅಂತಿಮವಾಗಿ ಪೂರ್ಣಗೊಳಿಸಲು ಅವರ ಆಶೀರ್ವಾದ ಪಡೆಯಲು ನಾವು ಅವರ ಹೆಸರಿನಲ್ಲಿ ಹಾಡುಗಳನ್ನು ಕೂಡ ಹಾಡುತ್ತೇವೆ. ಈ ಮೂಲಕ ನಾವು ಒಂದು ನೀತಿ ಪಾಠವನ್ನು ಕೂಡ ಕಲಿಯಬಹುದಾಗಿದೆ, ಏನೆಂದರೇ, ನಮ್ಮ ಹೆತ್ತವರು ಸದಾ ನಮ್ಮ ಜಗತ್ತಾಗಿರಬೇಕು ಎಂದು.