Kannada BigBoss: ಬಿಗ್ ಬಾಸ್ ವಿನ್ನರ್ ಗೆ ಸೀಗಲಿದೆ 50 ಲಕ್ಷಕ್ಕಿಂತ ಜಾಸ್ತಿ ಹಣ. ಅಷ್ಟಕ್ಕೂ ಹೆಚ್ಚಾಗಿ ಸಿಗುವ ಹಣ ಎಷ್ಟು ಗೊತ್ತೇ?
ಕನ್ನಡ ಬಿಗ್ ಬಾಸ್ ಕರ್ನಾಟಕದಲ್ಲಿ ಅತಿ ಹೆಚ್ಚು ಜನಪ್ರಿಯ ರಿಯಾಲಿಟಿ ಶೋ ಅಂದರೆ ತಪ್ಪಾಗಲಾರದು. ಈಗಾಗಲೇ 100 ದಿನ ಕಳೆದು ಬಾಗ್ ಬಾಸ್ ಸೀಸನ್ 9 ಅನ್ನು ಇಂದು ಪೂರ್ತಿ ಮಾಡುತ್ತಿದೆ. ಹಾಗೇನೇ ಈ ಬಾರಿ ಫೈನಲ್ ಗೆ ಕಾಲಿಟ್ಟಿದ್ದು ತುಳುನಾಡಿನ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ. ಹಾಗು ದೀಪಿಕಾ ದಾಸ್. ಹಾಗೇನೇ ಮನೆಯಿಂದ ಕೊನೆಯದಾಗಿ ಎಲಿಮಿನೇಟ್ ಆಗಿದ್ದು ಎರಡನೇ ಬಾರಿ ಬಿಗ್ ಬಾಸ್ ಗೆ ಬಂದಂತಹ ದಿವ್ಯ ಉರುಡುಗ. ಅಂದರೆ ಶುಕ್ರವಾರ ಮನೆಯಿಂದ ಹೊರಗೆ ಬಂದಿದು 4 ನೇ ರನ್ನರ್ ಅಪ್ ಆಗಿದ್ದಾರೆ.
ಪ್ರತಿ ವರ್ಷದಂತೆ ಬಿಗ್ ಬಾಸ್ ಶನಿವಾರ ಹಾಗು ಭಾನುವಾರ ನಡೆದರೆ, ಈ ಬಾರಿ ಶುಕ್ರವಾರದಿಂದಲೇ ಇದೆ. ಪ್ರತಿ ವರ್ಷದಂತೆ ಈ ರಿಯಾಲಿಟಿ ಶೋ ಗೆಲ್ಲುವ ಅಭ್ಯರ್ಥಿಗೆ ಬರೋಬ್ಬರಿ 50 ಲಕ್ಷ ಸಿಗುತ್ತಿತ್ತು. ಇದೀಗ ಅದು ಬದಲಾವಣೆ ಆಗಿದೆ ಎಂದು ನ್ಯೂಸ್ ಮಂದ್ಯಮಗಳು ವರದಿ ಮಾಡುತ್ತಿದೆ. ವಿನ್ನರ್ ಗೆ ಒಂದು ಟ್ರೋಪಿ ಜೊತೆಗೆ ಬರೋಬ್ಬರಿ 60 ಲಕ್ಷ ಹಣ ಸಿಗಲಿದ್ದು ಈ ಬಾರಿ 10 ಲಕ್ಷ ಹೆಚ್ಚಾಗಿ ಸಿಗಲಿದೆ. ಆದರೆ ಈ 60 ಲಕ್ಷದಲ್ಲಿ ವಿನ್ನರ್ ಗೆ ಸಿಗುವುದು ಕೇವಲ 42 ಲಕ್ಷ ಮಾತ್ರ ಅಂದರೆ ೩೦% ತೆರಿಗೆ ಸರಕಾರಕ್ಕೆ ಪಾವತಿ ಮಾಡಬೇಕಾಗುತ್ತದೆ.
ಇನ್ನು ಅನೇಕ ವರದಿ ಪ್ರಕಾರ ಹಾಗೇನೇ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ವಿನ್ನರ್ ಎಂದು ವೈರಲ್ ಆಗುತ್ತಿದೆ. ಹಾಗೇನೇ ರೂಪೇಶ್ ರಾಜಣ್ಣ ಹಾಗು ದೀಪಿಕಾ ದಾಸ್ ಕೂಡ ಎಲಿಮಿನೇಟ್ ಆಗಿದ್ದು ರಾಕೇಶ್ ಅಡಿಗ ರನ್ನರ್ ಅಪ್ ಆಗಿದ್ದಾರೆ. ಈ ಸುದ್ದಿ ಎಷ್ಟು ಸತ್ಯ ಹಾಗು ಸುಳ್ಳು ಎಂದು ರವಿವಾರ ಎಲ್ಲರಿಗು ಗೊತ್ತಾಗಲಿದೆ. ಹಾಗೇನೇ ಈ ಬಾರಿ ಈ ಕಾರ್ಯಕ್ರಮ ಬಹಳ ಸದ್ದು ಮಾಡಿದ್ದೂ ಎಲ್ಲರಿಗು ಉತ್ತಮ ಮನರಂಜನೆ ನೀಡಿದೆ.