Proud: ಪೈಲಟ್ ಆಗಿ ತಾಯಿ ಕನಸು ನನಸು ಮಾಡಿದ ಮಗ. ತನ್ನದೇ ವಿಮಾನದಲ್ಲಿ ತಾಯಿಯನ್ನು ವಿದೇಶಕ್ಕೆ ಕರೆದೊಯ್ದ ಹೆಮ್ಮೆಯ ಮಗ.
ತಂದೆ ತಾಯಿಗಳು ಯಾವತ್ತೂ ತಮ್ಮ ಮಕ್ಕಳ್ಳನ್ನು ಪ್ರಗತಿ ಪಾಠದಲ್ಲಿ ಸಾಗುವುದನ್ನು ನೋಡಲು ಬಯಸುತ್ತಾರೆ. ಅವರಿಗೆ ಅವರ ಮಕ್ಕಳು ಅಲ್ಲದೆ ಬೇರಾವುದೂ ಮುಖ್ಯವಲ್ಲ. ಮಕ್ಕಳ ಸಣ್ಣ ಪುಟ್ಟ ಆಸೆಗಳನ್ನು ಈಡೇರಿಸಲು ತಮ್ಮ ಕನಸನ್ನೇ ತ್ಯಾಗ ಮಾಡುತ್ತಾರೆ. ನಾವು ಇಂದು ಏನೇ ಮಾಡಿದರು ಅವರ ತ್ಯಾಗಕ್ಕೆ ಸರಿ ಸಮವಾಗಲಾರೆವು. ಪಾಲಕರು ಕೂಡ ಕೆಲ ಕನಸನ್ನು ಹೊಂದಿರುತ್ತಾರೆ ಅದು ಅವರ ಮಕ್ಕಳ ಮೂಲಕ ಈಡೇರಿಸಿಕೊಳ್ಳಲು ಬಯಸುತ್ತಾರೆ. ಹೀಗೊಂದು ತಾಯಿ ಮಗನ ಕಥೆ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸುದ್ದಿ ಮಾಡುತ್ತಿದೆ.
ಅಮೀರ್ ರಶೀದ್ ವಾನಿ ಎನ್ನುವ ಯುವಕ ಸಾಮಾಜಿಕ ಜಾಲತಾಣದಲ್ಲಿ ಒಂದು ಚಿತ್ರ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ಪೈಲಟ್ ಸಮವಸ್ತ್ರದಲ್ಲಿ ವಿಮಾನ ಹರಿಸುತ್ತಿದ್ದಾರೆ. ಇದರೊಂದಿಗೆ ತಮ್ಮ ಬಾಲ್ಯದ ಚಿತ್ರ ಕೂಡ ಹಂಚಿಕೊಂಡಿದ್ದಾರೆ. ಇದಕ್ಕೆ ಶೀರ್ಷಿಕೆ ಬರೆದಿರುವ ಅಮೀರ್, ಚಿಕ್ಕದಿರುವಾಗ ನನ್ನ ತಾಯಿ ನನಗೆ ಒಂದು ಪತ್ರ ಬರೆದಿದ್ದರು. ಅದರಲ್ಲಿ ನೀನು ಪೈಲಟ್ ಆದಾಗ ನನ್ನನ್ನು ಮೆಕ್ಕಾಗೆ ಕರೆದುಕೊಂಡು ಹೋಗು ಎಂದು ಬರೆದಿದ್ದರು.
ಪೋಷಕರ ಆಶಯಕ್ಕಿಂತ ಮಕ್ಕಳಿಗೆ ಹೆಚ್ಚಿನದು ಬೇರೇನೂ ಇಲ್ಲ. ಅಮೀರ್ ರಶೀದಿ ಕೂಡ ತಾಯಿಯ ಕನಸನ್ನು ಪೂರೈಸಿದ್ದು ಚಿತ್ರದಲ್ಲಿ ಮಾಹಿತಿ ನೀಡುವಾಗ “ಇಂದು ನನ್ನ ತಾಯಿಯನ್ನು ಪವಿತ್ರ ಕಬ್ಬಗೆ ಕರೆದುಕೊಂಡು ಹೋಗುತ್ತಿದ್ದೇನೆ, ಆ ವಿಮಾನದ ಪೈಲಟ್ ಕೂಡ ನಾನೆ ಆಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಈ ಪೈಲಟ್ ಎಲ್ಲಿಯವರು ಏನು ಎಂದು ಇಲ್ಲಿತನಕ ತಿಳಿದು ಬಂದಿಲ್ಲ. ಆದರೆ ಈ ಕಥೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಡಿಸೆಂಬರ್ 26 ರಂದು ಮಾಡಿದ ಈ ಟ್ವೀಟ್ 23000 ಲೈಕ್ ಹಾಗು 2300 ಕ್ಕೂ ಹೆಚ್ಚು ರಿಟ್ವಿಟ್ ಪಡೆದಿದೆ.