Note Ban – ನೋಟ್ ಬ್ಯಾನ್ ನಿರ್ಧಾರ ಸರಿಯೋ ತಪ್ಪೋ ಬಗೆಗೆ ಮಹತ್ತರ ತೀರ್ಪು ನೀಡಿದ ಸುಪ್ರೀಂ ಕೋರ್ಟ್? ವಿಪಕ್ಷಗಳಿಗೆ ಬಾರಿ ಮುಖಭಂಗ.

372

2016 ರ ನೋಟ್ ಬ್ಯಾನ್ ಎಲ್ಲರಿಗೂ ಗೊತ್ತೇ ಇದೆ. ಅದನ್ನು ಮರೆಯಲು ಸಾಧ್ಯವೇ ಇಲ್ಲ. ಹೌದು ಎಷ್ಟರ ಮಟ್ಟಿಗೆ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿತ್ತೆಂದು ಎಲ್ಲರಿಗೂ ಗೊತ್ತು. ಕಿಲೋ ಮೀಟರ್ ಗಟ್ಟಲೆ ಸಾಲು ನಿಂತು ನೋಟ್ ಪಡೆದ ಅನುಭವ ಸದಾ ಮನಸ್ಸಲ್ಲಿ ಇರುತ್ತದೆ. ಆದರೆ ಇದನ್ನು ಮಾಡಿದ ಉದ್ದೇಶ ಮಾತ್ರ ಇದನ್ನು ಒಂದು ಒಳ್ಳೆಯ ಅನುಭವ ಎಂದು ಭಾವಿಸುವ ಹಾಗೆ ಮಾಡುತ್ತದೆ. ಹಾಗಾದರೆ ಇದರ ವಿರುದ್ದವಾಗಿ ಹಲವು ಜನರು ಕೋರ್ಟ್ ಮೊರೆ ಹೋಗಿದ್ದರು.

ಕೇಂದ್ರ ಸರ್ಕಾರದ ಈ ನಿರ್ಧಾರದ ವಿರುದ್ಧ ಕೋರ್ಟ್ ಮೆಟ್ಟಿಲು ಏರಿ ನ್ಯಾಯಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಇದೀಗ ಅದರ ತಿರಪ್ಪನ್ನು ನೀಡಿದ್ದು ಅರ್ಜಿ ಸಲ್ಲಿಸಿದ ಜನರಿಗೆ ತೀರಾ ಮುಖ ಭಂಗ ಆಗಿದೆ. ಕೇಂದ್ರ ಸರ್ಕಾರದ ಈ ನಿಯಮವನ್ನು ಕೋರ್ಟ್ ಎತ್ತಿ ಹಿಡಿದಿದೆ. ನೋಟ್ ಬ್ಯಾನ್ ಬಗೆಗಿನ ನಿರ್ಧಾರ ಸರಿಯಾಗಿದೆ. ಮತ್ತು ಇದು RBI ಮತ್ತು ಕೇಂದ್ರ ಸರ್ಕಾರದ ನಿರ್ಧಾರ ಇದರ ಮಧ್ಯ ಪ್ರವೇಶ ಸುಪ್ರೀಂ ಕೋರ್ಟ್ ಎಂದು ಕೂಡ ಮಾಡುವುದಿಲ್ಲ ಎಂದು 5 ಸದಸ್ಯರ ಪೀಠ ತೀರ್ಪು ನೀಡಿ ಅರ್ಜಿಗಳನ್ನು ವಜಾ ಮಾಡಿದೆ.

ಉತ್ತಮ ಉದ್ದೇಶದಿಂದ ಮಾಡಿರುವ ಕಾರ್ಯಕ್ಕೆ ಸಾವಜನಿಕರು ಬೆಂಬಲ ಸೂಚಿಸಿದ್ದು. ಇದೀಗ ಕೇಂದ್ರ ಸರ್ಕಾರ ಕೂಡ ಈ ತೀರ್ಪು ನೀಡುವ ಮೂಲಕ ಬೆಂಬಲ ಸೂಚಿಸಿದೆ. ಇದರಿಂದಾಗಿ ಸಾಮನ್ಯ ದುಡಿಯುವ ವರ್ಗಕ್ಕೆ ಯಾವುದೇ ನಷ್ಟ ಆಗಿಲ್ಲ ಬದಲಿಗೆ ಕಪ್ಪು ಹಣ ಕೂಡಿಟ್ಟ ಟ್ಯಾಕ್ಸ್ ತಪ್ಪಸಿ ಹಣ ಸಂಪಾದನೆ ಮಾಡಿದ್ದ ಜನರಿಗೆ ಮಾತ್ರ ತುಂಬಾ ಸಮಸ್ಯೆ ಆಗಿದೆ. ಅದೇನೇ ಇರಲಿ ಸರಕಾರ ಜನಪರ ಕಾರ್ಯ ಮಾಡಿದರೆ ಎಲ್ಲರ ಬೆಂಬಲ ಸಿಗುತ್ತದೆ. ಹಾಗೇನೇ ವಿಪಕ್ಷಗಳು ಜನರ ಸಮಸ್ಯೆ ಆಲಿಸಿ ಅದರ ಮೇಲೆ ಸರಕಾರದ ಮೇಲೆ ಒತ್ತಡ ಹಾಕಿದರೆ ಒಳಿತು ಎನ್ನುವುದು ನಮ್ಮ ಅಭಿಪ್ರಾಯ.

Leave A Reply

Your email address will not be published.